ಟೀಮ್​ ಇಂಡಿಯಾದಲ್ಲಿ ಭಾರೀ ರಾಜಕೀಯ; ಕೊಹ್ಲಿಗೊಂದು ನ್ಯಾಯ; ರೋಹಿತ್​​ಗೆ ಒಂದು ನ್ಯಾಯ..!

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಆಪ್ತನಿಗಿಲ್ವಾ ಸ್ಥಾನ? ಈ ಬಗ್ಗೆ ಕ್ಯಾಪ್ಟನ್​ ರೋಹಿತ್​ ಏನಂದ್ರು?
Advertisment
  • ಚಾಂಪಿಯನ್ಸ್​ ಟ್ರೋಫಿ ನಂತರ ರೋಹಿತ್ ರಿಟೈರ್​​
  • ಸೆಲೆಕ್ಷನ್ ಮೀಟಿಂಗ್​ನಲ್ಲಿ ಬಿಗ್​ಬಾಸ್​ಗಳ ಸಂದೇಶ
  • ಕಾದು ನೋಡೋಣ ಎಂದ ರೋಹಿತ್ ತಂತ್ರವೇನು?

ಎಲ್ಲಾ ಆಟಗಾರರಿಗೂ ಅಂತ್ಯ ಇದ್ದೇ ಇರುತ್ತೆ. ಆದ್ರೆ, ಇಂಥಹ ಟೈಮ್​ನಲ್ಲಿ ಬಿಸಿಸಿಐನ ಸೂಚನೆ ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತೆ. ಯಾಕಂದ್ರೆ. ಇಂಗ್ಲೆಂಡ್ ಸರಣಿಯನ್ನಾಡುವ ಮುನ್ನವೇ ಚಾಂಪಿಯನ್ಸ್​ ಟ್ರೋಫಿಯ ಅಂತ್ಯದೊಂದಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ವೃತ್ತಿ ಜೀವನಕ್ಕೆ ಅಂತ್ಯವಾಡುವ ಸೂಚನೆ ನೀಡಿದೆ. ಇದು ರೋಹಿತ್​​ ಶರ್ಮಾರ ಆಟದ ಮೇಲೂ ಎಫೆಕ್ಟ್ ಆಗುತ್ತೆ. ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತೆ. ಹೀಗಾಗಿ ಬಿಸಿಸಿಐ, ಈ ಹೇಳಿಕೆ ಎಷ್ಟು ಸರಿ ಎಂಬ ಪ್ರಶ್ನೆಯನ್ನು ಉದ್ಬವಿಸುವಂತೆ ಮಾಡಿದೆ.

ಕೊಹ್ಲಿಗೊಂದು ನ್ಯಾಯ.. ರೋಹಿತ್​ಗೆ ಒಂದು ನ್ಯಾಯ..!

ರೋಹಿತ್ ಶರ್ಮಾಗೆ ನಿಮ್ ದಾರಿ ನೋಡಿಕೊಳ್ಳಲು ಸೂಚಿಸಿರುವ ಬಿಸಿಸಿಐ, ವಿರಾಟ್​ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್​ ಕಾರ್ನರ್​ ತೋರಿದೆ. ಮತ್ತಷ್ಟು ದಿನಗಳ ಕಾಲ ಏಕದಿನ ಫಾರ್ಮೆಟ್​ನಲ್ಲಿ ಮುಂದುವರಿಸುವ ಅಭಯ ನೀಡಿದೆ. ಇದು ಸಹಜವಾಗೇ ರೋಹಿತ್ ಶರ್ಮಾಗೊಂದು ನ್ಯಾಯ. ವಿರಾಟ್​​ಗೊಂದು ನ್ಯಾಯನಾ ಎಂಬ ಪ್ರಶ್ನೆ ಮಾಡುವಂತೆ ಮಾಡಿದೆ. ಇದಕ್ಕೆ ಕಾರಣ ಇಬ್ಬರ ಆಟ ಹಾಗೂ ವಯಸ್ಸು ಹಾಗೂ ಫಾರ್ಮ್​.

ಟೆಸ್ಟ್​ ಫಾರ್ಮೆಟ್​ಗೆ ಹೋಲಿಕೆ ಮಾಡಿದ್ರೆ, ಏಕದಿನ ಫಾರ್ಮೆಟ್​ನಲ್ಲಿ ವಿರಾಟ್​​ಗಿಂತ ರೋಹಿತ್, ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಇಬ್ಬರ ವಯಸ್ಸಿನ ಅಂತರದಲ್ಲೂ ಹೆಚ್ಚೇನಿಲ್ಲ. ಹೀಗಾಗಿ ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ ಆಟ ಆಡ್ತಿದೆಯಾ ಎಂಬ ಅನುಮಾನ ಮೂಡಿಸದಿರಲ್ಲ. ಅಷ್ಟೇ ಅಲ್ಲ! ಏಕದಿನ ಫಾರ್ಮೆಟ್​​ಗೆ ಹೊಸ ನಾಯಕನಾಗಿ ಯಾರನ್ನ ನೇಮಿಸಬೇಕು ಅನ್ನೋ ಸ್ಪಷ್ಟ ನಿಲುವಿಗೂ ಬಂದಾಗಿದೆಯಂತೆ.

ಕೊನೆ ಸೆಲೆಕ್ಷನ್ ಮೀಟಿಂಗ್​ನಲ್ಲಿ ರೋಹಿತ್ ಶರ್ಮಾ ಜೊತೆ ಸೆಲೆಕ್ಟರ್ಸ್, ಬಿಸಿಸಿಐ ಚರ್ಚೆ ನಡೆಸಿದೆ. ಚಾಂಪಿಯನ್ಸ್​ ಟ್ರೋಫಿ ನಂತರ ಭವಿಷ್ಯ ನಿರ್ಧರಿಸಲು ತಿಳಿಸಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​​​ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಲಾಂಗ್ ಟರ್ಮ್​ ಪ್ಲಾನ್​​​ನಲ್ಲಿದೆ ಎಂದರು ಬಿಸಿಸಿಐ ಅಧಿಕಾರಿ.

ಕ್ಯಾಪ್ಟನ್​ ರೋಹಿತ್​ ಏನಂದ್ರು?

ಕೆಲ ವರ್ಷಗಳಿಂದ ರಿಪೋರ್ಟ್ಸ್​ ಬರ್ತಾನೆ ಇದೆ. ನಾನು ರಿಪೋರ್ಟ್​ ಬಗ್ಗೆ ಕ್ಲಾರಿಫೈ ಮಾಡಲು ಇಲ್ಲಿಲ್ಲ. ನನಗೀಗ ಇಂಗ್ಲೆಂಡ್ ಹಾಗೂ ಚಾಂಫಿಯನ್ಸ್​ ಟ್ರೋಫಿ ಮುಖ್ಯವಾಗಿದೆ. ನನ್ನ ಫೋಕಸ್, ಈ ಗೇಮ್ಸ್​ ಮೇಲಿದೆ. ಈ ನಂತರ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ ಕ್ಯಾಪ್ಟನ್​ ರೋಹಿತ್ ಶರ್ಮಾ.

ಇದನ್ನೂ ಓದಿ:ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್​​ಫೋನ್​ ನೋಡುತ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್​​!

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment