ಸಂಜು ಸ್ಯಾಮ್ಸನ್​ಗೆ ಬಿಸಿಸಿಐನಿಂದ ಬುಲಾವ್​​; ಸ್ಟಾರ್​ ಕ್ರಿಕೆಟರ್​ಗೆ ಸುವರ್ಣಾವಕಾಶ​​

author-image
Ganesh Nachikethu
Updated On
ಸಂಜು ಸಿಡಿಸಿದ ಪವರ್ ಫುಲ್ ಸಿಕ್ಸರ್​.. ಮಹಿಳಾ ಅಭಿಮಾನಿಗೆ ಬಡಿದ ಚೆಂಡು, ನೋವಿನಿಂದ ಕಣ್ಣೀರು
Advertisment
  • ಈಗಾಗಲೇ 2025ರ ಚಾಂಪಿಯನ್ಸ್‌ ಟ್ರೋಫಿ ಶುರು
  • ನಾಳೆ ಟೀಮ್​ ಇಂಡಿಯಾ, ಬಾಂಗ್ಲಾ ಮುಖಾಮುಖಿ
  • ಇದರ ಮಧ್ಯೆ ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ಬುಲಾವ್​

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಈಗಾಗಲೇ ಶುರುವಾಗಿದೆ. ಟೀಮ್​ ಇಂಡಿಯಾದಿಂದ ಸ್ಟಾರ್​ ವಿಕೆಟ್​ ಕೀಪರ್​​ ರಿಷಬ್​ ಪಂತ್​​ ಹೊರಬಿದ್ದಿದ್ದಾರೆ. ಈಗ ಇವರ ಜಾಗಕ್ಕೆ ಸಂಜು ಸ್ಯಾಮ್ಸನ್​​ ಬರೋದು ಬಹುತೇಕ ಕನ್ಫರ್ಮ್​ ಆಗಿದೆ.

ಕಳೆದ ವರ್ಷ ನವೆಂಬರ್​​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬ್ಯಾಕ್​ ಟು ಬ್ಯಾಕ್​​ 2 ಶತಕ ಚಚ್ಚಿದ್ರು. ಈ ಮೂಲಕ ಅಮೋಘ ಪ್ರದರ್ಶನ ನೀಡಿದ್ರು. ಫಾರ್ಮ್‌ನಲ್ಲಿದ್ರೂ ಸಂಜು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದರು. ಇವರ ಬದಲಿಗೆ ಟೀಮ್​ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗೆ ರಿಷಬ್ ಪಂತ್ ಆಯ್ಕೆ ಆಗಿದ್ದರು.

ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ಬುಲಾವ್​​

ಈಗ ಪಂತ್​​ ಕಾಲಿಗೆ ಇಂಜುರಿ ಆಗಿದ್ದು, ಸಂಜು ಸ್ಯಾಮ್ಸನ್​​ಗೆ ಬಿಸಿಸಿಐ ಬುಲಾವ್​ ನೀಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಸಂಜು ಸ್ಯಾಮ್ಸನ್​​ ಟೀಮ್​ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಂಜು ಸ್ಯಾಮ್ಸನ್​ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗುಳಿದಿದ್ದರು. ಇದಕ್ಕೆ ಸಂಜು ಸ್ಯಾಮ್ಸನ್ ಮಾಡಿದ ಎಡವಟ್ಟು ಕಾರಣ ಆಗಿತ್ತು. ಈ ವಿಚಾರವಾಗಿ ಕೇರಳ ಕ್ರಿಕೆಟ್ ಅಸೋಸಿಯೇಷನ್​​ ಅಧ್ಯಕ್ಷ ಜಯೇಶ್ ಜಾರ್ಜ್ ಸಂಜು ಸ್ಯಾಮ್ಸನ್​​ ಅವರನ್ನು ಟೀಕಿಸಿದ್ದರು. ಈಗ ಮತ್ತೆ ಟೀಮ್​ ಇಂಡಿಯಾ ಪರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡುವ ಸಿಕ್ಕಿದ್ದು, ಸಂಜು ಸದ್ಬಳಕೆ ಮಾಡಿಕೊಳ್ಳಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment