/newsfirstlive-kannada/media/post_attachments/wp-content/uploads/2025/03/shreyas_iyer.jpg)
ಕಳೆದೊಂದು ವರ್ಷದಿಂದ ಶ್ರೇಯಸ್ ಅಯ್ಯರ್ ಬ್ಯಾಟ್, ಸದ್ದು ಮಾಡುತ್ತಲೇ ಇದೆ. ದೇಸಿ ಕ್ರಿಕೆಟ್, ಐಪಿಎಲ್, ಇಂಗ್ಲೆಂಡ್ ಸೀರಿಸ್ ಮತ್ತು ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂಬೈಕರ್, ಸೈಲೆಂಟ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಟೀಮ್ ಇಂಡಿಯಾದ ಬ್ಯಾಕ್ ಬೋನ್ ಎನಿಸಿಕೊಂಡಿರುವ ಶ್ರೇಯಸ್ಗೆ, ಸದ್ಯದಲ್ಲೇ ಗುಡ್ನ್ಯೂಸ್ ಸಿಗೋದು ಪಕ್ಕಾ ಆಗಿದೆ.
ಹಾರ್ಡ್ ವರ್ಕ್, ಡೆಡಿಕೇಷನ್, ಕಮಿಟ್ಮೆಂಟ್ ಜೊತೆಗೆ ಕಮ್ಬ್ಯಾಕ್ ಮಾಡೋದು ಹೇಗೆ ಅಂತ, ಶ್ರೇಯಸ್ ಅಯ್ಯರ್ನ ನೋಡಿ ಕಲೀಬೇಕು. ಆವತ್ತು ಬಿಗ್ಬಾಸ್ಗಳ ಮಾತಿಗೆ ಬೆಲೆ ಕೊಡದೆ ದೇಸಿ ಕ್ರಿಕೆಟ್ ಕಡೆಗಣಿಸಿದ್ದ ಶ್ರೇಯಸ್, 1 ವರ್ಷ ಟೀಮ್ ಇಂಡಿಯಾದಿಂದ ದೂರ ಉಳಿದು, ವನವಾಸ ಅನುಭವಿಸಿದ್ದರು. ಆದ್ರೀಗ ತನ್ನ ತಪ್ಪಿನಿಂದ ಪಾಠ ಕಲಿತಿರುವ ಶ್ರೇಯಸ್ ಅಯ್ಯರ್, ಡೊಮೆಸ್ಟಿಕ್ ಮತ್ತು ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್
ಪ್ರಸಕ್ತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್, 4 ಪಂದ್ಯಗಳಿಂದ 195 ರನ್ ಕಲೆ ಹಾಕಿದ್ದಾರೆ. 49 ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಕಲೆಹಾಕಿರುವ ಮುಂಬೈಕರ್, 2 ಅರ್ಧಶತಕ ಸಿಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಶ್ರೇಯಸ್, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡಿದ್ದರು. ಆಂಗ್ಲರ ಎದುರು ಅಬ್ಬರಿಸಿದ್ದ ಶ್ರೇಯಸ್, ತನ್ನ ತಾಖತ್ತೇನು ಅನ್ನೋದನ್ನ ವಿಶ್ವಕ್ಕೆ ತೋರಿಸಿದ್ದರು.
ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಶ್ರೇಯಸ್
ಆಂಗ್ಲರ ಎದುರು 3 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಶ್ರೇಯಸ್, 60ರ ಬ್ಯಾಟಿಂಗ್ ಸರಾಸರಿಯಲ್ಲಿ 181 ರನ್ ಕಲೆಹಾಕಿದ್ದರು. ಶ್ರೇಯಸ್ ಬ್ಯಾಟ್ನಿಂದ 2 ಅರ್ಧಶತಕಗಳು ದಾಖಲಾಗಿತ್ತು.
ಇನ್ನು ದೇಸಿ ಕ್ರಿಕೆಟ್ನಲ್ಲಿ ಶ್ರೇಯಸ್ ಆರ್ಭಟ ಬಲು ಜೋರಾಗಿತ್ತು. ಎದುರಾಳಿ ಬೌಲರ್ಗಳನ್ನ ಚೆಂಡಾಡಿರುವ ಶ್ರೇಯಸ್, ರನ್ ಮಳೆ ಸುರಿಸಿದ್ದಾರೆ.
ದೇಸಿ ಕ್ರಿಕೆಟ್ನಲ್ಲಿ ಶ್ರೇಯಸ್ ಧಮಾಕ
- ಐಪಿಎಲ್ನಲ್ಲಿ 351 ರನ್ ಮತ್ತು ಟ್ರೋಫಿ
- ರಣಜಿ ಟೂರ್ನಿಯಲ್ಲಿ 480 ರನ್
- ವಿಜಯ್ ಹಜಾರೆ ಟೂರ್ನಿಯಲ್ಲಿ 325 ರನ್
- ಸೈಯ್ಯದ್ ಮುಷ್ತಾಕ್ ಅಲಿಯಲ್ಲಿ 345 ರನ್ ಮತ್ತು ಟ್ರೋಫಿ
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಶ್ನಿಸಿದ್ದಕ್ಕೆ ಶಿಕ್ಷೆ; ಮಠದಿಂದಲೇ ಸ್ವಾಮೀಜಿಯನ್ನ ಹೊರ ಹಾಕಿದ ಕೆಲ ಭಕ್ತರು!
ಕಳೆದೊಂದು ವರ್ಷದಲ್ಲಿ ಶ್ರೇಯಸ್ NEXT LEVELನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಶ್ರೇಯಸ್ ಆಡಿದ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿರೋದಂತೂ ಸುಳ್ಳಲ್ಲ.
ಶ್ರೇಯಸ್ಗೆ ಸಿಗುತ್ತಾ ಬಿಸಿಸಿಐ ಕಾಂಟ್ರ್ಯಾಕ್ಟ್..?
ಸದ್ಯ ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾದ ಸಾಮಾನ್ಯ ಆಟಗಾರ. ಆದ್ರೆ ಈ ಸೈಲೆಂಟ್ ಪರ್ಫಾಮರ್, ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನಿಂದ ANNUAL CONTRACT ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಬಿಗ್ಬಾಸ್ಗಳು ಮುಂಬೈಕರ್ಗೆ ಯಾವ ಗ್ರೇಡ್ ಕಾಂಟ್ರ್ಯಾಕ್ಟ್ ಕೊಡ್ತಾರೋ ಗೊತ್ತಿಲ್ಲ. ಆದ್ರೆ ಅಯ್ಯರ್ ಮಾತ್ರ, ಬಿಸಿಸಿಐ ಕಾಂಟ್ರ್ಯಾಕ್ಟ್ ಪಡೆಯೋಕೆ ಅರ್ಹ ಆಟಗಾರ ಅನ್ನೋದ್ರಲ್ಲಿ, ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ