ಬೂಮ್ರಾ OK ಆಗಿದ್ದರೂ ಬಿಸಿಸಿಐ ಯಾಕೆ ರಿಸ್ಕ್ ತೆಗೆದುಕೊಳ್ಳಲಿಲ್ಲ? ಅಗರ್ಕರ್​​ ದೊಡ್ಡ ನಿರ್ಧಾರ

author-image
Ganesh
Updated On
ಕ್ಯಾಪ್ಟನ್ ಬೂಮ್ರಾ ಮೇಲೆ ಎಲ್ಲರ ಚಿತ್ತ.. ಮತ್ತೆ ಆತಂಕಕ್ಕೆ ಕಾರಣವಾಗ್ತಾರಾ ಬೂಮ್ ಬೂಮ್ ಬೂಮ್ರಾ..!?
Advertisment
  • ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟ
  • ಬೂಮ್ರಾರನ್ನು ತಂಡದಿಂದ ಕೈಬಿಟ್ಟ ಬಿಸಿಸಿಐ
  • ಬುಮ್ರಾ ಬದಲಿಗೆ ಹರ್ಷಿತ್ ರಾಣಾ ತಂಡಕ್ಕೆ ಆಯ್ಕೆ

ಚಾಂಪಿಯನ್ಸ್​ ಟ್ರೋಫಿಗೆ ಬಿಸಿಸಿಐನ ಆಯ್ಕೆ ಸಮಿತಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಜಸ್​​ಪ್ರಿತ್ ಬುಮ್ರಾ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಬಿಸಿಸಿಐ ಅಂತಿಮಗೊಳಿಸಿದ ಪಟ್ಟಿಯಲ್ಲಿ ಬುಮ್ರಾ ಅವರ ಹೆಸರನ್ನು ಕೈಬಿಡಲಾಗಿದೆ.

ಬುಮ್ರಾ ತಂಡದಲ್ಲಿ ಇಲ್ಲ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಒಂದಷ್ಟು ಪ್ರಶ್ನೆಗಳು ಎದ್ದಿವೆ. ನಿನ್ನೆ ಸಂಜೆವರೆಗೂ ಬುಮ್ರಾ ಫಿಟ್ ಇದ್ದಾರೆ. ಚಾಂಪಿಯನ್ಸ್​ ಟ್ರೋಫಿಗೆ ಅವರನ್ನು ಬಿಸಿಸಿಐ ಆಯ್ಕೆ ಮಾಡಲಿದೆ ಎಂದೇ ಹೇಳಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಬಿಸಿಸಿಐ ಬುಮ್ರಾ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ತಂಡವನ್ನು ಪ್ರಕಟಿಸಿದೆ.

ರಿಸ್ಕ್​ ತೆಗೆದುಕೊಳ್ಳಲಿಲ್ಲ ಬಿಸಿಸಿಐ

ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾದ ಬುಮ್ರಾಗೆ ಚೇತರಿಸಿಕೊಳ್ಳಲು ಬರೋಬ್ಬರಿ ಐದು ವಾರಗಳ ಕಾಲ ವಿಶ್ರಾಂತಿ ಅಗತ್ಯ ಇತ್ತು. ಕೊನೆಗೂ ವೈದ್ಯರಿಂ ಚಿಕಿತ್ಸೆ ಪಡೆದುಕೊಂಡಿದ್ದ ಬುಮ್ರಾ, ಚೇತರಿಸಿಕೊಂಡು ಮತ್ತಷ್ಟು ಫಿಟ್ ಆಗಲು ಬೆಂಗಳೂರಿಗೆ ಬಂದಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಬೂಮ್ರಾ ಔಟ್; ತಂಡಕ್ಕೆ ಸ್ಟಾರ್​ ಯುವ ವೇಗಿ ಎಂಟ್ರಿ..!

ಇತ್ತೀಚಿನ ವರದಿಯ ಪ್ರಕಾರ.. ಬುಮ್ರಾರ ಪುನರ್ವಸತಿಯ ಫಿಟ್ನೆಸ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಕ್ಯಾನಿಂಗ್ ರಿಪೋರ್ಟ್​ ಕೂಡ ಬಿಸಿಸಿಐ ಕೈಸೇರಿದೆ. ಅದು ಸ್ಕ್ಯಾನ್ ರಿಪೋರ್ಟ್ ಗುಡ್​ನ್ಯೂಸ್ ನೀಡಿದೆ. ಆದರೆ ಟೂರ್ನಿ ಆರಂಭವಾಗುವ ಹೊತ್ತಿಗೆ ಬುಮ್ರಾ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆಯೇ? ಇಲ್ಲವೇ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. NACನಲ್ಲಿ ನಡೆದ ಪರೀಕ್ಷೆಯಲ್ಲಿ ಬುಮ್ರಾ ಅವರು ಟೂರ್ನಿ ವೇಳೆ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆ ಅಂತಾ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ರಿಪೋರ್ಟ್​ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಹಾಗಾಗಿ ಆಯ್ಕೆ ಸಮಿತಿ ಬುಮ್ರಾ ವಿಚಾರದಲ್ಲಿ ರಿಸ್ಕ್​ ತೆಗೆದುಕೊಳ್ಳಲಿಲ್ಲ.

ಇದೇ ಕಾರಣಕ್ಕೆ ಎನ್​ಸಿಎ ಮುಖ್ಯಸ್ಥ ನಿತಿನ್ ಪಾಟೇಲ್ ಚೆಂಡನ್ನು ಅಜಿತ್ (ಮುಖ್ಯ ಆಯ್ಕೆದಾರ ಅಗರ್ಕರ್) ಅಂಗಳದಲ್ಲಿ ಬಿಟ್ಟರು. ವೈದ್ಯಕೀಯ ತಂಡ ಸಂಪೂರ್ಣ ಹಸಿರು ನಿಶಾನೆ ತೋರಿಸದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ರಿಸ್ಕ್​ ತೆಗೆದುಕೊಳ್ಳಲಿಲ್ಲ. 2022ರಲ್ಲಿ ಟಿ20 ವಿಶ್ವಕಪ್ 2022ಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧದ ದ್ವಿಪಕ್ಷೀಯ ಸರಣಿಗೆ ಬುಮ್ರಾರನ್ನು ಆಯ್ಕೆ ಮಾಡಲಾಗಿತ್ತು. ಮಧ್ಯದಲ್ಲೇ ಬುಮ್ರಾ ಎನ್​ಸಿಎಗೆ ಬಂದಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು. ಸ್ಟಾರ್ ವೇಗಿ ಬರೋಬ್ಬರಿ ಒಂದು ವರ್ಷ ಕ್ರಿಕೆಟ್​ನಿಂದ ದೂರು ಉಳಿದಿದ್ದರು. ಮುಂದೆ ಆಗುವ ಮುಜಗರದಿಂದ ದೂರ ಇರಲು ಅಗರ್ಕರ್ ಬುಮ್ರಾ ಜೊತೆಗಿನ ಅವಕಾಶ ಪಡೆಯಲು ಬಯಸಲಿಲ್ಲ. ಬದಲಿಗೆ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ದಾರೆ.

ಇದನ್ನೂ ಓದಿ: ಬಾಗಪ್ಪ ಹರಿಜನ ಹತ್ಯೆಗೆ ಸ್ಕೆಚ್‌ ಹಾಕಿದ್ದು ಪಿಂಟು @ ಪ್ರಕಾಶ್​? ಯಾರಿವನು? ಏನಿದು ಸೇಡಿಗೆ ಸೇಡು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment