ರೋಹಿತ್ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕಿ ಬಾಡಿ ಶೇಮಿಂಗ್ ಕಮೆಂಟ್; ಕ್ಯಾಪ್ಟನ್ ಬೆನ್ನಿಗೆ ನಿಂತ BCCI

author-image
Ganesh
Updated On
ರೋಹಿತ್ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕಿ ಬಾಡಿ ಶೇಮಿಂಗ್ ಕಮೆಂಟ್; ಕ್ಯಾಪ್ಟನ್ ಬೆನ್ನಿಗೆ ನಿಂತ BCCI
Advertisment
  • ಹೊಸ ವಿವಾದ ಹುಟ್ಟಿಸಿದ ಕಾಂಗ್ರೆಸ್ ವಕ್ತಾರೆಯ ಟ್ವೀಟ್
  • ಆಕರ್ಷಕವಲ್ಲದ ಕ್ಯಾಪ್ಟನ್ ರೋಹಿತ್ ಎಂದ ವಕ್ತಾರೆ
  • ವಿವಾದ ಆಗುತ್ತಿದ್ದಂತೆಯೇ ಟ್ವೀಟ್ ಡಿಲೀಟ್, ಬಿಜೆಪಿ ಟೀಕೆ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಟೀಕಿಸಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ. ಕೇರಳ ಕಾಂಗ್ರೆಸ್ ನಾಯಕಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹ್ಮದ್​ (Shama Mohamed) ಮಾಡಿರುವ ಟ್ವೀಟ್ ಒಂದು ಭಾರೀ ವಿವಾದ ಸೃಷ್ಟಿಸಿದೆ.

ಶಮಾ ಮೊಹ್ಮದ್ ವಿವಾದ ಏನು..?

ಶಮಾ ಮೊಹ್ಮದ್ ಅವರು, ರೋಹಿತ್ ಶರ್ಮಾ ಅವರ ಫ್ಯಾಟ್ ಬಗ್ಗೆ ಟ್ವೀಟ್ ಮಾಡಿದ್ದರು. ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ದಪ್ಪಗಿರುವ ಆಟಗಾರ. ಶರ್ಮಾ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಭಾರತದಲ್ಲಿ ಇದುವರೆಗಿನ ಆಕರ್ಷಕವಲ್ಲದ ಕ್ಯಾಪ್ಟನ್ ಅಂದ್ರೆ ಅದು ರೋಹಿತ್ ಶರ್ಮಾ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಅನ್ನ ಪ್ರಿಯರೇ.. ನೀವು ಮೂರು ಹೊತ್ತು ಅನ್ನ ತಿನ್ನುತ್ತಿದ್ದೀರಾ..? ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

publive-image

ಈ ಟ್ವೀಟ್ ವಿವಾದಕ್ಕೆ ನಾಂದಿ ಹಾಡಿದೆ. ವಿರೋಧ ಬೆನ್ನಲ್ಲೇ ‘ಬಾಡಿ ಶೇಮಿಂಗ್’ ಟ್ವೀಟ್ ಅನ್ನು ಶಮಾ ಡಿಲೀಟ್ ಮಾಡಿದ್ದರು. ಈ ಟ್ವೀಟ್​ನಿಂದ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಿದೆ. ಎಚ್ಚೆತ್ತುಕೊಂಡಿರುವ ಹೈಕಮಾಂಡ್, ಪೋಸ್ಟ್​ ಡಿಲೀಟ್ ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.

ಬಿಸಿಸಿಐ ಆಕ್ರೋಶ..
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಶಮಾ ಮೊಹ್ಮದ್ ಹೇಳಿಕೆಯನ್ನು ಖಂಡಿಸಿದ್ದಾರೆ. ಶಮಾ ಹೇಳಿಕೆ ದುರಾದೃಷ್ಟಕರ. ಜವಾಬ್ದಾರಿಯುತ ವ್ಯಕ್ತಿಯೋರ್ವರು ಕ್ಷುಲ್ಲಕ ಹೇಳಿಕೆ ನೀಡಿರೋದು ದುರಾದೃಷ್ಟಕರ. ನಿರ್ಣಾಯಕ ಐಸಿಸಿ ಟೂರ್ನಮೆಂಟ್​ನಲ್ಲಿ ಟೀಂ ಇಂಡಿಯಾ ಬ್ಯುಸಿಯಾಗಿದೆ. ಇಂಥ ಸಂರ್ಭದಲ್ಲಿ ಕ್ಷಲ್ಲಕ ಸಂದೇಶ ಪಾಸ್ ಮಾಡಲಾಗಿದೆ. ಇದು ತಂಡ ಅಥವಾ ವ್ಯಕ್ತಿ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಪ್ರತಿ ಆಟಗಾರರು ಕೂಡ ಉತ್ತಮ ಪ್ರದರ್ಶ ನೀಡುವತ್ತ ಗಮನ ಹರಿಸುತ್ತಿದ್ದಾರೆ. ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಇಂಥ ಹೇಳಿಕೆಗಳನ್ನು ನಿಲ್ಲಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಕಿಡಿಕಾರಿದ್ದಾರೆ. ಇನ್ನು ಇವರ ಹೇಳಿಕೆಯನ್ನು ಬಿಜೆಪಿ ಕೂಡ ಖಂಡಿಸಿದೆ. ಆ ಮೂಲಕ ಕಾಂಗ್ರೆಸ್​ ನಾಯಕಿಯ ಹೇಳಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ನಡೆಯೋದು ಫಿಕ್ಸಾ? ಮತ್ತೊಮ್ಮೆ ವಾಟಾಳ್ ನಾಗರಾಜ್‌ ಎಚ್ಚರಿಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment