ಟೀಮ್​​ ಇಂಡಿಯಾಗೆ ಸಿಕ್ಕೇಬಿಟ್ರು ಹೊಸ ಕೋಚ್​​​.. ಗೌತಮ್​​ ಗಂಭೀರ್​​​​ಗೆ ಏನಾಯ್ತು?

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿ; ಟೀಮ್​ ಇಂಡಿಯಾದಿಂದ ಧೋನಿ ಶಿಷ್ಯನಿಗೆ ಕೊಕ್​!
Advertisment
  • ಸದ್ಯದಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರೋ ಭಾರತ
  • ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಮಹತ್ವದ ಟಿ20 ಸರಣಿ
  • ಮುಂದಿನ ತಿಂಗಳು ನವೆಂಬರ್​​​ 8ನೇ ತಾರೀಕಿನಿಂದ ಆರಂಭ

ಬಹುನಿರೀಕ್ಷಿತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಟೀಮ್​​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಮಹತ್ವದ ಟಿ20 ಸರಣಿ ಆಡಲಿದೆ.

ಇನ್ನು, ಮುಂದಿನ ತಿಂಗಳು ನವೆಂಬರ್​​​ 8ನೇ ತಾರೀಕಿನಿಂದ ಟೀಮ್​​ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಶುರುವಾಗಲಿದೆ. ಈಗಾಗಲೇ ಬಿಸಿಸಿಐ ಸೆಲೆಕ್ಷನ್​ ಕಮಿಟಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದೆ. ಆದರೆ, ಈ ಸಲ ಟೀಮ್​​ ಇಂಡಿಯಾ ಜೊತೆ ಹೆಡ್‌ ಕೋಚ್ ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾಗೆ ಹೋಗುತ್ತಿಲ್ಲ. ಇವರ ಬದಲಿಗೆ ಲಕ್ಷ್ಮಣ್ ಅವರು ತಂಡದೊಂದಿಗೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಎಸ್​​ ಲಕ್ಷ್ಮಣ್​ಗೆ ಕೋಚ್​​ ಜವಾಬ್ದಾರಿ!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ನವೆಂಬರ್ 8 ರಂದು ಶುರುವಾಗಲಿದೆ. ಇದಾದ ನಂತರ ಮುಂದಿನ 3 ಪಂದ್ಯಗಳು ಕ್ರಮವಾಗಿ ನವೆಂಬರ್ 10, 13 ಮತ್ತು 15 ರಂದು ನಡೆಯಲಿದೆ. ಈ ಸರಣಿಗೆ ವಿವಿಎಸ್​​​ ಲಕ್ಷ್ಮಣ್​​​ ಕೋಚ್​​ ಆಗಿದ್ದು, ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಸುಭದೀಪ್ ಘೋಷ್ ಕೋಚಿಂಗ್ ಸಿಬ್ಬಂದಿ ಭಾಗವಾಗಿರಲಿದ್ದಾರೆ.

publive-image

ಗಂಭೀರ್ ಗೈರಾಗಲು ಕಾರಣವೇನು?

ಟಿ20 ಕ್ಯಾಪ್ಟನ್​​ ಸೂರ್ಯಕುಮಾರ್ ನೇತೃತ್ವದಲ್ಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಲಿದೆ. ಹೇಗಾದ್ರೂ ಮಾಡಿ ಹ್ಯಾಟ್ರಿಕ್ ಟಿ20 ಸರಣಿ ಗೆಲ್ಲಲೇಬೇಕು ಎಂದು ಸೂರ್ಯಕುಮಾರ್​​ ಯಾದವ್​​ ಪಣತೊಟ್ಟಿದ್ದಾರೆ. ಈ ಹೊತ್ತಲ್ಲೇ ಗಂಭೀರ್​​​ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಜತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಹೀಗಾಗಿ ವಿವಿಎಸ್​​ ಲಕ್ಷ್ಮಣ್​ಗೆ ಈ ಜವಾಬ್ದಾರಿ ಹೊರಿಸಲಾಗಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ?

ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನವೆಂಬರ್ 22 ರಿಂದ 5 ಟೆಸ್ಟ್‌ಗಳ ಸರಣಿ ಶುರುವಾಗಲಿದೆ. ಆಸೀಸ್​​ ನೆಲದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ಟೀಮ್​ ಇಂಡಿಯಾಗೆ ಹೆಡ್​ ಕೋಚ್​​ ಗಂಭೀರ್​ ಅಗತ್ಯ ಇದೆ. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಜೊತೆ ಹೋಗಲಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಹೀಗಿದೆ..!

ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್​), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಖ್, ಅವೇಶ್ ಖಾನ್ , ಯಶ್ ದಯಾಳ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment