/newsfirstlive-kannada/media/post_attachments/wp-content/uploads/2024/06/dboss21.jpg)
ಹಾವೇರಿ: ರೇಣುಕಾಸ್ವಾಮಿ ಬರ್ಬರ ಕೊಲೆ ಸುದ್ದಿ ಹೇಳಿ ಇಡೀ ರಾಜ್ಯವೆ ಬೆಚ್ಚಿಬಿದ್ದಿದ್ದೆ. ಯುವಕನ ಕೊಲೆ ಕೇಸ್ನಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ನ ಕೃತ್ಯದ ಬಗ್ಗೆ ದಿನಕ್ಕೊಂದು ಸುದ್ದಿಗಳು ಬರುತ್ತಿದೆ. ಇದೀಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಮಾಜಿ ಸಚಿವ, ನಟ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ತಗಡು ಎಂದಿದ್ದ ದರ್ಶನ್ಗೆ ಟಾಂಗ್ ಕೊಟ್ಟ ರಾಬರ್ಟ್ ನಿರ್ಮಾಪಕ.. ಉಮಾಪತಿ ಗೌಡ ಏನಂದ್ರು?
ಇನ್ನು ಇದೇ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಾನು ಕೃಷಿ ಸಚಿವನಿದ್ದಾಗ ದರ್ಶನ್ ಕೃಷಿ ಇಲಾಖೆ ರಾಯಭಾರಿ ಆಗಿದ್ದರು. ಆಗ ಅವರು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ಪ್ರಸಿದ್ಧ ನಟ ಆಗಿರೋ ಕಾರಣ ರೈತರಿಗೆ ಶಕ್ತಿ ತುಂಬೋಕೆ ಅಂತ ರಾಯಭಾರಿ ಮಾಡಿದ್ವಿ. ರೇಣುಕಾಸ್ವಾಮಿ ಹತ್ಯೆ ದುರದೃಷ್ಟಕರ. ಇದು ಕ್ಷಮಿಸಲಾಗದ ಕೃತ್ಯ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಯಾರೂ ಕಾನೂನಿಗಿಂತ ದೊಡ್ಡವರಿಲ್ಲ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದರು.
ಜೊತೆಗೆ ನಟ ಬ್ಯಾನ್ ಮಾಡುವ ವಿಚಾರದ ಬಗ್ಗೆ ಮಾತಾಡಿದ ಅವರು, ಬ್ಯಾನ್ ಮಾಡೋಕೆ ಆಗೊಲ್ಲ ಎಂದು ಚಿತ್ರರಂಗದವರೆ ಹೇಳಲಾಗಿದೆ. ತೀರ್ಪು ಬರುವ ತನಕ ತೀರ್ಮಾನ ಮಾಡೊಲ್ಲ ಎನ್ನಲಾಗಿದೆ. ಈಗಾಗಲೇ ಅವರು ಜೈಲಿನಲ್ಲಿ ಇದಾರೆ. ಅವರು ಕೇವಲ ಆರೋಪಿಯಷ್ಟೆ ಅಪರಾಧಿಗಳಲ್ಲ. ಯಾರು ಆರೋಪಿಗಳು ಇದಾರೆ ಅವರಿಗೆ ಶಿಕ್ಷೆಯಾಗಿ ನೊಂದವರಿಗೆ ಶಿಕ್ಷೆಯಾಗಬೇಕು. ನಾನು ಪೋಲಿಸ್ ಅಧಿಕಾರಿ ಆಗಿದ್ದವನು ದೂರಿನಲ್ಲಿ A1, A2 ಆರೋಪಿಗಳಿಂದ A17, A18ಗಳ ಸ್ಥಾನಕ್ಕೆ ಅದಲು ಬದಲು ಮಾಡೋಕೆ ಆಗೋದಿಲ್ಲ. ತನಿಖೆಯಲ್ಲಿ ಯಾರ ಕೈವಾಡ ಇದೆ ಎಂದು ಚಾರ್ಜ್ ಶೀಟ್ನಲ್ಲಿ ನಮೂದು ಆಗುತ್ತದೆ. ಕಲಾವಿದ ಹಾಗೂ ಸ್ವೇಹಿತನಾಗಿ ಸ್ವಲ ಮಟ್ಟಿಗೆ ಮಾತ್ರ ನನಗೆ ದರ್ಶನ ಗೊತ್ತು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ