/newsfirstlive-kannada/media/post_attachments/wp-content/uploads/2024/07/Bumrah_Rohit.jpg)
ಬಾರ್ಡರ್​​-ಗವಾಸ್ಕರ್​ ಸರಣಿಯ ಸೋಲು ಭಾರತೀಯ ಕ್ರಿಕೆಟ್​ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಟಗಾರರ ಪರ್ಫಾಮೆನ್ಸ್​, ರೋಹಿತ್​ ಶರ್ಮಾ ನಾಯಕತ್ವ, ಕೋಚ್ ಗಂಭೀರ್​​​ ನಿರ್ಧಾರಗಳ ಬಗ್ಗೆ ಚರ್ಚೆ ಎದ್ದಿತ್ತು. ಇದ್ರ ಬೆನ್ನಲ್ಲೇ ಬಿಸಿಸಿಐ ಬಾಸ್​ಗಳು ರಿವ್ಯೂ ಮೀಟಿಂಗ್​ಗೆ ಬುಲಾವ್​ ನೀಡಿದ್ರು. ಕುತೂಹಲ ಕೆರಳಿಸಿದ್ದ ಹೈವೋಲ್ಟೆಜ್​ ಮೀಟಿಂಗ್​ ಬಿಸಿಸಿಐ ಹೆಡ್​​ ಕ್ವಾಟರ್ಸ್​ನಲ್ಲಿ ನಡೆದಿದೆ. ಬಿಸಿಸಿಐ ಬಾಸ್​​ಗಳು, ಸೆಲೆಕ್ಟರ್ಸ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​​ ಗೌತಮ್​ ಗಂಭೀರ್​ ಭಾಗಿಯಾಗಿದ್ದ ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಯಾಗಿದೆ.
ಚಾಂಪಿಯನ್ಸ್​ ಟ್ರೋಫಿ ಅಂತ್ಯದವರೆಗೆ ರೋಹಿತ್​ ನಾಯಕ.!
ಆಸ್ಟ್ರೇಲಿಯಾ ಪ್ರವಾಸದ ಸೋಲಿನ ಬಳಿಕ ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನೆ ಎದ್ದಿತ್ತು. ಸಭೆಯಲ್ಲಿ ಈ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದ್ದು, ಇನ್ನು ಕೆಲ ತಿಂಗಳು ನಾನು ನಾಯಕನಾಗಿ ಮುಂದುವರೆಯುತ್ತೇನೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ. ಕೊಚ್​ ಗೌತಮ್​​ ಗಂಭೀರ್​ ಕೂಡ ಚಾಂಪಿಯನ್ಸ್​ ಟ್ರೋಫಿ ಅಂತ್ಯದವರೆಗೆ ನಾಯಕತ್ವದಲ್ಲಿ ಬದಲಾವಣೆ ಬೇಡ ಎಂದಿದ್ದಾರೆ. ಇದಕ್ಕೆ ಒಕೆ ಎಂದಿರೋ ಬಿಸಿಸಿಐ ಬಾಸ್​ಗಳು ಚಾಂಪಿಯನ್ಸ್​ ಟ್ರೋಫಿ ರಿಸಲ್ಟ್​ನ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಬೂಮ್ರಾಗೆ ನಾಯಕತ್ವ ನೀಡಲು ಕೆಲವರ ವಿರೋಧ.!
ರೋಹಿತ್​ ಶರ್ಮಾ ಬಳಿಕ ಜಸ್​ಪ್ರಿತ್​ ಬೂಮ್ರಾಗೆ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕತ್ವದ ಜವಾಬ್ಧಾರಿ ನೀಡೋ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇದಕ್ಕೆ ಕೆಲ ಬಿಸಿಸಿಐ ಅಧಿಕಾರಿಗಳು, ಸೆಲೆಕ್ಟರ್ಸ್​​​ ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣಕ್ಕೆ ಬೂಮ್ರಾಗೆ ವಿಶ್ರಾಂತಿ ನೀಡಬೇಕಾಗುತ್ತೆ. ನಾಯಕನಾಗಿ ಎಲ್ಲಾ ಪಂದ್ಯಗಳಿಗೂ ಬೂಮ್ರಾ ಲಭ್ಯರಿರಲ್ಲ. ಹೀಗಾಗಿ ಬೂಮ್ರಾಗೆ ನಾಯಕತ್ವ ನೀಡೋದು ಬೇಡ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯೋ ಟೀಮ್​​ ಇಂಡಿಯಾ ಆಟಗಾರರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾಗವಾಗಲಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಅನ್ನೋ ಕುತೂಹಲ ಹೆಚ್ಚಾಗಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಶಾಕಿಂಗ್​ ನ್ಯೂಸ್​ ಒಂದಿದೆ. ಇಂಗ್ಲೆಂಡ್​​​ ವಿರುದ್ಧ ಸರಣಿಗೆ ಮುನ್ನ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದ ಜಸ್ಪ್ರಿತ್ ಬುಮ್ರಾ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಇತ್ತೀಚಿಗೆ ಬಾರ್ಡರ್ ಗವಾಸ್ಕರ್ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ವೇಳೆ ಜಸ್ಪ್ರಿತ್ ಬುಮ್ರಾ ಮೈದಾನದಿಂದ ಹೊರ ನಡೆದರು. ಮೈದಾನದಿಂದ ಹೊರ ಹೋಗುತ್ತಿದ್ದಂತೆ ಬುಮ್ರಾ ಬೌಲಿಂಗ್ ಕೋಚ್ ಹಾಗೂ ಸಿಬ್ಬಂದಿ ಜತೆಗೆ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಇವರ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಇವರು 3 ತಿಂಗಳು ರೆಸ್ಟ್​ ಮಾಡಬೇಕಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us