newsfirstkannada.com

T20 ವಿಶ್ವಕಪ್; ಹೊಸ ಜವಾಬ್ದಾರಿ ಖುಷಿಯಲ್ಲಿದ್ದ ಕೊಹ್ಲಿಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

Share :

Published April 26, 2024 at 5:26pm

Update April 26, 2024 at 5:46pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​!

    ಆರ್​​ಸಿಬಿ ಪರ ಸ್ಟಾರ್​ ಬ್ಯಾಟರ್​​​ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ

    ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯಲು ಕೊಹ್ಲಿಗೆ ಸ್ಟ್ರೈಕ್​ ರೇಟ್​ದೇ ಸಮಸ್ಯೆ

ಸತತ ಆರು ಸೋಲುಗಳ ಬಳಿಕ ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಹೈದರಾಬಾದ್​​ ತಂಡವನ್ನು ತನ್ನ ತವರಿನಲ್ಲೇ ಕಟ್ಟಿ ಹಾಕಿ ಆರ್​​ಸಿಬಿ 2ನೇ ಗೆಲುವು ಸಾಧಿಸಿದೆ.

ಇನ್ನು, ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸೋ ಮೂಲಕ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​​ 430 ರನ್​​ಗಳೊಂದಿಗೆ ಅಗ್ರಸ್ಥಾನದಲ್ಲಿ ಇದ್ದಾರೆ. ಈ ಸೀಸನ್​ನಲ್ಲಿ ತಾನು ಆಡಿರೋ 9 ಪಂದ್ಯಗಳಲ್ಲಿ 3 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ. ಈ ಐಪಿಎಲ್‌ ಸೀಸನ್​ನಲ್ಲಿ ಅಜೇಯ 113* ರನ್‌ ವಿರಾಟ್‌ ಕೊಹ್ಲಿ ಬೆಸ್ಟ್‌ ನಾಕೌಟ್ ಆಗಿದೆ.

ಸದ್ಯ ಇಷ್ಟು ಅದ್ಭುತ ಪ್ರದರ್ಶನ ನೀಡುತ್ತಿರೋ ಕೊಹ್ಲಿ ಸ್ಟ್ರೈಕ್​ ರೇಟ್​ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹೈದರಾಬಾದ್​ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಪವರ್​ ಪ್ಲೇನಲ್ಲಿ 18 ಎಸೆತಗಳಲ್ಲಿ 32 ರನ್‌ ಗಳಿಸಿ ಒಳ್ಳೇ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಹೊಂದಿದ್ದರು. ಈ ಪೈಕಿ 1 ಸಿಕ್ಸರ್​​, 4 ಫೋರ್​ ಸಿಡಿಸಿದ್ರು. ಆದರೆ 7-15 ಓವರ್‌ಗಳಲ್ಲಿ ಕೊಹ್ಲಿ ಒಂದು ಬೌಂಡರಿಗೆ ಕೈ ಹಾಕಲಿಲ್ಲ. ಕೊಹ್ಲಿ ತನ್ನ ಕೊನೆ 25 ಎಸೆತಗಳಲ್ಲಿ ಕೇವಲ 19 ರನ್‌ ಗಳಿಸಿದ್ರು. 43 ಬಾಲ್​ಗಳಲ್ಲಿ 51 ರನ್​ ಗಳಿಸಿದ್ದ ಕೊಹ್ಲಿ ಸ್ಟ್ರೈಕ್​ ರೇಟ್​ 119 ಇತ್ತು. ಹೀಗಾಗಿ ಇದು ಟಿ20 ವಿಶ್ವಕಪ್​​ಗೆ ಟೀಮ್​ ಇಂಡಿಯಾ ಮೇಲೆ ಪರಿಣಾಮ ಬೀರಲಿದ್ದು, ಕೊಹ್ಲಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕಾ? ಬೇಡವೋ? ಅನ್ನೋದರ ಬಿಸಿಸಿಐ ಯೋಚನೆ ಮಾಡುತ್ತಿದೆಯಂತೆ. ಈ ಮೂಲಕ ಕೊಹ್ಲಿಗೆ ಬಿಸಿಸಿಐ ಬಿಗ್​ ಶಾಕ್​​​ ಕೊಟ್ಟಿದೆ.

ಇದನ್ನೂ ಓದಿ: ವಿರಾಟ್ ಮತ್ತೊಂದು ದಾಖಲೆ.. ಟೀಕೆ ಮಾಡೋರು, ಇಷ್ಟ ಪಡೋರು ಓದಲೇಬೇಕಾದ ಸ್ಟೋರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್; ಹೊಸ ಜವಾಬ್ದಾರಿ ಖುಷಿಯಲ್ಲಿದ್ದ ಕೊಹ್ಲಿಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

https://newsfirstlive.com/wp-content/uploads/2024/01/Virat-Kohli_ODI.jpg

Load More