newsfirstkannada.com

ಐಪಿಎಲ್​ ಹೊತ್ತಲ್ಲೇ ಶ್ರೇಯಸ್​​ ಅಯ್ಯರ್​​, ಇಶಾನ್​​ ಕಿಶನ್​ಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ!

Share :

Published March 19, 2024 at 4:07pm

  2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಮುನ್ನವೇ ಬಿಗ್​ ಶಾಕ್​​

  ಟೀಮ್​ ಇಂಡಿಯಾದ ಇಬ್ಬರು ಸ್ಟಾರ್​ ಆಟಗಾರರಿಗೆ ಬಿಸಿಸಿಐ ಆಘಾತ

  ಶ್ರೇಯಸ್​ ಅಯ್ಯರ್​, ಇಶಾನ್​ ಕಿಶಾನ್​ಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್ಸ್​ ಆದ ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಭಾರತ ಕ್ರಿಕೆಟ್‌ ನಿಯಂತ್ರಣಾ ಮಂಡಳಿ ತನ್ನ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಈ ಇಬ್ಬರ ಬದಲಿಗೆ ಯುವ ಆಟಗಾರರಿಗೆ ಸ್ಥಾನ ನೀಡಿದೆ.

ಇನ್ನು, ಸೋಮವಾರ ನಡೆದ ಬಿಸಿಸಿಐ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮತ್ತೆ ಟೀಮ್ ಇಂಡಿಯಾದ ಸ್ಟಾರ್​​ ಆಟಗಾರರಾದ ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್ ಅವರನ್ನು ಕಡೆಗಣನೆ ಮಾಡಿದ್ದು, ಇವರ ಬದಲಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.

ಇತ್ತೀಚೆಗೆ ಟೀಂ ಇಂಡಿಯಾ, ಇಂಗ್ಲೆಂಡ್ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಿತು. ಈ ಸರಣಿಯಲ್ಲಿ ಟೀಮ್​​ ಇಂಡಿಯಾ 4-1ರಿಂದ ಗೆದ್ದು ಬೀಗಿತ್ತು. ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ ಮತ್ತು ವಿಕೆಟ್‌ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅವರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆ ಒಪ್ಪಂದದಲ್ಲಿ ಅವಕಾಶ ನೀಡಲಾಗಿದೆ. ಇಬ್ಬರೂ ಹೊಸ ಆಟಗಾರರನ್ನು ಗ್ರೇಡ್ ಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಇಬ್ಬರು ಆಟಗಾರರ ವಾರ್ಷಿಕ ರಿಟೈನರ್‌ಶಿಪ್ ಶುಲ್ಕ 1 ಕೋಟಿ ರೂ. ಆಗಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್​ ಹೊತ್ತಲ್ಲೇ ಶ್ರೇಯಸ್​​ ಅಯ್ಯರ್​​, ಇಶಾನ್​​ ಕಿಶನ್​ಗೆ ಮತ್ತೆ ಶಾಕ್​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2024/01/Ishan-Kishan_Shreyas-Iyer.jpg

Load More