newsfirstkannada.com

ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ.. ಬಿಗ್‍ಬಾಸ್ ಸ್ಪರ್ಧಿ ಮೇಲೆ BBMP ನೋಡಲ್ ಅಧಿಕಾರಿ ಫುಲ್​ ಗರಂ; ಯಾಕೆ?

Share :

Published December 4, 2023 at 6:12pm

    ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಸಾಕ್ಷಿ ಒದಗಿಸಲಿ

    ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ್ದೇನು?

    ಬಿಬಿಎಂಪಿ ನೋಡಲ್ ಅಧಿಕಾರಿ ಡಾ.ಪ್ರಯಾಗ್ ರಾಜ್ ಗರಂ ಆಗಿದ್ದೇಕೆ?

ಕನ್ನಡದ ಬಿಗ್​​ಬಾಸ್​ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿರುವ ಡ್ರೋನ್​​ ಪ್ರತಾಪ್ ಅವರು ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಟವನ್ನ ಮುಂದುವರೆಸಿದ್ದಾರೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ಗಳಲ್ಲಿ ಏರಿಳಿತಗಳು ಇದ್ರೂ ಕೂಡ ಜನರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಅತ್ಮವಿಶ್ವಾಸದಲ್ಲಿ ತನ್ನಿಂದ ಆದ ತಪ್ಪುಗಳ ಬಗ್ಗೆ ಬಿಗ್​ಬಾಸ್​ ಮನೆಯಲ್ಲಿ ಮಾತಾಡಿದ್ದಾರೆ. ಮುಖ್ಯವಾಗಿ ದುಡ್ಡಿನ ವಿಚಾರದಲ್ಲಿ ಮಾಡಿದ ಆರೋಪದ ಬಗ್ಗೆ, ಆಗಿನ ಪರಿಸ್ಥಿತಿ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ್ದೇನು?

ನನ್ನ ಜೀವನದ ಒಂದು ಭಾಗದ ಕತೆ ಎಲ್ಲರಿಗೂ ಗೊತ್ತಿದೆ. ಏನ್​ ಆಯ್ತು ಜೀವನದಲ್ಲಿ ಅಂತ. ನಾನು ಈ ದೇಶಬಿಟ್ಟು ಹೊರಗಡೆ ಹೋಗಿದ್ದೆ. ಅಂತಹ ಟೈಮ್​ನಲ್ಲಿ ಒಂದಿಷ್ಟು ಬ್ಲಾಗರ್ಸ್​ಗಳು ನನ್ನ ಜೊತೆ ಕೆಲಸ ಮಾಡಿದ್ದರು. ಅವರಲ್ಲಿ ಒಂದಷ್ಟು ಜನ ನನ್ನ ಬಗ್ಗೆ ಸ್ಟೋರಿಗಳನ್ನು ಕ್ರಿಯೇಟ್​ ಮಾಡ್ತಾ ಹೋಗಿದ್ದರು. ಡ್ರೋನ್​ ಪ್ರತಾಪ್​ ದುಡ್ಡು ತಗೊಂಡಿದ್ದಾನೆ ದುಡ್ಡು ತಗೊಂಡಿದ್ದಾನೆ ಅಂತ. ಆ ಕತೆಗೆ ಮೂರು ವ್ಯಕ್ತಿಗಳು ಸೇರಿಕೊಂಡು ರೆಕ್ಕೆ ಪುಕ್ಕ ಕಟ್ಟಿದ್ದರು. ಜೀವನದಲ್ಲಿ ಒಂದೆರಡು ಮಾತುಗಳನ್ನ ಬಾಯಿತಪ್ಪಿ ಹೇಳಿದ್ದೀನಿ. ಹೌದು, ನಾನು ಬಾಯಿ ತಪ್ಪಿ ಹೇಳಿದ್ದೀನಿ. ಆ ವಿಚಾರದಿಂದ ನಾನು ಸಾಕಷ್ಟು ಅನುಭವಿಸಿದ್ದೀನಿ. ಆ ಟೈಮ್​ನಲ್ಲಿ ನನಗೆ ಪ್ಯಾನಿಕ್​ ಆಗೋ ಪ್ರಾಬ್ಲಮ್​ ಸ್ಟಾರ್ಟ್​ ಆಯ್ತು.

ನಾನು​ ಸರಿಯಾಗಿ ಇದ್ದರೂ ನನಗೆ ಮಾತಾಡೋಕೆ ಆಗಲ್ಲ ಆ ಟೈಮ್​ನಲ್ಲಿ. ಫೈನಲ್​ ಆಗಿ ಯಾಕೆ ಭಯದಿಂದ ಕೂತ್ರಿ ಅಂತಾ ಬಂತು. ನನ್ನ ಕೈಗೆ ಕ್ವಾರಂಟೈನ್​ ಸಿಂಬಲ್​ ಹಾಕಿದ್ರು ಎತ್ತಿ ತೋರಿಸಿದೆ. ನಾನು ಯಾರಿಗೂ ಹೆದರಿ ಕೂತಿಲ್ಲ. ನನ್ನ ಕೈಗೆ ಕ್ವಾರಂಟೈನ್​ ಸಿಂಬಲ್​ ಹಾಕಿದ್ದಾರೆ. ನನಗೆ ಏನೂ ಮಾಡೋಕೆ ಆಗುತ್ತಿಲ್ಲ. ಅದಕ್ಕೆ ನಾನು ಇಷ್ಟು ದಿವಸ ಬಂದಿರಲಿಲ್ಲ ಅಂತ. ಅಷ್ಟರಲ್ಲಿ ಆಗ ತಾನೇ ಇಂಟರ್​ವ್ಯೂವ್​ ಆಗಿತ್ತು. ಬೆಂಗಳೂರು ಬಿಟ್ಟು ನಮ್ಮ ಸ್ನೇಹಿತರು ಇದ್ದ ಚಿಕ್ಕಮಗಳೂರು ಕಡೆಗೆ ಹೊರಟೆ. ನನ್ನ ಬಳಿ ಏನೂ ಇರಲಿಲ್ಲ. ಆಗ ಹಬ್ಬಿಸಿದ್ರು ಹೊಸ ಕತೆನಾ. ಬೆಂಗಳೂರಿನಲ್ಲಿ ಕ್ವಾರಂಟೈನ್​ ಆಗಬೇಕಾಗಿತ್ತು. ನನ್ನ ಅಪಾರ್ಟಮೆಂಟ್​ ಬೀಗ ಒಡೆದು ಓಪನ್​ ಮಾಡಿದ್ರು. ಒಳಗಡೆ ಎಲ್ಲಾ ವಿಡಿಯೋ ಮಾಡ್ಕೊಂಡ್ರು ಪ್ರತಾಪ್​ ಇಲ್ಲ ಅಂತ. ನನಗೆ ಯಾವ ವ್ಯಕ್ತಿ ಈ ರೀತಿ ಮಾಡಿದ್ದಾನೆ ಅಂತಾ ಗೊತ್ತು. ಇದನ್ನೆಲ್ಲಾ ಮನಸ್ಸಲ್ಲಿ ಇಟ್ಟುಕೊಂಡು ಇಲ್ಲಿಗೆ ಬಂದ್ಮೇಲೆ ಹೆಂಗೋ ಪರಿಚಯ ಆಯ್ತು ಎಂದು ಒಂದೊಂದಾಗಿ ಹೇಳಿಕೊಂಡಿದ್ದಾರೆ.

ಬಿಗ್‍ಬಾಸ್ ಸ್ಪರ್ಧಿಯಾದ ಡ್ರೋನ್​​ ಪ್ರತಾಪ್‍ ಅವರು ಕ್ವಾರಂಟೈನ್​ನಲ್ಲಿ ಆದ ಘಟನೆ ಬಗ್ಗೆ ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ನನ್ನ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಈತ ಹೇಗಿದ್ರೂ ಸುಳ್ಳು ಹೇಳ್ತಾನೆ. ಇವನು ಹೇಳೋದೇ ಬರೀ ಸುಳ್ಳು. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ಟರು. ಹುಚ್ಚ ಅಂತಾ ಪೇಪರ್​ಗೆ ಸಹಿಹಾಕು ಅಂತಾ ಹೇಳಿದ್ದರು ಎಂದು ಡ್ರೋನ್​​ ಪ್ರತಾಪ್ ಆರೋಪ ಮಾಡಿದ್ದರು.

ಬಿಬಿಎಂಪಿ ಅಧಿಕಾರಿ ಡಾ.ಪ್ರಯಾಗ್ ರಾಜ್ ಗರಂ ಆಗಿದ್ದೇಕೆ?

ಬಿಗ್​​​ಬಾಸ್ ಮನೆಯಲ್ಲಿ ಈ ರೀತಿ ಗಂಭೀರ ಆರೋಪ ಮಾಡಿದ್ದಕ್ಕೆ ಡ್ರೋನ್​​ ಪ್ರತಾಪ್ ಮೇಲೆ ​​ಬಿಬಿಎಂಪಿ ನೋಡಲ್ ಅಧಿಕಾರಿ ​​ಕೆಂಡಾಮಂಡಲರಾಗಿದ್ದಾರೆ. ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ. ಆತನಿಗೆ ನಾನು ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಆತನ ತಲೆಯ ಮೇಲೆ ಹೊಡೆದಿಲ್ಲ. ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಒಂದೇ ಒಂದು ಸಾಕ್ಷ್ಯ ಒದಗಿಸಲಿ. ಆತನ ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತೇನೆ ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಡಾ.ಪ್ರಯಾಗ್ ರಾಜ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ.. ಬಿಗ್‍ಬಾಸ್ ಸ್ಪರ್ಧಿ ಮೇಲೆ BBMP ನೋಡಲ್ ಅಧಿಕಾರಿ ಫುಲ್​ ಗರಂ; ಯಾಕೆ?

https://newsfirstlive.com/wp-content/uploads/2023/12/bigg-boss-2023-12-04T175818.372.jpg

Load More