/newsfirstlive-kannada/media/post_attachments/wp-content/uploads/2025/04/PANDYA_KOHLI.jpg)
ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಸೂಪರ್​ ಸ್ಟಾರ್​​ಗಳಿಗೊಂದು ನ್ಯಾಯ, ಯುವ ಆಟಗಾರರಿಗೊಂದು ನ್ಯಾಯನಾ?. ಹೀಗೊಂದು ಚರ್ಚೆ ಸದ್ಯ ಕ್ರಿಕೆಟ್​ ವಲಯದಲ್ಲಿ ನಡೀತಿದೆ. ನೋಟ್​ಬುಕ್​ ಸೆಲಬ್ರೇಷನ್​ ಮಾಡಿ ಫೇಮಸ್​ ಆಗಿರುವ ದಿಗ್ವೇಶ್​ ರಾಠಿ ಈ ಚರ್ಚೆಗೆ ಕಾರಣವಾಗಿರುವ ಆಟಗಾರ. ಯಂಗ್​ಸ್ಟರ್ಸ್​​ VS ಸೀನಿಯರ್ಸ್​ ಡಿಬೆಟ್ ಯಾಕೆ ಅನ್ನೋದ್ರ ಡಿಟೇಲ್ಸ್​ ಇಲ್ಲಿದೆ.
IPL ಸೀಸನ್​​ 18ರಲ್ಲಿ ಬೌಂಡರಿ, ಸಿಕ್ಸರ್​ಗಳ ಅಬ್ಬರ ಎಷ್ಟು ಜೋರಾಗಿದೆ. ಪಂದ್ಯದಿಂದ ಪಂದ್ಯಕ್ಕೆ ರನ್​ಹೊಳೆ ಹರೀತಿದೆ. ಇದ್ರ ನಡುವೆ ಆಟಗಾರರ ಮೇಲೆ ದಂಡದ ಮೇಲೆ ದಂಡವೂ ಬೀಳ್ತಿದೆ. ಸ್ಲೋ ಓವರ್​ ರೇಟ್​, ಅಶಿಸ್ತಿನ ಕಾರಣಕ್ಕೆ ಹಲವು ಆಟಗಾರರ ಮೇಲೆ ದಂಡಾಸ್ತ್ರದ ಪ್ರಯೋಗವಾಗಿದೆ. ಸಂಜು ಸ್ಯಾಮ್ಸನ್​, ರಜತ್​ ಪಾಟಿದಾರ್​, ಗ್ಲೆನ್​ ಮ್ಯಾಕ್​ವೆಲ್, ಇಶಾಂತ್​ ಶರ್ಮಾ ಮೇಲೆ ಫೈನ್​ ಬಿದ್ದಿದೆ. ಆದ್ರೆ, ಇವರೆಲ್ಲರಿಗಿಂತ ಲಕ್ನೋನ ಯುವ ಆಟಗಾರ ದಿಗ್ವೇಶ್​ ರಾಠಿ ಮೇಲೆ ಬಿದ್ದಿರೋ ಫೈನ್​ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಮ್ಯಾಚ್​ ನಂ.13- ಎದುರಾಳಿ- ಪಂಜಾಬ್​ ಕಿಂಗ್ಸ್​​
ಎಕಾನ ಸ್ಟೇಡಿಯಂನಲ್ಲಿ ನಡೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಲಕ್ನೋ​ ತಂಡದ ಸ್ಪಿನ್ನರ್​ ದಿಗ್ವೇಶ್ ರಾಠಿ ಪವರ್​ ಪ್ಲೇನಲ್ಲೇ ಕಮಾಲ್ ಮಾಡಿದ್ರು. ಪಂಜಾಬ್​ ಓಪನರ್​​ ಪ್ರಿಯಾಂಶ್​ ಆರ್ಯ ವಿಕೆಟ್​ ಉರುಳಿಸಿ ನೋಟ್​ಬುಕ್​ ಸೆಲೆಬ್ರೇಷನ್​ ಮಾಡಿದರು. ಈ ಸೆಲೆಬ್ರೇಷನ್ನೇ ನೋಡಿ ಸದ್ಯ ಕ್ರಿಕೆಟ್​ ಲೋಕದಲ್ಲಿ ಹೊಸ ಡಿಬೆಟ್​ಗೆ ಕಾರಣವಾಗಿರೋದು. ಯಾಕಂದ್ರೆ, ಅಂದು ಮ್ಯಾಚ್​​ ರೆಫರಿ ಕೆಂಗಣ್ಣಿಗೆ ಗುರಿಯಾದ ದಿಗ್ವೇಶ್​ ರಾಠಿ ದಂಡಕ್ಕೆ ಗುರಿಯಾದ್ರು. ಇಷ್ಟೇ ಅಲ್ಲ, ಜೊತೆಗೆ ಒಂದು ಡಿಮೆರಿಟ್​ ಪಾಯಿಂಟ್​​ ಕೂಡ ಪಡೆದರು.
ಮ್ಯಾಚ್​ ನಂ.16- ಎದುರಾಳಿ- ಮುಂಬೈ ಇಂಡಿಯನ್ಸ್​
ಎಕಾನ ಮೈದಾನದಲ್ಲೇ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಮತ್ತೆ ದಿಗ್ವೇಶ್​ ನೋಟ್​ಬುಕ್​​ ಸೆಲಬ್ರೇಷನ್​ ಮಾಡಿದ್ರು. ಮುಂಬೈನ ನಮನ್​ಧೀರ್​ ಕ್ಲೀನ್​ ಬೋಲ್ಡ್​ ಮಾಡಿದ ದಿಗ್ವೇಶ್​ ನೋಟ್​ಬುಕ್​ ಸೆಲಬ್ರೇಷನ್​ ಮಾಡಿ ಸಂಭ್ರಮಿಸಿದರು. ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಮತ್ತೊಮ್ಮೆ ಮ್ಯಾಚ್​ ರೆಫರಿ ದಂಡಾಸ್ತ್ರ ಪ್ರಯೋಗಿಸಿದರು.
30 ಲಕ್ಷಕ್ಕೆ ಸೇಲ್​.. 5,62,500ರೂ ಫೈನ್​.!
ಈ ದಿಗ್ವೇಶ್​ ರಾಠಿ ಹರಾಜಿನಲ್ಲಿ ಸೇಲ್​ ಆಗಿದ್ದು ಕೇವಲ 30 ಲಕ್ಷ ರೂಪಾಯಿಗೆ. ಬೇಸ್​ ಪ್ರೈಸ್​ ನೀಡಿ ಲಕ್ನೋ ಸೂಪರ್​ ಜೈಂಟ್ಸ್​ ಫ್ರಾಂಚೈಸಿ ಆಕ್ಷನ್​ನಲ್ಲಿ ಖರೀದಿಸಿತ್ತು. ಇದೀಗ ಈಗಾಗಲೇ 2 ಬಾರಿ ಮ್ಯಾಚ್​ ರೆಫರಿ ಕೆಂಗಣ್ಣಿಗೆ ಗುರಿಯಾಗಿರೋ ದಿಗ್ವೇಶ್​ ರಾಠಿ 5 ಲಕ್ಷದ, 62 ಸಾವಿರದ 500 ರೂಪಾಯಿ ಫೈನ್​ ಪಾವತಿಸಿದ್ದಾರೆ. ಅದಲ್ಲದೇ 2 ಡಿಮೆರಿಟ್​ ಪಾಯಿಂಟ್​ ಕೂಡ ಪಡೆದಿರೋದ್ರಿಂದ ಬ್ಯಾನ್​ ಭೀತಿಯೂ ಎದುರಾಗಿದೆ. ಇನ್ನೆರಡು ಡಿಮೆರಿಟ್​ ಪಾಯಿಂಟ್ಸ್​ ಬಂದ್ರೆ 1 ಪಂದ್ಯದಿಂದ ಹೊರಗೆ ಕೂರಬೇಕಾಗುತ್ತದೆ.
ಸೀನಿಯರ್ಸ್​ಗೊಂದು ನ್ಯಾಯ.? ಯಂಗ್​​ಸ್ಟರ್ಸ್​​ಗೊಂದು ನ್ಯಾಯ.?
ದಿಗ್ವೇಶ್​​ ರಾಠಿಗೆ ಫೈನ್​ ಹಾಕಿರೋದು ಸದ್ಯ ಹಾಟ್​ ಡಿಬೆಟ್​ಗೆ ಕಾರಣವಾಗಿದೆ. ಇದೇ ಐಪಿಎಲ್​ನಲ್ಲಿ ಇನ್ನೂ ಹಲವು ಆಟಗಾರರು ಅತಿರೇಕದ ಸಂಭ್ರಮಾಚರಣೆ ಮಾಡಿದ್ದಿದೆ. ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ಗಳೇ ಅತಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಆದ್ರೆ, ಅವರಿಗಿಲ್ಲದ ದಂಡ, ಈ ಯುವ ಆಟಗಾರ ಮೇಲ್ಯಾಕೆ ಅನ್ನೋದು ಕ್ರಿಕೆಟ್​ ವಲಯದ ಪ್ರಶ್ನೆಯಾಗಿದೆ. ಮಾಜಿ ಕ್ರಿಕೆಟಿಗ, ಐಪಿಎಲ್​ನಲ್ಲಿ ಕಾಮೆಂಟೇಟೆರ್​​ ಆಗಿ ಕಾರ್ಯ ನಿರ್ವಹಿಸ್ತಾ ಇರೋ ಸೈಮನ್​ ಡೌಲ್​​ ಕೂಡ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಹಿರಿಯ ಆಟಗಾರರಿಗೆ ಯಾಕಿಲ್ಲ.?
ನನಗಿದು ಇಷ್ಟವಾಗಿಲ್ಲ. ನನ್ನ ಪ್ರಕಾರ ಆತ ಏನೂ ತಪ್ಪು ಮಾಡಿಲ್ಲ. ಟೀಮ್ ಇಂಡಿಯಾದ ಕೆಲ ಹಿರಿಯ ಆಟಗಾರರು ಇದಕ್ಕಿಂತ ಹೆಚ್ಚಿನ ಸಂಭ್ರಮಾಚರಣೆ ಮಾಡ್ತಾರೆ. ಆದ್ರೆ, ಅವರಿಗೆ ದಂಡ ಬೀಳಲ್ಲ. ಆದ್ರೆ, ಯುವ ಆಟಗಾರನಿಗೆ ದಂಡ ವಿಧಿಸುತ್ತಿದ್ದಾರೆ. ಪ್ರಿಯಾಂಶ್ ಆರ್ಯ ಮತ್ತು ದಿಗ್ವೇಶ್ ರಾಠಿ ಗೆಳೆಯರು. ಗೆಳೆತನ ಸಲುಗೆಯಲ್ಲಿ ಆತ ಸಂಭ್ರಮಿಸಿರಬಹುದು.
ಸೈಮನ್ ಡೌಲ್, ಮಾಜಿ ಕ್ರಿಕೆಟಿಗ
ಸೈಮನ್​ ಡೌಲ್​ ಹೇಳಿದಂತೆ ಐಪಿಎಲ್​ ಅಖಾಡದಲ್ಲಿ ತಂಡ ಗೆದ್ದಾಗ, ವಿಕೆಟ್​ ಉರುಳಿದಾಗ ಹಲವಾರು ಸೀನಿಯರ್​ ಆಟಗಾರರು ಇದಕ್ಕಿಂತ ಹೆಚ್ಚಿನ ಅಗ್ರೆಸ್ಸಿಸ್​ ಸೆಲಬ್ರೇಷನ್​ ಮಾಡ್ತಿದ್ದಾರೆ. ಇದಕ್ಕೆ ವಿರಾಟ್​ ಕೊಹ್ಲಿಗಿಂತ ಬೆಸ್ಟ್​ ಎಕ್ಸಾಂಪಲ್​ ಬೇಕಿಲ್ಲ. ಮುಂಬೈನಲ್ಲಿ ಗೆದ್ದಾಗ ಕೊಹ್ಲಿ ಅಗ್ರೆಸ್ಸಿವ್​ ಆಗಿ ಸಂಭ್ರಮಿಸಿದ ವಿಡಿಯೋಗಳು ಈಗಲೂ ಟ್ರೆಂಡಿಂಗ್​​ನಲ್ಲಿದೆ.
ಕೊಹ್ಲಿ ಮಾತ್ರವಲ್ಲ, ಇನ್ನೂ ಹಲವು ಆಟಗಾರರು ಹೀಗೆ ಸೆಲೆಬ್ರೇಟ್​ ಮಾಡಿದ್ದಾರೆ. ಆದ್ರೆ, ಅವರ್ಯಾರಿಗೂ ಫೈನ್​ ಬಿದ್ದಿಲ್ಲ. ಯುವ ಆಟಗಾರನ ಮೇಲೆ ದಂಡಾಸ್ತ್ರ ಪ್ರಯೋಗಿಸಿ, ಸೂಪರ್​ ಸ್ಟಾರ್​​ಗಳನ್ನ ಟಚ್​ ಮಾಡದೇ ಇರೋದು ಇಬ್ಬಿಗೆಯ ನೀತಿಯನ್ನ ಬಟಾ ಬಯಲು ಮಾಡಿದೆ. ಮುಂದಾದ್ರೂ ಈ ನೀತಿ ಬದಲಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ