Advertisment

ಬೆಳಗ್ಗೆ ಮದುವೆ ಪ್ರಸ್ತಾಪ, ಸಂಜೆ ವೇಳೆಗೆ ಮಗಳೇ ಇಲ್ಲ.. BBMP ಲಾರಿಗೆ ಸಿಲುಕಿ ಕಣ್ಣು ಮುಚ್ಚಿದ ಯುವತಿ

author-image
AS Harshith
Updated On
ಬೆಳಗ್ಗೆ ಮದುವೆ ಪ್ರಸ್ತಾಪ, ಸಂಜೆ ವೇಳೆಗೆ ಮಗಳೇ ಇಲ್ಲ.. BBMP ಲಾರಿಗೆ ಸಿಲುಕಿ ಕಣ್ಣು ಮುಚ್ಚಿದ ಯುವತಿ
Advertisment
  • ಕೆ.ಆರ್​ ಸರ್ಕಲ್​​ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಸಾವು
  • ಮದುವೆ ನಿಶ್ಚಯವಾಗಿದ್ದ ಹೆಣ್ಣು ಮಗಳನ್ನು ಕಳೆದುಕೊಂಡ ಕುಟುಂಬ
  • ಮಗಳ ಮದುವೆ ಚಿನ್ನ ಮಾಡಿಸಿದ್ದ ಅಪ್ಪ.. ಸಂಜೆ ವೇಳೆಗೆ ಮಗಳೇ ಇಲ್ಲ

ಬೆಂಗಳೂರು: ಮದುವೆ ನಿಶ್ಚಯವಾಗಿದ್ದ ಹೆಣ್ಣು ಮಗಳೊಬ್ಬಳು ನಿನ್ನೆ ಕಸದ ಲಾರಿಯಡಿಗೆ ಸಿಲುಕಿ ದುರಂತವಾಗಿ ಸಾವನ್ನಪ್ಪಿದ ಘಟನೆ ಕೆ.ಆರ್​ ಸರ್ಕಲ್​​ ಬಳಿ ನಡೆದಿದೆ. ಬೆಳಗ್ಗೆ ಮದುವೆ ಬಗ್ಗೆ ಪ್ರಸ್ತಾಪವಾಗಿ ಸಂಜೆ ವೇಳೆಗೆ BBMP ಕಸದ ಲಾರಿಯಡಿಗೆ ಸಿಲುಕಿ ಶಿಲ್ಪ ಎಂಬಾಕೆ ಕೊನೆಯುಸಿರೆಳೆದಿದ್ದಾಳೆ.

Advertisment

ನಿನ್ನೆ ರಾತ್ರಿ 9 ಗಂಟೆಗೆ ಪ್ರಶಾಂತ್ (25) ಮತ್ತು ಶಿಲ್ಪ (25) ಬೈಕ್​ನಲ್ಲಿ ಚಲಿಸುತ್ತಿದ್ದ ವೇಳೆ BBMP ಕಸದ ಲಾರಿಯಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡ್ತಿದ್ದರು.

ಶಿಲ್ಪ ಆಂಧ್ರದ ಇಂದುಪುರ ನಿವಾಸಿ. ನಾಗವಾರದ ಪಿಜಿಯಲ್ಲಿ ವಾಸ ಮಾಡಿಕೊಂಡಿದ್ದಳು. ಈಕೆ ತಂದೆ ವೆಂಕಟರಾಮ ರೆಡ್ಡಿ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.

ಇದನ್ನೂ ಓದಿ: ಶಿರೂರು: ಇದು ನದಿಯಾಚೆಗಿನ ಕತೆ! ಕೊಚ್ಚಿ ಹೋಗುತ್ತಿರೋ 4 ಮಕ್ಕಳ ಜೀವ ಉಳಿಸಿದ ಪುಣ್ಯಾತ್ಮ ಈತ

Advertisment

ವೆಂಕಟರಾಮ ರೆಡ್ಡಿಗೆ ಒಟ್ಟು ಮೂವರು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳು. ಆಕೆಯ ಮದುವೆ ತಯಾರಿ ಕೂಡ ನಡೀತಿತ್ತು. ಆದರೆ ಅಷ್ಟರಲ್ಲಿ ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾಳೆ.

publive-image

ಇದನ್ನೂ ಓದಿ: ಬೆಂಗಳೂರು ಮಂದಿಗೆ ಕೊನೆಗೂ ಗುಡ್​ ನ್ಯೂಸ್​​.. ವಾಹನ ಸವಾರರು ಓದಲೇಬೇಕಾದ ಸ್ಟೋರಿ ಇದು..!

ತಂದೆ ವೆಂಕಟರಾಮ ರೆಡ್ಡಿ ಮಗಳ ಮದುವೆಗೆ ಚಿನ್ನವನ್ನು ಮಾಡಿಸಿಟ್ಟಿದ್ದನು. ಭಾನುವಾರ ಬೆಳಗ್ಗೆ ಕೂಡ ಮದುವೆ ಮಾತುಕತೆ ಪ್ರಸ್ತಾಪ ಆಗಿತ್ತು. ಆದರೆ ನಿನ್ನೆ ಸಂಜೆ ಹೊತ್ತಿಗೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ.

Advertisment

ಶಿಲ್ಪ ಮೃತದೇಹ ಬೌರಿಂಗ್ ಆಸ್ಪತ್ರೆ ಶವಾಗಾರದಲ್ಲಿದ್ದು, ಆಕೆಯನ್ನು ಕಾಣಲು ಪೋಷಕರು ಆಗಮಿಸಿದ್ದಾರೆ. ಶವಾಗಾರದ ಬಳಿ ಶಿಲ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment