/newsfirstlive-kannada/media/post_attachments/wp-content/uploads/2024/12/Jasprit_Bumrah_ROHIT.jpg)
ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವೆ ಜನವರಿ 22ನೇ ತಾರೀಕಿನಿಂದ ಫೆಬ್ರವರಿ 12ರವರೆಗೆ 5 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ 7 ದಿನ ಬಾಕಿ ಇರೋ ಹೊತ್ತಲ್ಲೇ ಸರಣಿ ಮುಕ್ತಾಯವಾಗಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾಗೆ ಬಿಸಿಸಿಐ ಮಾಸ್ಟರ್​ ಸ್ಟ್ರೋಕ್​ ಕೊಟ್ಟಿದೆ.
ಬುಮ್ರಾಗೆ ರೆಸ್ಟ್​ ನೀಡಲು ನಿರ್ಧಾರ
ಇಂಗ್ಲೆಂಡ್​ ವಿರುದ್ಧ ಸರಣಿಯಿಂದ ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೊರಗುಳಿಯುವ ಸಾಧ್ಯತೆಯಿದೆ. ಬಿಸಿಸಿಐ ಆಯ್ಕೆ ಸಮಿತಿ ಬುಮ್ರಾ ಅವರಿಗೆ ವಿಶ್ರಾಂತಿ ಮಾಡಿ ಎಂದು ಹೇಳಿದೆಯಂತೆ. ಬುಮ್ರಾ ಅವರಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿವರೆಗೆ ವಿಶ್ರಾಂತಿ ನೀಡಲಾಗುವುದು ಎಂದು ತಿಳಿದು ಬಂದಿದೆ.
ಸ್ಟಾರ್​ ವೇಗಿ ಮೇಲೆ ಹೆಚ್ಚಿನ ಹೊರೆ
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಬುಮ್ರಾ ಹೈಎಸ್ಟ್​ ವಿಕೆಟ್​ ಕೀಪರ್​ ಆಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದುವರೆಗೆ 141.2 ಓವರ್ ಬೌಲಿಂಗ್ ಮಾಡಿರೋ ಇವರು ಬರೋಬ್ಬರಿ 30 ವಿಕೆಟ್ ಪಡೆದಿದ್ದಾರೆ. ಸದ್ಯ ವರ್ಕ್​​ಲೋಡ್​ ಜಾಸ್ತಿ ಆಗಿರೋ ಕಾರಣ ಬುಮ್ರಾ ಅವರಿಗೆ ರೆಸ್ಟ್​ ಮಾಡಿ ಎಂದು ಬಿಸಿಸಿಐ ಕೇಳಿಕೊಂಡಿದೆ. ತನಗೆ ಆಡಲು ಅವಕಾಶ ಮಾಡಿಕೊಡಿ ಎಂದ್ರೂ ಬುಮ್ರಾ ಮಾತಿಗೆ ಬಿಸಿಸಿಐ ಕ್ಯಾರೇ ಎನ್ನದೆ ಈ ನಿರ್ಧಾರಕ್ಕೆ ಬಂದಿದೆ.
ಸೀರೀಸ್​ ಯಾವಾಗ?
ಇಂಗ್ಲೆಂಡ್​​ ತಂಡ ಮುಂದಿನ ವರ್ಷ ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಜನವರಿ 22ನೇ ತಾರೀಕು ನಡೆಯಲಿದೆ. 2ನೇ ಪಂದ್ಯ ಜನವರಿ 25ರಂದು ಮತ್ತು 3ನೇ ಪಂದ್ಯ ಜನವರಿ 28 ರಂದು, 4ನೇ ಪಂದ್ಯ ಜನವರಿ 31ರಂದು, 5ನೇ ಪಂದ್ಯ ಫೆಬ್ರವರಿ 2ರಂದು ನಡೆಯಲಿದೆ. ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ನಾಗ್ಪುರ ಸ್ಟೇಡಿಯಮ್​ನಲ್ಲಿ ನಡೆಯಲಿದೆ. 2ನೇ ಏಕದಿನ ಪಂದ್ಯ ಫೆಬ್ರವರಿ 9 ರಂದು, 3ನೇ ಏಕದಿನ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಮಧ್ಯೆ ಮಹತ್ವದ ಸರಣಿ; ಬುಮ್ರಾ ಆಡೋದು ಡೌಟ್; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us