/newsfirstlive-kannada/media/post_attachments/wp-content/uploads/2025/06/BNG_AKSHAY_BIKE_1.jpg)
ಬೆಂಗಳೂರಲ್ಲಿ ಸಾಲು ಸಾಲು ಮರ ಬಿದ್ದು ಅವಾಂತರಗಳಾದ್ಮೇಲೆ ಈಗ ಪಾಲಿಕೆ ಕಣ್ಬಿಟ್ಟಂತೆ ಕಾಣ್ತಿದೆ. ಮರದ ಕೊಂಬೆಯೊಂದು ಅಕ್ಷಯ್ ಎಂಬ ತರುಣನ ಜೀವ ಬಲಿ ಪಡೆದಿದೆ. ಈ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ ಹೊಸ ಆದೇಶಗಳನ್ನ ಜಾರಿ ಮಾಡಿದೆ.
ಮರಗಳಿಗೆ ಗೈಡ್ಲೈನ್ಸ್!
- ಅವೈಜ್ಞಾನಿಕ ಕಾಮಾಗಾರಿಗಳು ಮರಗಳ ಆರೋಗ್ಯ ಮೇಲೆ ಪರಿಣಾಮ
- ಅಸಮರ್ಪಕ ಗಾಳಿ, ನೀರಿನ ಒಳಹರಿವಿನಿಂದ ಬೇರು ಪೋಷಣೆ ಆಗ್ತಿಲ್ಲ
- ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ದುಷ್ಪರಿಣಾಮಗಳಿಗೆ ಕಾರಣ ಆಗ್ತಿದೆ
- ಮಳೆ, ಗಾಳಿಯಲ್ಲಿ ಶಕ್ತಿ ಕುಂದಿ ಮರಗಳು, ರೆಂಬೆ-ಕೊಂಬೆಗಳು ಬೀಳುತ್ತಿವೆ
- ಕಾಂಕ್ರೀಟಿಕರಣದಿಂದ ಮರಗಳ ಬೇರುಮಟ್ಟದಲ್ಲೇ ಶಕ್ತಿ ಕಳೆದುಕೊಂಡಿವೆ
- ರಸ್ತೆ ಬದಿ ನೆಡಲಾದ ಮರಗಳ ಕುರಿತು ಬಿಬಿಎಂಪಿಯಿಂದ ಅಧಿಸೂಚನೆ
- 1 ಮೀ. ಸುತ್ತಳತೆಯಲ್ಲಿನ ಕಾಂಕ್ರೀಟ್, ಕಲ್ಲು, ಸಿಮೆಂಟ್ ಬ್ಲಾಕ್ಗಳ ತೆರವು
ಠಾಣೆಯಲ್ಲಿ ಅಕ್ಷಯ್ ಸಹೋದರ ಬೆನಕ್ ರಾಜ್ ದೂರು!
ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. RFO, ACF, DFO ಮತ್ತು ಇತರರ ಮೇಲೆ BNS ಕಾಯ್ದೆಯ ಸೆಕ್ಷನ್ 105 ಅಡಿ ಎಫ್ಐಆರ್ ಆಗಿದೆ.. BNS 105 ಕಾಯ್ದೆ ಅಂದ್ರೆ, ಸಾವಿಗೆ ಸಮಾನದ ಉದ್ದೇಶ ಅಥವಾ ಸಾವಿಗೆ ಕಾರಣವಾಗುವ ದೈಹಿಕ ಗಾಯ ಉಂಟುಮಾಡುವುದು ಅನ್ನೋ ಗಂಭೀರ ಕೇಸ್ ಇದಾಗಿದೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ಇತ್ತ, ಬದುಕಿದ್ದಾಗ ಬಂದಿಲ್ಲ.. ಸತ್ಮೇಲೆ ಏನ್ ಮಾಡ್ತೀರಾ ಅಂತ ಶಾಸಕ ರವಿ ಸುಬ್ರಮಣ್ಯಗೆ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ. ಅಕ್ಷಯ್ ಮೃತದೇಹದ ಎದುರಲ್ಲೇ ಶಾಸಕರ ಜೊತೆ ವಾಗ್ವಾದ ನಡೆದಿದೆ.. ಒಟ್ಟಾರೆ, ಮಳೆಗಾಲದಲ್ಲಿ ಗಾಳಿ-ಮಳೆಗೆ ದುರಂತ ಸಂಭವಿಸ್ತಿವೆ.. ಮಾನ್ಸೂನ್ಗೆ ಈ ಬಾರಿ ಬಿಬಿಎಂಪಿ ಸಿದ್ಧವೇ ಆಗಿರಲಿಲ್ಲ.
ಇದನ್ನೂ ಓದಿ: ಕೊಹ್ಲಿ-ರೋಹಿತ್ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ