ಕ್ಯಾಪ್ಟನ್​ ಆಗಬೇಕಿದ್ದ ಹಾರ್ದಿಕ್​ ಪಾಂಡ್ಯಗೆ ಮತ್ತೆ ಮೋಸ; ಬಿಸಿಸಿಐನಿಂದ ಬಿಗ್​​ ಶಾಕ್​​

author-image
Ganesh Nachikethu
Updated On
IND vs BAN T20; ಈ ಪಿಚ್​ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ್ರೆ ಸೂರ್ಯಗೆ ಅದೃಷ್ಟ, ಯಾಕೆ?
Advertisment
  • ಹಾರ್ದಿಕ್​ ಪಾಂಡ್ಯ ಅವರನ್ನೇ ಸೈಡ್​ಲೈನ್​ ಮಾಡಿದ ಸ್ಟಾರ್​​
  • ಸ್ಟಾರ್​ ಪ್ಲೇಯರ್​ಗೆ ಬಿಸಿಸಿಐ ಮಣೆ ಹಾಕಲು ಕಾರಣವೇನು?
  • ಕ್ಯಾಪ್ಟನ್ಸಿ ರೇಸ್​ನಲ್ಲಿದ್ದ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​​

ಇಂಗ್ಲೆಂಡ್​​ ವಿರುದ್ಧದ ಟಿ20 ಸಿರೀಸ್​ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಹಿರಿಯರಿಗೆ ರೆಸ್ಟ್​ ನೀಡಿರುವ ಸೆಲೆಕ್ಷನ್ ಕಮಿಟಿ, ಯಂಗ್ ಟಿ20 ಸ್ಪೆಷಲಿಸ್ಟ್​​ಗಳಿಗೆ ಮಣೆ ಹಾಕಿದೆ. ಫೈರಿ ಆಟಗಾರರ ತಂಡ ಇಂಗ್ಲೆಂಡ್ ಸರಣಿಯಲ್ಲಿ ಸಿಕ್ಸರ್​ ಮಳೆ ಸುರಿಸೋ ಮುನ್ಸೂಚನೆಯನ್ನ ನೀಡ್ತಿದೆ. ಆದ್ರೆ, ಸೂರ್ಯಕುಮಾರ್ ಸಾರಥ್ಯದ ಟಿ20 ತಂಡದಲ್ಲಿ ಅಕ್ಷರ್ ಪಟೇಲ್ ಉಪ ನಾಯಕರಾಗಿದ್ದಾರೆ. ಇದೇ ಈಗ ಇಂಡಿಯನ್ ಕ್ರಿಕೆಟ್ ಲೋಕದ ಹಾಟ್​ ಟಾಫಿಕ್.

ಅಕ್ಷರ್​ ಪಟೇಲ್​ಗೆ ಉಪನಾಯಕನ ಪಟ್ಟ

ಸ್ಟಾರ್​​ ಪ್ಲೇಯರ್​ ಅಕ್ಷರ್ ಪಟೇಲ್​​​ಗೆ ಈಗ ಟೀಮ್​ ಇಂಡಿಯಾದ ಉಪ ನಾಯಕನ ಪಟ್ಟ ಒಲಿದಿದೆ. ಡಬಲ್​ ಪ್ರಮೋಷನ್​​ ವೈಯಕ್ತಿಕವಾಗಿ ಅಕ್ಷರ್ ಪಟೇಲ್​ಗೆ ಡಬಲ್ ಖುಷಿ ತಂದಿದೆ. ಆದ್ರೆ, ಅಕ್ಷರ್ ಪಟೇಲ್ ಟಿ20 ಉಪ ನಾಯಕನ ಹುದ್ದೆಗೇರಿರೋದು ಬಹುತೇಕರಿಗೆ ನಿಜಕ್ಕೂ ಅಚ್ಚರಿ ತರಿಸಿರೋದು ಸುಳ್ಳಲ್ಲ.

ಟಿ20 ತಂಡದ ಉಪ ನಾಯಕನ ರೇಸ್​ನಲ್ಲಿ ಅಕ್ಷರ್​ ಹೆಸರು ಇರಲೇ ಇಲ್ಲ. ಅನುಭವಿ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಪಾಂಡ್ಯನ ಸೈಡ್​ಲೈನ್​ ಮಾಡಿ ಅಕ್ಷರ್​​ ಪಟೇಲ್​ಗೆ ಉಪನಾಯಕ ಪಟ್ಟ ಕಟ್ಟಿರೋದು ನಿಜಕ್ಕೂ ಸರ್​ಪ್ರೈಸ್​​! ಅಂದ್ಹಾಗೆ ಸುಖಾ ಸುಮ್ಮನೆ ಈ ನಿರ್ಧಾರವನ್ನ ಸೆಲೆಕ್ಷನ್​ ಕಮಿಟಿ ಮಾಡಿಲ್ಲ. ಇದಕ್ಕೆ ಮಹತ್ವದ ಕಾರಣಗಳಿವೆ.

ಸೌತ್​ ಆಫ್ರಿಕಾ ಪ್ರವಾಸದಲ್ಲಿ ಇರಲಿಲ್ಲ ಉಪ ನಾಯಕ!

ವೈಟ್​ಬಾಲ್ ತಂಡದ ವೈಸ್ ಕ್ಯಾಪ್ಟನ್ ಆಗಿ ಈಗಾಗಲೇ ಶುಭ್​ಮನ್ ಗಿಲ್ ಗುರುತಿಸಿಕೊಂಡಿದ್ದಾರೆ. ಆದ್ರೆ, ಈ ಹಿಂದೆ ಗಿಲ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸ ಮಾಡಿತ್ತು. ಆಗ ಯಾರಿಗೂ ಉಪನಾಯಕನ ಹೊಣೆಯನ್ನ ನೀಡಿರಲಿಲ್ಲ. ಆದ್ರೀಗ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಅಕ್ಷರ್​ಗೆ ವೈಸ್ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ. ಅನುಭವಿ ಹಾರ್ದಿಕ್​​ರನ್ನೂ ಅಕ್ಷರ್​ ಓವರ್​ ಟೇಕ್​ ಮಾಡಿದ್ದಾರೆ.

ಈ ಹಿಂದೆ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ನಾಯಕನ ರೇಸ್​ನಲ್ಲಿದ್ರು. ನಾಯಕನಾಗಿ ಕೆಲ ಸರಣಿಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಕೂಡ ಉಪನಾಯಕನ ಸ್ಥಾನ ನೀಡಿದ್ರೆ, ಹಾರ್ದಿಕ್​ ಅವಮಾನ ಮಾಡಿದಂತಾಗಲಿದೆ. ಜೊತೆಗೆ ಇದು ತಂಡದ ಡ್ರೆಸ್ಸಿಂಗ್​ ರೂಮ್​ ವಾತಾವಣವನ್ನೂ ಕೆಡಿಸೋ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಟ್ಟಿರೋ ಸೆಲೆಕ್ಷನ್​​ ಕಮಿಟಿ ಅಕ್ಷರ್​ಗೆ ಪಟ್ಟ ಕಟ್ಟಿದೆ.

ಇದನ್ನೂ ಓದಿ:ಟೀಮ್​ ಇಂಡಿಯಾದ ಸ್ಟಾರ್​​ ಅಕ್ಷರ್​​ ಪಟೇಲ್​ಗೆ ಜಾಕ್​ಪಾಟ್​​; ಬಿಸಿಸಿಐನಿಂದ ಅಚ್ಚರಿ ನಿರ್ಧಾರ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment