newsfirstkannada.com

T20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಬಿಗ್‌ ಶಾಕ್.. ಕೋಚ್‌ ರಾಹುಲ್ ದ್ರಾವಿಡ್‌ ಚೇಂಜ್‌?

Share :

Published May 10, 2024 at 12:33pm

    ಟೀಂ ಇಂಡಿಯಾ ಮುಖ್ಯ ಕೋಚ್‌ಗೆ ಅರ್ಜಿ ಸಲ್ಲಿಸಲು BCCI ಆಹ್ವಾನ

    ರಾಹುಲ್ ದ್ರಾವಿಡ್ ಅವರ ಬದಲು ವಿದೇಶಿಗನಿಗೆ ಬಿಸಿಸಿಐ ಮಣೆ ಹಾಕುತ್ತಾ?

    ಜೂನ್ 02ರಿಂದ ಆರಂಭವಾಗಲಿರುವ T20 ವಿಶ್ವಕಪ್‌ ಹಣಾಹಣಿ

ಮುಂಬೈ: ಐಪಿಎಲ್‌ ಹಣಾಹಣಿ ಮುಗಿಯುತ್ತಿದ್ದಂತೆ T20 ವಿಶ್ವಕಪ್‌ ಆರಂಭವಾಗುತ್ತಿದೆ. ಈಗಾಗಲೇ ಟೀಂ ಇಂಡಿಯಾ ಆಯ್ಕೆ ಮಾಡಿರುವ ಬಿಸಿಸಿಐ ಇದೀಗ ಮುಖ್ಯ ಕೋಚ್ ಬದಲಾವಣೆಯ ಬಗ್ಗೆ ಮಹತ್ವದ ಸುಳಿವು ನೀಡಿದೆ.

ಸದ್ಯ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರ ಕೋಚ್‌ ಅವಧಿ ಇದೇ ಜೂನ್‌ ತಿಂಗಳೊಳಗೆ ಅಂತ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಹೀರಾತು ನೀಡುತ್ತಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

ಬಿಸಿಸಿಐ ಜಾಹೀರಾತಿನ ಬಗ್ಗೆ ಮಾತನಾಡಿರುವ ಜಯ್ ಶಾ, ನೂತನ ಕೋಚ್‌ ಆಯ್ಕೆಗಾಗಿ ಬಿಸಿಸಿಐ ಈಗಾಗಲೇ ಜಾಹೀರಾತನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ಕೋಚ್ ರಾಹುಲ್ ದ್ರಾವಿಡ್ ಅವರು ಮತ್ತೊಮ್ಮೆ ಕೋಚ್ ಆಗಲು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಜಯ್ ಶಾ ಅವರ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್​ ಟೇಬಲ್ ಏನಾಯ್ತು..? 

ಐಪಿಎಲ್‌ ಟೂರ್ನಿ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರು ವಿಶ್ವಕಪ್‌ ಹಣಾಹಣಿಗೆ ರೆಡಿಯಾಗಬೇಕಿದೆ. T20 ವಿಶ್ವಕಪ್‌ಗೆ ಇನ್ನು ಒಂದು ತಿಂಗಳು ಬಾಕಿ ಇರುವಂತೆ ಬಿಸಿಸಿಐ ಕೋಚ್‌ ಬದಲಾವಣೆಯ ಸುಳಿವು ನೀಡಿದೆ. ರಾಹುಲ್ ದ್ರಾವಿಡ್ ಅವರೇ ಕೋಚ್ ಹುದ್ದೆಯಲ್ಲಿ ಮುಂದುವರಿಯುತ್ತಾರಾ ಅಥವಾ ವಿದೇಶಿಗರಿಗೆ ಬಿಸಿಸಿಐ ಮಣೆ ಹಾಕುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ಇದೇ ಮೇ 26ರಂದು ಐಪಿಎಲ್ 2024ರ ಮೆಗಾ ಫೈನಲ್ ಪಂದ್ಯ ನಡೆಯಲಿದೆ. ಇದಾದ 6 ದಿನದ ಬಳಿಕ ಜೂನ್ 02ರಿಂದ T20 ವಿಶ್ವಕಪ್‌ ಆರಂಭವಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಬಿಗ್‌ ಶಾಕ್.. ಕೋಚ್‌ ರಾಹುಲ್ ದ್ರಾವಿಡ್‌ ಚೇಂಜ್‌?

https://newsfirstlive.com/wp-content/uploads/2024/05/Rahul-Dravid-BCCI.jpg

Load More