/newsfirstlive-kannada/media/post_attachments/wp-content/uploads/2024/04/BBMP.jpg)
ಬಿಬಿಎಂಪಿ ಯುಗಾಂತ್ಯವಾಗಿದೆ. ಬಿಬಿಎಂಪಿ ಅನ್ನೋ ಹೆಸರು ಬೆಂಗಳೂರಿಗರ ಜನಮಾನಸದಿಂದ ದೂರವಾಗಲಿದೆ. ಇಂದಿನಿಂದ ‘ಗ್ರೇಟರ್ ಬೆಂಗಳೂರು’ ಉದಯಿಸಲಿದ್ದು, ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ದೊಡ್ಡದಾಗುತ್ತಿದೆ.
ಇಂದಿನಿಂದ ಬೆಂಗಳೂರು ಗ್ರೇಟರ್ ಬೆಂಗಳೂರು ಆಗಲಿದ್ದು, ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರು ಕೇಂದ್ರ, ಕೇಂದ್ರ ಉತ್ತರ, ಬೆಂಗಳೂರು ದಕ್ಷಿಣ ಈ ರೀತಿಯಲ್ಲಿ ಮೂರು ಪಾಲಿಕೆಗಳಾಗಿ ವಿಸರ್ಜನೆಯಾಗಲಿದೆ. ಜೊತೆಗೆ ಬಿಬಿಎಂಪಿ ಅನ್ನೋ ಹೆಸರು ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
ಕಾಯ್ದೆಯ ಪ್ರಕಾರ ಮೂರು ಇಲ್ಲವೇ ಐದು ಪಾಲಿಕೆಯನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಕೇಂದ್ರ, ಗ್ರೇಟರ್ ಬೆಂಗಳೂರು ಉತ್ತರ, ಗ್ರೇಟರ್ ಬೆಂಗಳೂರು ದಕ್ಷಿಣ ಹೀಗೆ ನಾಮಕರಣ ಮಾಡುವ ಸಾಧ್ಯತೆ ಇದೆ. ಜಿಬಿಎ ಆಡಳಿತಾಧಿಕಾರಿ ಅಧಿಕಾರ ಚಲಾಯಿಸಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಲಿದ್ದಾರೆ. ಉಳಿದಂತೆ ಸ್ಥಳೀಯ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳು ಮುಖ್ಯಸ್ಥರು ಸದಸ್ಯರಾಗಿರಲಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಲುಂಗಿಯಲ್ಲಿ ದೇಶ ಬಿಟ್ಟು ಪರಾರಿಯಾದ ಮಾಜಿ ಅಧ್ಯಕ್ಷ..! ಏನಾಯ್ತು ಇವರಿಗೆ..?
ಗ್ರೇಟರ್ ಬೆಂಗಳೂರಿನಿಂದ ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ಹಿರಿದಾಗಲಿದೆ. ನಗರದ ಕೈಗಾರಿಕಾ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಅತ್ತಿಬೆಲೆ, ಬಾಗಲೂರು, ಬೊಮ್ಮಸಂದ್ರ, ಹೆಸರಘಟ್ಟ, ಹಾರೋಹಳ್ಳಿ, ದಾನಸಪುರ, ಕುಂಬಳಗೋಡು ಸೇರಿದಂತೆ ಹಲವು ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ. ಗ್ರೇಟರ್ ಬೆಂಗಳೂರಿನಲ್ಲಿ ಹಲವು ಬದಲಾವಣೆ ಸಾಧ್ಯತೆ ಇದ್ದು,ಕಟ್ಟಡಗಳ ಗಾತ್ರ, ಎತ್ತರ ನಿಯಮಗಳು ಬದಲಾಗೀ ಸಾಧ್ಯತೆ ಇದೆ.
2007 ರಲ್ಲಿ ರಚನೆಯಾಗಿದ್ದ ಬಿಬಿಎಂಪಿಯ 2010 ರಲ್ಲಿ ಸ್ಥಳೀಯ ಚುನಾವಣೆಗಳು ನಡೆದಿತ್ತು. ಇಂತಹ ಬಿಬಿಎಂಪಿ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಜಾರಿಯಾಲಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಇಂತಹ ಟೈಂನಲ್ಲಿ ಗ್ರೇಟರ್ ಬೆಂಗಳೂರಿನ ಆಡಳಿತದ ಬಗ್ಗೆ ಕುತೂಹಲ,ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ.
ಇದನ್ನೂ ಓದಿ: Breaking: ಪಾಕ್ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ