BBMP ಕಸದ ಲಾರಿಗೆ ಸಿಲುಕಿ ಟೆಕ್ಕಿಗಳ ಸಾವು ಪ್ರಕರಣ.. ಚಾಲಕನನ್ನು ಬಂಧಿಸಿದ ಪೊಲೀಸರು

author-image
AS Harshith
Updated On
BBMP ಕಸದ ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು.. ಮೃತ ಶಿಲ್ಪಾ ಯಾರು..?
Advertisment
  • ಲಾರಿ- ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ-ಯುವತಿ
  • ಕೆ.ಆರ್ ಸರ್ಕಲ್ ಬಳಿ ನಡೆದ ಅಪಘಾತ.. ಅಪಘಾತದ ಬಳಿಕ ಚಾಲಕ ಪರಾರಿ
  • ಮಗಳಿಗೆ ಮದುವೆ ಮಾತುಕತೆ ಪ್ರಸ್ತಾಪವಾಗಿತ್ತು.. ಬೆಳಗ್ಗೆ ಕರೆ ಮಾಡಿದವಳು ರಾತ್ರಿ ಇಲ್ಲ

ಬೆಂಗಳೂರು: ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ದುರ್ಮರಣ ಪ್ರಕರಣ ಸಂಬಂಧಿಸಿದಂತೆ ಬಿಬಿಎಂಪಿ ಕಸದ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಶಿವಶಂಕರ್ (38) ಬಂಧಿತ ಲಾರಿ ಚಾಲಕ.

ಹಲಸೂರು ಗೇಟ್ ಸಂಚಾರ ಪೊಲೀಸರಿಂದ ಶಿವಶಂಕರ್ ಬಂಧನವಾಗಿದೆ. ನಿನ್ನೆ ಸಂಜೆ ವೇಳೆಗೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಭಾನುವಾರ ರಾತ್ರಿ 9 ಗಂಟೆಗೆ ಕೆ ಆರ್ ಸರ್ಕಲ್ ಬಳಿ ಕಸದ ಲಾರಿ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಪ್ರಶಾಂತ್​​ (25) ಮತ್ತು ಶಿಲ್ಪ (25) ಸಾವನ್ನಪ್ಪಿದ್ದರು. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡ್ತಿದ್ದರು.

publive-image

ಇದನ್ನೂ ಓದಿ: 250 ಅಡಿ ಆಳದ ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಆರೋಗ್ಯ ಸ್ಥಿತಿ ಗಂಭೀರ

ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿ ನಿವಾಸಿ. ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ ವೆಂಕಟರಾಮ ರೆಡ್ಡಿ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳು. ಆಕೆಯ ಮದುವೆ ತಯಾರಿ ಕೂಡ ನಡೀತಿತ್ತು. ಭಾನುವಾರ ಬೆಳಗ್ಗೆ ಕೂಡ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು. ಆದರೆ ಅದೇ ದಿನ ಸಂಜೆ ಹೊತ್ತಿಗೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಆಲಿಯಾ ಮುದ್ದು ಮಗಳನ್ನು ಕಂಡು ಫ್ಯಾನ್ಸ್ ಫಿದಾ: ಮಿನಿ ಆಲೂ ಅಂತಿರೊದೇಕೆ ಅಭಿಮಾನಿಗಳು?

ಅಪಘಾತದ ಬಳಿಕ ಲಾರಿ ಚಾಲಕ ಶಿವಶಂಕರ್ ಪರಾರಿಯಾಗಿದ್ದನು. ಸದ್ಯ ಪೊಲೀಸರು ಶಿವಶಂಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment