Advertisment

Reels​​ ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್​, ಮಿಸ್​ ಮಾಡ್ಬೇಡಿ

author-image
AS Harshith
Updated On
Reels​​ ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್​, ಮಿಸ್​ ಮಾಡ್ಬೇಡಿ
Advertisment
  • ಶಾಲಾ ಮಕ್ಕಳೂ ಸಹ ರೀಲ್ಸ್​ ಮಾಡಿ ಹಣ ಗಳಿಸಬಹುದು!
  • ರೀಲ್ಸ್​ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ ಇದೆ ಬಹುಮಾನ
  • ಅತಿ ಹೆಚ್ಚು ರೀಲ್ಸ್​ ಮಾಡಿದ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ

ಬೆಂಗಳೂರು: ನೀವು ರೀಲ್ಸ್​ ಪ್ರಿಯರೇ? ನಿಮಗೂ ರೀಲ್ಸ್​ ಮಾಡುವ ಹವ್ಯಾಸವಿದೆಯಾ? ಹಾಗಿದ್ರೆ ತಡ ಯಾಕೆ? ಬಿಬಿಎಂಪಿ ನಿಮಗೆಂದೇ ಭರ್ಜರಿ ಆಫರ್ ತೆರೆದಿಟ್ಟಿದೆ. ಒಂದು ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ.

Advertisment

ಬಿಬಿಎಂಪಿ ಆರೋಗ್ಯ ಇಲಾಖೆ ರೀಲ್ಸ್ ಮಾಡಿ ಒಂದು ಲಕ್ಷಾ ಗೆಲ್ಲಿ ಎಂಬ ಸುವರ್ಣಾವಕಾಶವನ್ನು ನೀಡಿದೆ. ಡೆಂಘೀ ಹೆಚ್ಚಳ ಹಿನ್ನೆಲೆ ರೀಲ್ಸ್ ಮೂಲಕ ಡಿಂಘೀ ವಾರಿಯರ್ ಆಗಲು ಬಿಬಿಎಂಪಿ ಅವಕಾಶ ಮಾಡಿಕೊಡುತ್ತಿದೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆ ಹಿನ್ನೆಲೆ, ಡೆಂಗ್ಯೂಗೆ ಕಡಿವಾಣ ಹಾಕಲು ಬಿಬಿಎಂಪಿ ಮನೆ ಮನೆ ಸರ್ವೇ ಮಾಡಿ ಜಾಗೃತಿ ಮೂಡಿಸುತ್ತಿದೆ. ಇದರ ಜೊತೆಗೆ ಅರಿವು ಮೂಡಿಸಲು ವಿಭಿನ್ನ ಕಾರ್ಯಕ್ರಮಕ್ಕೆ‌ ಉತ್ತೇಜನ ನೀಡುತ್ತಿದೆ. ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಪಾಲಿಕೆ ಬಂಪ‌ರ್ ಬಹುಮಾನ ಘೋಷಿಸಿದೆ.

Advertisment

ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ

ಪಾಲಿಕೆ ಸೋಷಿಯಲ್‌ ಮೀಡಿಯಾದಲ್ಲಿ ಡೆಂಗ್ಯೂ ಕುರಿತ ರೀಲ್ಸ್‌ಗಳನ್ನು ಆಹ್ವಾನಿಸಿದೆ. ಮೊದಲ ಐದು ಉತ್ತಮ ರೀಲ್ಸ್‌ಗಳಿ ತಲಾ 25 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದೆ. ಇನ್ನು ದ್ವಿತೀಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಪಡಿಸಿದೆ.

ಶಾಲಾ ಮಕ್ಕಳಿಗೂ ಬಂಪರ್ ಆಫರ್

ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ ಬಿಬಿಎಂಪಿ 35 ಸಾವಿರ ರೂಪಾಯಿ ಬಹುಮಾನದ ಆಫರ್‌ ಕೊಟ್ಟಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment