/newsfirstlive-kannada/media/post_attachments/wp-content/uploads/2024/08/Gambhir_Rohit-Fight.jpg)
2024 ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಪಾಲಿಗೆ, ಕರಾಳ ವರ್ಷವಾಗಿತ್ತು. ಕೋಚ್ ಹುದ್ದೆ ಅಲಂಕರಿಸಿದಾಗ, ಗಂಭೀರ್ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಆದ್ರೆ ಕಳೆದ ವರ್ಷ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಗಂಭೀರ್, ಕೋಚ್ ಆಗಿ ತೀವ್ರ ಮುಖಭಂಗ ಅನುಭವಿಸಿದ್ರು. ಸತತ ಸೋಲುಗಳಿಂದ ಕಂಗೆಟ್ಟಿರುವ ಬಿಸಿಸಿಐ ಬಿಗ್ಬಾಸ್ಗಳು, ಕೋಚ್ ಗಂಭೀರ್ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸದ್ಯ ಎಲ್ಲವೂ ಸರಿ ಇಲ್ಲ! ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಿಸಿಸಿಐ ಬಿಗ್ಬಾಸ್ಗಳು ಕೆರಳಿ ಕೆಂಡವಾಗಿದ್ದಾರೆ. ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಡಿದೆದ್ದಿದ್ದಾರೆ.
ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನ ಟೀಮ್ ಇಂಡಿಯಾ ಯಾವಾಗ ಕೈಚೆಲ್ಲಿತೋ, ಕೋಚ್ ಗೌತಮ್ ಗಂಭೀರ್ ಕುರ್ಚಿ ಅಲುಗಾಡ ತೊಡಗಿದೆ. ಸದ್ಯ ಕೋಚ್ ಗಂಭೀರ್ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಂಡಳಿಯ ಅಧಿಕಾರಿಗಳು, ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಗಂಭೀರ್ ವಿರುದ್ಧ ಬಿಸಿಸಿಐ ಫುಲ್ ಗರಂ..!
ಅಡಿಲೇಡ್ ಟೆಸ್ಟ್ ಸೋಲು.. ! ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ತೀವ್ರ ಮುಖಭಂಗ..! ಇದೇ ಬಿಗ್ಬಾಸ್ಗಳನ್ನ ಕೆರಳಿ ಕೆಂಡದಂತೆ ಮಾಡಿರೋದು. ಅದ್ರಲ್ಲೂ ಟೀಮ್ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಎಂಟ್ರಿ ಅತ್ಯಂತ ಕಠಿಣವಾಗಿರೋದ್ರಿಂದ, ಬಿಗ್ಬಾಸ್ಗಳ ಕೋಪ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಹೇಗಾದ್ರೂ ಮಾಡಿ ಕೊನೆಯ ಟೆಸ್ಟ್ ಗೆಲ್ಲಿಸಬೇಕು, ಟೀಮ್ ಇಂಡಿಯಾ ಸುಧಾರಿಸಬೇಕು. ಅದರ ಜವಾಬ್ದಾರಿ ನಿಮ್ಮದೇ ಎಂದು ಗಂಭೀರ್ಗೆ ವಾರ್ನಿಂಗ್ ನೀಡಲಾಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್ ಕಂಡ್ರೆ ಬಿಸಿಸಿಐಗೆ ಭಯ ಏಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ