/newsfirstlive-kannada/media/post_attachments/wp-content/uploads/2025/04/Jitesh_Sharma.jpg)
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ 2024-25ರ ಕೇಂದೀಯ ಒಪ್ಪಂದದ ಆಟಗಾರರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ, ಜಡೇಜಾ ಅವರು A+ ಕ್ಯಾಟಗರಿಯಲ್ಲಿ ವಾರ್ಷಿಕ 7 ಕೋಟಿ ಹಣ ಪಡೆಯುತ್ತಿದ್ದಾರೆ. ಆದರೆ ಪಟ್ಟಿಯಲ್ಲಿ ಕೆಲ ಆಟಗಾರರನ್ನು ಸೇರ್ಪೆಡೆ ಮಾಡಿಕೊಂಡ್ರೆ, ಐವರು ಪ್ಲೇಯರ್ಗಳ ಹೆಸರನ್ನು ಕೈಬಿಡಲಾಗಿದೆ.
ರಿಷಬ್ ಪಂತ್ ಅವರಿಗೆ ಬಿ ವಿಭಾಗದಿಂದ ಎ ವಿಭಾಗಕ್ಕೆ ಬಡ್ತಿ ನೀಡಲಾಗಿದೆ. ಬಿಸಿಸಿಐನ ವಾರ್ಷಿಕ ಕೇಂದ್ರೀಯ ಒಪ್ಪಂದದಲ್ಲಿ 2023-24ರ ಸೀಸನ್ನಲ್ಲಿ ಹೆಸರು ಪಡೆದಿದ್ದ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹಾಗೂ ಮಾಜಿ ಸ್ಪಿನ್ನರ್ ಆರ್.ಆಶ್ವಿನ್ ಸೇರಿದಂತೆ ಇನ್ನು ಮೂವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಒಪ್ಪಂದದಂತೆ ಇವರಿಗೆ ಇನ್ಮುಂದೆ ಹಣ ಬರುವುದಿಲ್ಲ.
ಶಾರ್ದೂಲ್ ಠಾಕೂರ್; ಇವರು 2023ರಲ್ಲಿ ಟೀಮ್ ಇಂಡಿಯಾದಲ್ಲಿ ಕೊನೆಯದಾಗಿ ಆಡಿದ್ದರು. ಇಂಜುರಿಗೆ ತುತ್ತಾಗಿದ್ದರಿಂದ ರಣಜಿ ಟ್ರೋಫಿಯಲ್ಲಿ 2ನೇ ಹಂತದಲ್ಲಿ ಮಾತ್ರ ಮೈದಾನದಲ್ಲಿ ಕಾಣಿಸಿದ್ದರು. ಬಳಿಕ ಸರ್ಜರಿಗೆ ಒಳಗಾಗಿದ್ದರು. ಸದ್ಯ ಇವರನ್ನು 2024-25ರ ವಾರ್ಷಿಕ ಒಪ್ಪಂದದಿಂದ ಕೈಬಿಡಲಾಗಿದೆ.
ರವಿಚಂದ್ರನ್ ಅಶ್ವಿನ್; ಇವರನ್ನೂ ಒಪ್ಪಂದದಿಂದ ಹೊರಗಿಡಲಾಗಿದೆ. 2024ರ ಡಿಸೆಂಬರ್ನಲ್ಲಿ ಟೀಮ್ ಇಂಡಿಯಾದ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಅಶ್ವಿನ್ ಗಬ್ಬಾದಲ್ಲಿ ನಡೆದ ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ನಲ್ಲಿ ಕೊನೆಯದಾಗಿ ಆಡಿದ್ದರು.
ಆವೇಶ್ ಖಾನ್; 2024ರ ನವೆಂಬರ್ನಲ್ಲಿ ಟೀಮ್ ಇಂಡಿಯಾದಲ್ಲಿ ಕೊನೆಯದಾಗಿ ಆವೇಶ್ ಖಾನ್ ಬೌಲಿಂಗ್ ಮಾಡಿದ್ದರು. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್ನಲ್ಲಿ ಒಳ್ಳೆಯ ಪರ್ಫಾಮೆನ್ಸ್ ತೋರುತ್ತಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಆವೇಶ್ ಖಾನ್ರನ್ನ ಒಪ್ಪಂದದಿಂದ ಹೊರಗೆ ಇಡಲಾಗಿದೆ.
ಇದನ್ನೂ ಓದಿ:ನೋ ಪಿಜ್ಜಾ, ನೋ ಮಟನ್, ಒನ್ಲಿ ಕ್ರಿಕೆಟ್.. 14ರ ವೈಭವ್ ಸೂರ್ಯವಂಶಿ ಕಮಿಟ್ಮೆಂಟ್ ಹೇಗಿದೆ?
ಜಿತೇಶ್ ಶರ್ಮಾ; ಸದ್ಯ ಆರ್ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2024ರ ಜನವರಿಯಿಂದ ಟೀಮ್ ಇಂಡಿಯಾದಲ್ಲಿ ಜಿತೇಶ್ ಶರ್ಮಾ ಆಡಿಲ್ಲ. ಟಿ20 ವರ್ಲ್ಡ್ಕಪ್ ಅವಕಾಶವನ್ನು ಕಳೆದುಕೊಂಡಿದ್ದಾರೆ. ಸದ್ಯ ಇವರನ್ನು ಕೇಂದ್ರಿಯ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
KS ಭರತ್; ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕರೂ ಭರತ್ ತಮ್ಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ರಿಷಭ್ ಪಂತ್ ಟೀಮ್ ಇಂಡಿಯಾಕ್ಕೆ ಮರಳಿದ್ರೆ, ಬ್ಯಾಕ್ಅಪ್ ಆಗಿ ಧೃವ್ ಜುರೆಲ್ ಅವರನ್ನು ವಿಕೆಟ್ ಕೀಪರ್ ಆಗಿದ್ದಾರೆ. ಹೀಗಾಗಿ ಭರತ್ ಅವಕಾಶದಿಂದ ವಂಚಿತರಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ