newsfirstkannada.com

ದುಲೀಪ್​ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್​​ ಸ್ಟಾರ್​​ಗಳೇ ಹೆಚ್ಚು..!

Share :

Published August 15, 2024 at 10:02am

Update August 15, 2024 at 12:07pm

    ದುಲೀಪ್​ ಟ್ರೋಫಿ ಕಣದಲ್ಲಿ ಸೂಪರ್​​ ಸ್ಟಾರ್​​ಗಳು

    ಯುವ ಆಟಗಾರರಿಗೆ ನಾಯಕನ ಪಟ್ಟ ಒಲಿದು ಬಂದಿದೆ

    ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್​ ಯಾರೆಲ್ಲ ಇದ್ದಾರೆ?

ಬಹು ನಿರೀಕ್ಷೆ ಹುಟ್ಟು ಹಾಕಿದ್ದ ದುಲೀಪ್​ ಟ್ರೋಫಿ ಟೂರ್ನಿಗೆ ಕೊನೆಗೂ ತಂಡಗಳು ಅನೌನ್ಸ್​ ಆಗಿವೆ. ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ ಡೊಮೆಸ್ಟಿಕ್​ ಕ್ರಿಕೆಟ್​ ಆಡ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಇಬ್ಬರ ಹೊರತಾಗಿ ಟೀಮ್​ ಇಂಡಿಯಾದ ಉಳಿದ ಸ್ಟಾರ್​​ಗಳು ಡೊಮೆಸ್ಟಿಕ್​ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್​ನಲ್ಲಿ ರೆಸ್ಟ್​ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್​ ನೀಡಿದ್ದು ಟೀಮ್​ ಇಂಡಿಯಾದ ಖಾಯಂ ಸ್ಟಾರ್​ಗಳನ್ನ ದುಲೀಪ್​ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.

ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗಳ ಜೊತೆ ಸಭೆ ನಡೆಸಿದ್ದ ಕೋಚ್​ ಗೌತಮ್​​ ಗಂಭೀರ್​​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂಬರೋ ಟೆಸ್ಟ್​ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ರು. ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿಯಲ್ಲಿ ಸ್ಟಾರ್​ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ರು. ಸಪ್ಟೆಂಬರ್​ 5ರಿಂದ ಆರಂಭವಾಗೋ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ.

ಕೈ ಕೊಟ್ಟ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ
ಬಹು ವರ್ಷಗಳ ಬಳಿಕ ಟೀಮ್​ ಇಂಡಿಯಾದ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಡೊಮೆಸ್ಟಿಕ್​ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್​-ಕೊಹ್ಲಿ ದುಲೀಪ್​ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್​ಗಳಾದ ಜಸ್​ಪ್ರಿತ್​ ಬೂಮ್ರಾ, ಆರ್​ ಅಶ್ವಿನ್​ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಕೊಹ್ಲಿ-ರೋಹಿತ್​ ಹೊರತಾಗಿ ಟೀಮ್​ ಇಂಡಿಯಾದ ಹಲವು ಸೂಪರ್​ ಸ್ಟಾರ್​​ಗಳು ಟೂರ್ನಿಯಲ್ಲಿ ಆಡ್ತಿದ್ದಾರೆ. ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​, ಕುಲ್​ದೀಪ್​ ಯಾದವ್​, ಯಶಸ್ವಿ ಜೈಸ್ವಾಲ್, ರಿಷಭ್​ ಪಂತ್​, ರವೀಂದ್ರ ಜಡೇಜಾ, ಸೂರ್ಯಕುಮಾರ್​, ಶ್ರೇಯಸ್​ ಅಯ್ಯರ್​ ಸೇರಿದಂತೆ ಹಲವು ಆಟಗಾರರು ಆಡಲಿದ್ದಾರೆ. ಈ ದುಲೀಪ್​ ಟ್ರೋಫಿಯಲ್ಲಿ ಇವ್ರು ನೀಡೋ ಪ್ರದರ್ಶನ ಟೆಸ್ಟ್​ ತಂಡದ ಸೆಲೆಕ್ಷನ್​ಗೆ ಮಾನದಂಡವಾಗಲಿದೆ.

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

ಯುವ ಆಟಗಾರರಿಗೆ ಒಲಿದ ನಾಯಕನ ಪಟ್ಟ
ಹೊಸ ಫಾರ್ಮೆಟ್​ನಲ್ಲಿ ಆಡ್ತಿರೋ ದುಲೀಪ್​ ಟ್ರೋಫಿಯಲ್ಲಿ 4 ತಂಡಗಳನ್ನ ಆಯ್ಕೆ ಮಾಡಲಾಗಿದೆ. ತಂಡಗಳಲ್ಲಿ ಸೀನಿಯರ್​ ಆಟಗಾರರು ಇದ್ರೂ ಕೂಡ ನಾಯಕತ್ವದ ಜವಾಬ್ದಾರಿಯನ್ನ ಯುವ ಆಟಗಾರರಿಗೆ ವಹಿಸಲಾಗಿದೆ. ಎ ತಂಡಕ್ಕೆ ಶುಭ್​ಮನ್​ ಗಿಲ್​, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್​, ಸಿ ತಂಡಕ್ಕೆ ಋತುರಾಜ್​ ಗಾಯಕ್ವಾಡ್​ ಹಾಗೂ ಡಿ ತಂಡಕ್ಕೆ ಶ್ರೇಯಸ್​ ಅಯ್ಯರ್​ಗೆ ಸಾರಥ್ಯವನ್ನ ವಹಿಸಲಾಗಿದೆ.

ಕೆಟ್ಟ ಮೇಲೆ ಬುದ್ಧಿ ಕಲಿತ ಇಶಾನ್ ಕಿಶನ್​
ಕಳೆದ ವರ್ಷ ಬಿಸಿಸಿಐ ಬಾಸ್​ಗಳ ಮಾತಿಗೆ ಕ್ಯಾರೇ ಅನ್ನದೇ, ರಣಜಿ ಟ್ರೋಫಿ ಟೂರ್ನಿಯನ್ನಾಡಲು ನೋ ಎಂದಿದ್ದ ಇಶಾನ್​ ಕಿಶನ್​ ಕೆಟ್ಟ ಮೇಲೆ ಬುದ್ಧಿ ಕಲಿತಂತಿದೆ. ಡೊಮೆಸ್ಟಿಕ್​ ಕ್ರಿಕೆಟ್​ ಆಡಲ್ಲ ಎಂದು ಮೊಂಡುತನ ಸಾಧಿಸಿದ್ದ ಇಶಾನ್​ ಕಿಶನ್​, ಟೀಮ್​ ಇಂಡಿಯಾದಿಂದ ದೂರವಾಗಿದ್ರು. ಡೊಮೆಸ್ಟಿಕ್​ ಕ್ರಿಕೆಟ್​ ಆಡಿದ್ರೆ ಮಾತ್ರ, ಸ್ಥಾನ ಸಿಗೋದು ಎಂದು ಬಿಸಿಸಿಐ ಎಚ್ಚರಿಕೆ ನೀಡಿತ್ತು. ಇದೀಗ ಕೆಟ್ಟ ಮೇಲೆ ಬುದ್ಧಿ ಕಲಿತಿರೋ ಕಿಶನ್​ ಡೊಮೆಸ್ಟಿಕ್​ ಕ್ರಿಕೆಟ್​ಗೆ ಮರಳಿದ್ದು, ದುಲೀಪ್​ ಟ್ರೋಫಿಯಲ್ಲಿ ಆಡಲಿದ್ದಾರೆ.

ಕಣದಲ್ಲಿ ಅಗ್ನಿಪರೀಕ್ಷೆಗಿಳಿದ ಕನ್ನಡದ ಸ್ಟಾರ್ಸ್​
ಕೆ.ಎಲ್​ ರಾಹುಲ್​ ಮಾತ್ರವಲ್ಲದೇ ಕರ್ನಾಟಕದ ಹಲವು ಆಟಗಾರರು ಕೂಡ ಟೂರ್ನಿಯ ಭಾಗವಾಗಿದ್ದಾರೆ. ಕಮ್​ಬ್ಯಾಕ್​ ಕನವರಿಕೆಯಲ್ಲಿರೋ ಮಯಾಂಕ್​ ಅಗರ್​ವಾಲ್​, ಇಂಜುರಿಯಿಂದ ಫಿಟ್​ ಆಗಿ ವಾಪಾಸ್ಸಾಗ್ತಿರೋ ಪ್ರಸಿದ್ಧ ಕೃಷ್ಣ ಮೇಲೆ ಎಲ್ಲರ ಕಣ್ಣಿದೆ. ಇವ್ರ ಜೊತೆಗೆ ಯುವ ಆಟಗಾರರಾದ ವಿದ್ವತ್​ ಕಾವೇರಪ್ಪ, ವೈಶಾಕ್​ ವಿಜಯ್​ ಕುಮಾರ್​, ದೇವದತ್ತ್​ ಪಡಿಕ್ಕಲ್​ ಕೂಡ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಬಾಂಗ್ಲಾದೇಶ ಟೆಸ್ಟ್​ ಸರಣಿಯೂ ಸೇರಿದಂತೆ ಮುಂದಿನ 5 ತಿಂಗಳಲ್ಲಿ ಟೀಮ್​ ಇಂಡಿಯಾ ಒಟ್ಟು 10 ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ಈ ಪಂದ್ಯಗಳಿಗೆ ಸಿದ್ಧತೆಯ ದೃಷ್ಟಿಯಿಂದ ದುಲೀಪ್​ ಟ್ರೋಫಿ ಮಹತ್ವ ಪಡೆದುಕೊಂಡಿದೆ. ಸ್ಥಾನ ಪಡೆದಿರುವ ಸ್ಟಾರ್ಸ್​​ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಹೇಗೆ ಪರ್ಫಾಮ್​​ ಮಾಡ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದುಲೀಪ್​ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್​​ ಸ್ಟಾರ್​​ಗಳೇ ಹೆಚ್ಚು..!

https://newsfirstlive.com/wp-content/uploads/2024/02/Test-Team-India.jpg

Load More