/newsfirstlive-kannada/media/post_attachments/wp-content/uploads/2024/11/RCB.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 14ನೇ ತಾರೀಕಿನಿಂದ ಶುರು ಆಗಬೇಕಿತ್ತು. ಈಗ ಬಿಸಿಸಿಐ ಐಪಿಎಲ್​​ ಆರಂಭದ ದಿನಾಂಕ ದಿಢೀರ್​​ ಬದಲಿಸಿದೆ. 2025ರ ಐಪಿಎಲ್​ ಸೀಸನ್​​ ಮಾರ್ಚ್​​ 23ನೇ ತಾರೀಕಿನಿಂದ ಶುರುವಾಗಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಇಷ್ಟೇ ಅಲ್ಲ ಫೈನಲ್​ ಮೇ 25ರಂದು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಸಿಸಿಐ ಸಭೆ ಬಳಿಕ ಮಹತ್ವದ ನಿರ್ಧಾರ
ಮುಂದಿನ ಸೀಸನ್​ ಐಪಿಎಲ್​ ಕುರಿತು ಬಿಸಿಸಿಐ ವಿಶೇಷ ಸಭೆ ನಡೆಸಿದೆ. ಸಭೆ ನಂತರ ಮಾತಾಡಿದ ರಾಜೀವ್ ಶುಕ್ಲಾ ಅವರು, ಸಭೆಯಲ್ಲಿ ದೊಡ್ಡ ಸಮಸ್ಯೆ ಇತ್ತು. ಅದು ಖಜಾಂಚಿ ಮತ್ತು ಕಾರ್ಯದರ್ಶಿ ಆಯ್ಕೆ. ಈಗ ಎಲ್ಲವೂ ಬಗೆಹರಿದಿದೆ. ಜತೆಗೆ 1 ವರ್ಷಕ್ಕೆ ಐಪಿಎಲ್ ಆಯುಕ್ತರ ನೇಮಕವೂ ಆಗಿದೆ. ಐಪಿಎಲ್ 2025 ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ ಎಂದರು.
ಐಪಿಎಲ್​ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಮುಂದಿನ ಸಭೆ ಜನವರಿ 18 ಅಥವಾ 19ರಂದು ನಡೆಯಲಿದೆ. ಅಂದು ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು ರಾಜೀವ್​ ಶುಕ್ಲಾ.
ಐಪಿಎಲ್​ ದಿನಾಂಕ ಮುಂದೂಡಿಕೆಗೆ ಕಾರಣವೇನು?
ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4ರಂದು ನಡೆಯಲಿದೆ. 2ನೇ ಸೆಮಿಫೈನಲ್​​​ ಮಾರ್ಚ್ 5ರಂದು ನಡೆಯಲಿದೆ. ಇದಾದ ಬಳಿಕ ಮಾರ್ಚ್ 9ರಂದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್​​ 14ನೇ ತಾರೀಕು ಐಪಿಎಲ್​ ಶುರುವಾದಲ್ಲಿ ಆಟಗಾರರಿಗೆ ರೆಸ್ಟ್​ ಸಿಗುವುದಿಲ್ಲ. ಹೀಗಾಗಿ ಆಟಗಾರರಿಗೆ 2 ವಾರ ರೆಸ್ಟ್​ ನೀಡಲು ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.
ಇದನ್ನೂ ಓದಿ:2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ; ಬಲಿಷ್ಠ ತಂಡ ಪ್ರಕಟ; ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us