/newsfirstlive-kannada/media/post_attachments/wp-content/uploads/2024/04/Surya_Rohit.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗೋ ಮುನ್ನವೇ ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ ಆಗಿದೆ. ಮಾರ್ಚ್ 22 ರಂದು ನಡೆಯಲಿರೋ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್, ಆರ್ಸಿಬಿ ಮುಖಾಮುಖಿ ಆಗಲಿವೆ. ಇದಾದ ನಂತರ ಮಾರ್ಚ್ 23ನೇ ತಾರೀಕು ನಡೆಯಲಿರೋ 2ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಮುಂಬೈ ಇಂಡಿಯನ್ಸ್ ಸೆಣಸಲಿದೆ. ಈ ಪಂದ್ಯದಿಂದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದಾರೆ.
ಮುಂದಿನ ಐಪಿಎಲ್ ಸೀಸನ್ಗಾಗಿ ಬರೋಬ್ಬರಿ 16 ಕೋಟಿ ನೀಡಿ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದೆ. 2025ರ ಐಪಿಎಲ್ಗೂ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಅವರೇ ಲೀಡ್ ಮಾಡಲಿದ್ದಾರೆ. ಇದರ ಮಧ್ಯೆ ಹಾರ್ದಿಕ್ ಪಾಂಡ್ಯಗೆ ಒಂದು ಶಾಕಿಂಗ್ ನ್ಯೂಸ್ ಒಂದಿದೆ.
ಹಾರ್ದಿಕ್ ಮೇಲೆ ನಿಷೇಧ
ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೊನೆ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಲಾಗಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲೆ ಒಂದು ಪಂದ್ಯಕ್ಕೆ ಬಿಸಿಸಿಐ ನಿಷೇಧ ಹೇರಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯಾವುದೇ ತಂಡದಲ್ಲಿ ಸ್ಲೋ ಓವರ್ ರೇಟ್ 3 ಬಾರಿ ಕಂಡು ಬಂದಲ್ಲಿ ನಿಷೇಧ ಹೇರಲಾಗುತ್ತದೆ. ಅದರಲ್ಲೂ ತಂಡದ ನಾಯಕನಿಗೆ 1 ಪಂದ್ಯಕ್ಕೆ ನಿಷೇಧ ಹೇರುವುದು ಕಾನೂನು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2025ರ ಮೊದಲ ಪಂದ್ಯ ಆಡುವುದಿಲ್ಲ.
2025ರ ಐಪಿಎಲ್ನಲ್ಲೂ ಹಾರ್ದಿಕ್ ಪಾಂಡ್ಯ ಅವರನ್ನೇ ಮುಂಬೈ ಇಂಡಿಯನ್ಸ್ ನಾಯಕನಾಗಿ ಮುಂದುವರಿಸಲಿದೆ. ಈ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?
ಹಾರ್ದಿಕ್ ಪಾಂಡ್ಯ ಬದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಮೂವರು ಸ್ಟಾರ್ ಆಟಗಾರರು ಇದ್ದಾರೆ. ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮೊದಲ ಆಯ್ಕೆಯಾಗಿದ್ದಾರೆ. ಇವರ ಬಳಿಕ ರೇಸ್ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಇದ್ದಾರೆ. ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇವರೇ ಲೀಡ್ ಮಾಡಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ