ಆಟಗಾರರಿಗೆ BCCI ಮೂಗುದಾರ.. ‘10 ಪಾಯಿಂಟ್ಸ್​ ಪಾಲಿಸಿ’ಗೆ ಬೆಚ್ಚಿಬಿದ್ದ ಸ್ಟಾರ್​​ಗಳು..!

author-image
Ganesh
Updated On
ಮೊದಲ ಪಂದ್ಯ ಗೆದ್ದ ಖುಷಿಯಲ್ಲಿ ಭಾರತಕ್ಕೆ ಆಘಾತ; ಆಸ್ಟ್ರೇಲಿಯಾದಿಂದ ಗಂಭೀರ್ ದಿಢೀರ್ ವಾಪಸ್..!
Advertisment
  • ಹೆಚ್ಚು, ಕಮ್ಮಿ ಮಾತಾಡಿದ್ರೆ ಸಂಬಳ ಕಟ್, IPL ಆಡಂಗಿಲ್ಲ
  • PR, ವೈಯಕ್ತಿಕ ಸಿಬ್ಬಂದಿ, ಫ್ಯಾಮಿಲಿ ಕರ್ಕೊಂಡು ಹೋಗಂಗಿಲ್ಲ
  • ಒಟ್ಟಿಗೆ ಪ್ರಯಾಣ, ಫ್ಯಾಮಿಲಿ ಜೊತೆ ಬರ್ತೀನಿ ಅಂದ್ರೆ ಆಗಲ್ಲ

ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ 10 ಹೊಸ ನಿಯಮಗಳನ್ನು ಹೊರಡಿಸಿದೆ. ಪ್ರತಿಯೊಬ್ಬ ಆಟಗಾರನೂ ಪಾಲಿಸೋದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ ಬಿಸಿಸಿಐ ಕಠಿಣ ಶಿಕ್ಷೆ ಕೂಡ ನೀಡಬಹುದು.

ಶಿಕ್ಷೆ ಏನು..?

  • ಐಪಿಎಲ್​​ನಿಂದ ನಿಷೇಧ
  • ಸಂಬಳ ಕಡಿತ

ನಿಯಮಗಳು ಏನೇನು..?

ದೇಶೀಯ ಪಂದ್ಯಗಳಲ್ಲಿ ಆಡುವುದು ಕಡ್ಡಾಯ: ರಾಷ್ಟ್ರೀಯ ತಂಡದಲ್ಲಿ ಆಡುವ ಎಲ್ಲಾ ಆಟಗಾರರು ಬಿಸಿಸಿಐನ ಕೇಂದ್ರ ಗುತ್ತಿಗೆ ಲಿಸ್ಟ್​​ನಲ್ಲಿ ಬರುತ್ತಾರೆ. ಅವರೆಲ್ಲರೂ ದೇಶೀಯ ಕ್ರಿಕೆಟ್‌ನೊಂದಿಗೆ ನಿಯಮಿತ ಸಂಬಂಧ ಹೊಂದಿರಬೇಕು. ಅನಿವಾರ್ಯ ಕಾರಣಗಳಿಂದ ಆಡಲು ಸಾಧ್ಯವಾಗಿದ್ರೆ ಮುಖ್ಯ ಆಯ್ಕೆಗಾರ ಅಗರ್ಕರ್ ಅನುಮತಿ ಪಡೆಯಬೇಕು.

ಎಲ್ಲಾ ಆಟಗಾರರು ಒಟ್ಟಿಗೆ ಪ್ರಯಾಣ: ಎಲ್ಲಾ ಆಟಗಾರರು ಪಂದ್ಯ ಅಥವಾ ಅಭ್ಯಾಸಕ್ಕೆ ತೆರಳುವಾಗ ಒಟ್ಟಿಗೆ ಪ್ರಯಾಣಿಸಬೇಕು. ಆಟಗಾರರಿಗೆ ಕುಟುಂಬದೊಂದಿಗೆ ಪ್ರಯಾಣಿಸಲು ಅನುಮತಿ ಇಲ್ಲ.

ಇದನ್ನೂ ಓದಿ:ಡ್ರೆಸ್ಸಿಂಗ್ ರೂಮ್ ರಹಸ್ಯ ಲೀಕ್​​​ಗೆ ಟ್ವಿಸ್ಟ್​; ಟೀಂ ಇಂಡಿಯಾದಲ್ಲಿ ಇಷ್ಟೆಲ್ಲ ಆಗೋಯ್ತಾ?

ನಿಗದಿತ ತೂಕದ ಪ್ರಕಾರ ಲಗೇಜ್: ಪ್ರಯಾಣದ ಅವಧಿಯಲ್ಲಿ ಆಟಗಾರರು ಅತಿಯಾದ ಲಗೇಜ್ ತೆಗೆದುಕೊಂಡು ಹೋಗುವಂತಿಲ್ಲ. ಒಂದು ಪ್ರಯಾಣದಲ್ಲಿ 150 ಕೆಜಿ, ಸಹಾಯಕ ಸಿಬ್ಬಂದಿ 80 ಕೆಜಿ ವರೆಗೆ ಲಗೇಜ್ ಸಾಗಿಸಬಹುದು. ನಿಯಮ ಉಲ್ಲಂಘಿಸಿದರೆ ಆಟಗಾರನೇ ಹಣ ಪಾವತಿಸಬೇಕು.

ವೈಯಕ್ತಿಕ ಸಿಬ್ಬಂದಿಗೆ ಇಲ್ಲ ಅವಕಾಶ: ಬಿಸಿಸಿಐ ಅನುಮತಿಯಿಲ್ಲದೆ ಆಟಗಾರರು ಯಾವುದೇ ಪ್ರವಾಸ ಅಥವಾ ಸರಣಿಗೆ ತಮ್ಮೊಂದಿಗೆ ವೈಯಕ್ತಿಕ ಸಿಬ್ಬಂದಿ (ಮ್ಯಾನೇಜರ್, ಅಡುಗೆಯವರು ಇತ್ಯಾದಿ) ಕರೆದುಕೊಂಡು ಹೋಗುವಂತಿಲ್ಲ.

ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕಿಟ್​ಗಳು: ಪ್ರತಿಯೊಬ್ಬರ ವಸ್ತುಗಳು ಮತ್ತು ವೈಯಕ್ತಿಕ ವಸ್ತುಗಳು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹೋಗುತ್ತವೆ. ತಂಡದ ಆಟಗಾರರು ತಂಡದ ನಿರ್ವಹಣೆಯೊಂದಿಗೆ ಸಮನ್ವಯಗೊಳಿಸಬೇಕು. ಹೆಚ್ಚು ಖರ್ಚು ಮಾಡಿದರೆ ಆಟಗಾರ ಹಣ ಪಾವತಿಸಬೇಕಾಗುತ್ತದೆ.

ಅಭ್ಯಾಸ ಸೆಷನ್‌ಗಳಿಗೆ ಒಟ್ಟಿಗೆ ಹೋಗಬೇಕು: ಎಲ್ಲಾ ಆಟಗಾರರು ಅಭ್ಯಾಸದ ಅವಧಿಗಳಲ್ಲಿ ಭಾಗವಹಿಸಬೇಕು . ತಂಗುವ ಸ್ಥಳದಿಂದ ಮೈದಾನಕ್ಕೆ ಒಟ್ಟಿಗೆ ಪ್ರಯಾಣಿಸಬೇಕು. ತಂಡದೊಳಗೆ ಒಗ್ಗಟ್ಟು ಮೂಡಿಸಲು ಇದನ್ನು ಮಾಡಲಾಗಿದೆ.

ಇದನ್ನೂ ಓದಿ:ಅಡಕತ್ತರಿಯಲ್ಲಿ ಸರ್ಫರಾಜ್​ ಖಾನ್ ಕ್ರಿಕೆಟ್ ಬದುಕು.. ಆರೋಪ ಸಾಬೀತಾದ್ರೆ ಖೇಲ್ ಖತಂ..!

ಜಾಹೀರಾತು ಶೂಟಿಂಗ್​ ಇಲ್ಲ ಅವಕಾಶ: ಯಾವುದೇ ಸರಣಿ ನಡೆಯುತ್ತಿದ್ದರೆ ಅಥವಾ ತಂಡ ವಿದೇಶಿ ಪ್ರವಾಸದಲ್ಲಿದ್ದರೆ. ಅಂತಹ ಪರಿಸ್ಥಿತಿಯಲ್ಲಿ ಆಟಗಾರರಿಗೆ ವೈಯಕ್ತಿಕ ಜಾಹೀರಾತು ಶೂಟ್ ಮಾಡಲು ಅವಕಾಶ ಇಲ್ಲ. ಪ್ರಾಯೋಜಕರ ಜೊತೆ ಕೆಲಸ ಮಾಡಲು ಸ್ವಾತಂತ್ರ್ಯ ಕೂಡ ಇಲ್ಲ.

ಹೊಸ ಕುಟುಂಬ ನೀತಿ: ಭಾರತ ತಂಡವು 45 ದಿನ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಿದೇಶಿ ಪ್ರವಾಸದಲ್ಲಿದ್ದರೆ, ಆಟಗಾರನ ಕುಟುಂಬವು ಅವನೊಂದಿಗೆ 2 ವಾರ ಮಾತ್ರ ಉಳಿಯಬಹುದು. ಭೇಟಿ ಅವಧಿಯ ವೆಚ್ಚವನ್ನು ಬಿಸಿಸಿಐ ಭರಿಸಲಿದೆ. ಹೆಚ್ಚಿನ ಅವಧಿಗೆ ಉಳಿದುಕೊಂಡರೆ ಬಿಸಿಸಿಐ ಭರಿಸೋದು ಇಲ್ಲ.

ಬಿಸಿಸಿಐ ಕಾರ್ಯಕ್ರಮಗಳಲ್ಲಿ ಹಾಜರಿ: ಬಿಸಿಸಿಐ ನಡೆಸುವ ಶೂಟ್‌ಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಆಟಗಾರರು ಲಭ್ಯವಿರಬೇಕು. ಕ್ರಿಕೆಟ್​ ಬೆಳವಣಿಗೆಗೆ, ತಂಡದ ಬೆಳವಣಿಗೆಗೆ ಇದು ಸಹಾಯ ಆಗಲಿದೆ.

ಸರಣಿಯ ಮುಕ್ತಾಯದವರೆಗೂ ಒಟ್ಟಿಗೆ ಇರಬೇಕು: ಪಂದ್ಯ ಅಥವಾ ಸರಣಿ ಮುಗಿಯುವವರೆಗೆ ಎಲ್ಲಾ ಆಟಗಾರರು ಒಟ್ಟಿಗೆ ಇರಬೇಕಾಗುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪಂದ್ಯ ಮುಗಿದರೂ ಸಹ ಒಟ್ಟಿಗೆ ಇರಬೇಕು.

ಇದನ್ನೂ ಓದಿ:ಟೀಂ ಇಂಡಿಯಾಗೆ ಹೊಸ ಬ್ಯಾಟಿಂಗ್ ಕೋಚ್..​ ರೇಸ್​ನಲ್ಲಿ ಇಬ್ಬರು ದಿಗ್ಗಜರು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment