ಚಾಂಪಿಯನ್ಸ್‌ ಟೀಂ ಇಂಡಿಯಾಗೆ ಗುಡ್‌ನ್ಯೂಸ್‌.. ಕೋಟಿ, ಕೋಟಿ ಬಹುಮಾನ ಘೋಷಿಸಿದ BCCI

author-image
admin
Updated On
ಚಾಂಪಿಯನ್ಸ್‌ ಟೀಂ ಇಂಡಿಯಾಗೆ ಗುಡ್‌ನ್ಯೂಸ್‌.. ಕೋಟಿ, ಕೋಟಿ ಬಹುಮಾನ ಘೋಷಿಸಿದ BCCI
Advertisment
  • ರೋಹಿತ್ ಶರ್ಮಾ ಪಡೆಗೆ ಬಿಸಿಸಿಐ ನಗದು ಬಹುಮಾನ ಘೋಷಣೆ
  • ಒಂದೂ ಪಂದ್ಯ ಸೋಲದೇ ಚಾಂಪಿಯನ್ಸ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ
  • ಚಾಂಪಿಯನ್ಸ್‌ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಕೋಟಿ, ಕೋಟಿ!

ಚಾಂಪಿಯನ್‌ಗಳ ಚಾಂಪಿಯನ್ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಣೆ ಮಾಡಿದೆ. ಚಾಂಪಿಯನ್ಸ್‌ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಇಂದು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

2025ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂಪಾಯಿ ನಗದು ಬಹುಮಾನ ನೀಡಿದೆ. ಇದರಲ್ಲಿ ಟೀಂ ಇಂಡಿಯಾ ಆಟಗಾರರು, ಕೋಚಿಂಗ್‌, ಸಹಾಯಕ ಸಿಬ್ಬಂದಿ ಮತ್ತು ಬಿಸಿಸಿ ಆಯ್ಕೆ ಸಮಿತಿ ಸದಸ್ಯರಿಗೆ ಕ್ರಮವಾಗಿ ನಗದು ಬಹುಮಾನವನ್ನು ಹಂಚಿಕೆ ಮಾಡಲಾಗುತ್ತದೆ.

publive-image

ಕಳೆದ ಮಾರ್ಚ್ 9ರಂದು ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ಭಾರತ, ನ್ಯೂಜಿಲ್ಯಾಂಡ್ ಮಧ್ಯೆ ಚಾಂಪಿಯನ್ ಟ್ರೋಫಿಯ ಫೈನಲ್ ಹಣಾಹಣಿ ನಡೀತು. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಿವೀಸ್ ಆಟಗಾರರನ್ನು ಬಗ್ಗು ಬಡಿಯಿತು. 4 ವಿಕೆಟ್‌ಗಳ ರೋಚಕ ಜಯದೊಂದಿಗೆ ರೋಹಿತ್ ಶರ್ಮಾ ಪಡೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತು.

ಇದನ್ನೂ ಓದಿ: ಈ ಸಲ RCB ಅಲ್ಲಿ ಏಕೈಕ ಮ್ಯಾಚ್ ಫಿನಿಶರ್, ಬಿಗ್ ಹಿಟ್ಟರ್​ಗಳು ಯಾರು ಯಾರು..? 

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಸೋಲಿಲ್ಲದ ಸರದಾರನಂತೆ ಅದ್ಭುತ ಆಟ ಪ್ರದರ್ಶಿಸಿತು. ಒಂದರ ಹಿಂದೆ ಒಂದರಂತೆ ಪಂದ್ಯ ಗೆದ್ದು ಟ್ರೋಫಿ ಗೆಲ್ಲುವುದು ವಿಶೇಷವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ 58 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿ ಗೌರವಿಸಲು ಬಿಸಿಸಿಐ ಮುಂದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment