Advertisment

ಮಗನಂತಿದ್ದ ಅಳಿಯನಿಗೆ ಇದ್ದ ಕೊರಗೇನು? ಆ ವಿಚಾರಕ್ಕೆ ಕೋರ್ಟ್​ ಮೊರೆಹೋಗಿದ್ರಂತೆ B.C ಪಾಟೀಲ್ ಅಳಿಯ

author-image
AS Harshith
Updated On
ಅಳಿಯನ ಆತ್ಮಹತ್ಯೆಗೆ ಮುನ್ನ ಪೊಲೀಸ್ರ ಜತೆ ಮಾತಾಡಿದ್ದ ಬಿ.ಸಿ ಪಾಟೀಲ್​​.. ಅಸಲಿಗೆ ನಡೆದಿದ್ದೇನು?
Advertisment
  • ಮಗನಂತಿದ್ದ ಅಳಿಯನನ್ನು ಕಳೆದುಕೊಂಡ ‘ಕೌರವ’ ಕಂಗಾಲು
  • ಇದೇ ವಿಚಾರಕ್ಕೆ ಕೋರ್ಟ್​ ಮೊರೆ ಹೋಗಿದ್ರಂತೆ ಪ್ರತಾಪ ಕುಮಾರ್
  • ಪ್ರತಾಪ ಕುಮಾರ್ ರಸ್ತೆ ಬದಿಯಲ್ಲಿ ಕ್ರಿಮಿನಾಶಕ ಔಷಧಿ ಕುಡಿದು ಅಸ್ವಸ್ಥ

ಮಾಜಿ ಸಚಿವ ಬಿ ಸಿ ಪಾಟೀಲ್ ಕುಟುಂಬಕ್ಕೆ ಅಕ್ಷರಶಃ ಬರಸಿಡಿಲು ಬಡಿದಿದೆ . ನೆಚ್ಚಿನ ಮಗಳ ಗಂಡ ಹಾಗೂ ಇಷ್ಟವಾದ ಸೋದರ ಅಳಿಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಇಡೀ ಕುಟುಂಬವೆ ಕಂಗಾಲಾಗಿ ಹೋಗಿದೆ. ನೋವಿನಲ್ಲಿರುವ ಬಿಸಿ ಪಾಟೀಲ್ ಕುಟುಂಬಕ್ಕೆ ಅತ್ಮೀಯರು ಹಾಗೂ ಗಣ್ಯರು ಧೈರ್ಯ ತುಂಬಿ ಸಾಂತ್ವಾನ ಹೇಳಿದ್ದಾರೆ. ಆದರೆ ಐಷಾರಾಮಿ ಜೀವನ ನಡೆಸುತ್ತಿದ್ದ ಅಳಿಯ ಸಾವಿಗೆ ಶರಣಾಗಿದ್ದು ಯಾಕೆ ಎನ್ನುವ ಹತ್ತು ಹಲವು ಪ್ರಶ್ನೆಗಳು ಇದೀಗ ಮೂಡಿವೆ.

Advertisment

ಮಗು ವಿಚಾರಕ್ಕೆ ಸಾವಿಗೆ ಶರಣಾದ್ರಾ ಬಿ.ಸಿ.ಪಾಟೀಲ್​ ಅಳಿಯ?

ಮಾಜಿ ಸಚಿವ ಬಿ.ಸಿ.ಪಾಟೀಲ್​ ಅವರ ಮಾತುಗಳನ್ನು ಕೇಳ್ತಿದ್ರೆ ನಿಜಕ್ಕೂ ಮನ ಕಲಕಿದಂತಾಗುತ್ತೆ.. ಯಾಕಂದ್ರೆ ಮಗನಂತಿದ್ದ ಅಳಿಯನನ್ನು ಕಳೆದುಕೊಂಡು ಬಿ.ಸಿ.ಪಾಟೀಲ್​ ಕಂಗಾಲಾಗಿದ್ದಾರೆ. ನೆಚ್ಚಿನ ಮಗಳ ಗಂಡ ಹಾಗೂ ಇಷ್ಟವಾದ ಸೋದರ ಅಳಿಯ ಆತ್ಮಹತ್ಯೆ ಮಾಡಿಕೊಂಡಿದ್ದು, ಬಿ.ಸಿ.ಪಾಟೀಲ್​ರನ್ನು ಅಕ್ಷರಶಃ ದುಃಖದ ಮಡುವಿನಲ್ಲಿ ನಿಲ್ಲಿಸಿದೆ.

publive-image

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ.. ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಸವಾರ

ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್ ಅಳಿಯ ಪ್ರತಾಪ ಕುಮಾರ್ ಚಿರ ಪರಿಚಿತ. ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಇದ್ದ ವ್ಯಕ್ತಿ. ಆದ್ರೆ ಆತ ಹೀಗೆ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ನಂಬಲಾಗದು. ಆದ್ರೆ ದುರ್ವಿಧಿ ಬಿ.ಸಿ.ಪಾಟೀಲರ ಮುದ್ದಿನ ಅಳಿಯ ಸಾವಿಗೆ ಶರಣಾಗಿದ್ದಾನೆ. ಹೊನ್ನಾಳಿ ಕೋಮರನಹಳ್ಳಿ- ಅರಕೆರೆ ರಸ್ತೆ ಬದಿಯಲ್ಲಿ ಕ್ರಿಮಿನಾಶಕ ಔಷಧಿ ಕುಡಿದು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇತ್ತ ಮಗನಂತಿದ್ದ ಪ್ರೀತಿಯ ಅಳಿಯನ್ನು ಕಳೆದುಕೊಂಡು ಮಾಜಿ ಸಚಿವ ಬಿ.ಸಿ.ಪಾಟೀಲ್​ ದಿಕ್ಕುತೋಚದಂತಾಗಿದ್ದಾರೆ. ಯಾಕಂದ್ರೆ, ಪ್ರತಾಪ್​ ಬಿಸಿ ಪಾಟೀಲ್​ಗೆ ಕೇವಲ ಅಳಿಯ ಮಾತ್ರವಲ್ಲ.. ಮಗನಂತೆ ಇದ್ದ. ಜೊತೆಗೆ ರಾಜಕೀಯದಲ್ಲೂ ಬಲಗೈಯಾಗಿದ್ದ. ಈ ರೀತಿ ಅದ್ಯಾಕೆ ಮಾಡಿಕೊಂಡ್ನೋ ಆ ದೇವರಿಗೆ ಗೊತ್ತು ಎಂದು ಬಿ.ಸಿ.ಪಾಟೀಲ್​ ಭಾವುಕರಾಗಿದ್ರು.

Advertisment

ಮಕ್ಕಳಾಗದ ಕೊರಗು ಇತ್ತು

ಇನ್ನು ಪ್ರತಾಪ್​ಗೆ ಮಕ್ಕಳಾಗಿಲ್ಲ ಎಂಬ ದೊಡ್ಡ ಕೊರಗು ಇತ್ತಂತೆ. ಇದರಿಂದ ಬೇಸತ್ತು ಹೋಗಿದ್ದ ಪ್ರತಾಪ್​, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕೋರ್ಟ್​ ಮೊರೆ ಹೋಗಿದ್ರಂತೆ. ಹಿರೇಕೆರೂರಿನ ಮಾವನ ಮನೆಯಲ್ಲಿ ವಾಸವಿದ್ದ ಪ್ರತಾಪ್ ಬಿ.ಸಿ ಪಾಟೀಲರ್ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಇನ್ನು ಹಿರೇಕೆರೂರು ಕ್ಷೇತ್ರದಲ್ಲಿ ಪ್ರತಾಪ್ ಕುರಿತು ಒಳ್ಳೆಯ ಅಭಿಪ್ರಾಯವೇ ಇದೆ. ಪ್ರತಾಪನನ್ನು ನೆನೆದು ಸ್ನೇಹಿತರು, ಕಾರ್ಯಕರ್ತರು, ಮನೆ ಕೆಲಸದವರು ಕಣ್ಣೀರು ಹಾಕಿದ್ದಾರೆ.

publive-image

ಇದನ್ನೂ ಓದಿ: ದರ್ಶನ್​​ ಗ್ಯಾಂಗ್​​ ಕೊಲೆ ಕೇಸಲ್ಲಿ ಸ್ಟಾರ್​ ಡೈರೆಕ್ಟರ್​​ಗೂ ಕಂಟಕ; ಪವಿತ್ರಾ ಆಪ್ತೆ ಬಗ್ಗೆ ಕೇಳಿ ಪೊಲೀಸ್ರೇ ಶಾಕ್​

ಇಂದು ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಪ್ರತಾಪ್​ ಅಂತ್ಯಕ್ರಿಯೆ

ಮೇಲ್ನೋಟಕ್ಕೆ ಇದು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಪ್ರತಾಪ್​ ಪಾರ್ಥೀವ ಶರೀರವನ್ನು ಸ್ವಗ್ರಾಮ ಕತ್ತಲಗೆರೆಗೆ ತರಲಾಯ್ತು. ಅಳಿಯನ ಪಾರ್ಥಿವ ಶರೀರಕ್ಕೆ ಮಾವ ಬಿ.ಸಿ.ಪಾಟೀಲ್ ಪೂಜೆ ಸಲ್ಲಿಸಿದ್ರು. ಈ ವೇಳೆ ಪ್ರತಾಪ್​ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ, ವೀರಶೈವ ಸಂಪ್ರದಾಯದಂತೆ, ಅವರ ತೋಟದಲ್ಲಿರುವ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.

Advertisment

publive-image

ಇದನ್ನೂ ಓದಿ: ಡಿ ಗ್ಯಾಂಗ್​ಗೆ ಭಾರೀ ಸಂಕಷ್ಟ.. ಪೊಲೀಸರ ಬಳಿಯಿದೆ ಮತ್ತೊಂದು ಬಲವಾದ ಸಾಕ್ಷಿ!

ಒಟ್ಟಾರೆ ಪ್ರತಾಪ್​ ಏಕಾಏಕಿ ಆತ್ಮಹತ್ಯೆ ಶರಣಗಾಗಿದ್ದೇಕೆ ಅನ್ನೋದು ನಿಗೂಢವಾಗಿದೆ. ಪ್ರತಾಪ್​ ಬಳಿ ಯಾವುದೇ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲ. ಸದ್ಯ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಅಸಲಿ ಕಾರಣವನ್ನು ಪತ್ತೆ ಹಚ್ಚುಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment