/newsfirstlive-kannada/media/post_attachments/wp-content/uploads/2025/02/ROHIT_KOHLI.jpg)
2027ರ ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ ಅವರು ಏಕದಿನ ತಂಡದ ಕ್ಯಾಪ್ಟನ್ ಆಗಿ ಉಳಿಯುತ್ತಾರೆ ಎನ್ನುವ ಯಾವುದೇ ಗ್ಯಾರಂಟಿ ಇಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಚಾಂಪಿಯನ್ ಟ್ರೋಫಿ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೂ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಎಂದು ಬಿಸಿಸಿಐ ಹೇಳಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಈಗಾಗಲೇ ಟಿ20 ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಈ ಇಬ್ಬರೂ 2027ರಲ್ಲಿ ನಡೆಯುವಂತಹ ವಿಶ್ವಕಪ್ ಟೂರ್ನಿ ಗೆದ್ದು ಕ್ರಿಕೆಟ್ಗೆ ಸಂಪೂರ್ಣವಾಗಿ ವಿದಾಯ ಹೇಳುವ ಯೋಚನೆಯಲ್ಲಿದ್ದಾರೆ. ಆದರೆ ಈ ಮಹತ್ವದ ಟೂರ್ನಿಗೆ ಇನ್ನು ಎರಡು ವರ್ಷಗಳು ಬಾಕಿ ಇವೆ. ಇದರ ಜೊತೆಗೆ ರೋಹಿತ್ ಶರ್ಮಾ ವಯಸ್ಸು 40 ಆಗುತ್ತದೆ. ಕೊಹ್ಲಿ ಕೂಡ ಈ ವಯಸ್ಸಿನ ಆಸುಪಾಸಿನಲ್ಲೇ ಇರುತ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:IPL ಗೆಲುವಿನೊಂದಿಗೆ ಕಿಂಗ್ ಕೊಹ್ಲಿ ಅಪರೂಪದ ಸಾಧನೆ.. ವಿರಾಟ್ ಮುತ್ತಿಟ್ಟ ಟ್ರೋಫಿಗಳು!
ವರ್ಲ್ಡ್ಕಪ್ ವೇಳೆಗೆ ಬಿಸಿಸಿಐ ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ವಿರಾಟ್ ಕೊಹ್ಲಿ ಫಿಟ್ ಆಗಿರುವುದರಿಂದ ಅವಕಾಶಗಳು ಸಿಗುವುದು ಹೆಚ್ಚು. ಆದರೆ ಈಗಾಗಲೇ ಬ್ಯಾಟಿಂಗ್ನಲ್ಲಿ ವಿಫಲರಾಗಿರುವ ರೋಹಿತ್, 2027ರ ವರ್ಲ್ಡ್ಕಪ್ ವೇಳೆಗೆ ರೋಹಿತ್ ವಯಸ್ಸು ಹೆಚ್ಚಾಗುತ್ತದೆ. ಇದರಿಂದ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರಿಂದ ಅವಕಾಶ ವಂಚಿತರಾಗುತ್ತಾರೆ. ಜೊತೆಗೆ ಒನ್ಡೇ ಕ್ಯಾಪ್ಟನ್ಸಿ ಪಟ್ಟ ಕೈಜಾರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಏಕದಿನ ತಂಡದ ನಾಯಕನಾಗಿ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಥವಾ ಶುಭಮನ್ ಗಿಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿವೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ರೋಹಿತ್ ಏಕದಿನ ಕ್ರಿಕೆಟ್ನಿಂದ ದೂರ ಉಳಿಯುತ್ತಾರೆ ಅಂತ ಬಿಸಿಸಿಐ ಭಾವಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಅದು ಆಗಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ