newsfirstkannada.com

ಸೂಪರ್​​ ಸ್ಟಾರ್​ಗಳಿಗೆ ಬಿಸಿಸಿಐ ಸರೆಂಡರ್; K.L.ರಾಹುಲ್​ ಫಿಟ್​ನೆಸ್​ ವಿಚಾರದಲ್ಲಿ ಅಸಲಿ ಸತ್ಯ ರಿವೀಲ್..!

Share :

Published February 14, 2024 at 12:15pm

    ಇಂಡೋ-ಇಂಗ್ಲೆಂಡ್​​ 3ನೇ ಟೆಸ್ಟ್​ನಿಂದ ರಾಹುಲ್​ ಔಟ್​

    ರಾಹುಲ್​ ಫಿಟ್​ನೆಸ್​ ವಿಚಾರದಲ್ಲಿ ಬಿಸಿಸಿಐಗೆ ಗೊಂದಲ

    ಮೆಡಿಕಲ್​ ಟೀಮ್​ ಕಾರ್ಯವೈಖರಿ ಬಗ್ಗೆ ಹುಟ್ಟಿದ ಪ್ರಶ್ನೆ

ಇಂಡೋ-ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ನಿಂದ ಕೆ.ಎಲ್.ರಾಹುಲ್​ ಹೊರ ಬಿದ್ದಿರೋದು ಹಲ ಪ್ರಶ್ನೆಗಳನ್ನ ಹುಟ್ಟಿಸಿದೆ. ರಾಜ್​ಕೋಟ್​ ಟೆಸ್ಟ್​ ಆಡಲು ರಾಹುಲ್​ ಅಲಭ್ಯ ಎಂದ ಬೆನ್ನಲ್ಲೇ ಏನ್​ ನಡೀತಾಯಿದೆ ಬಿಸಿಸಿಐನಲ್ಲಿ ಎಂಬ ಚರ್ಚೆ ಆರಂಭವಾಗಿದೆ. ಪ್ಲೇಯರ್ಸ್​​​ ಜೊತೆ ಬಿಸಿಸಿಐ ಆಟವಾಡ್ತಿದ್ಯಾ? ಅಥವಾ ಸೂಪರ್​ ಸ್ಟಾರ್​​ಗಳಿಗೆ ಬಿಸಿಸಿಐ ಸರಂಡರ್​ ಆಗಿದ್ಯಾ? ಅನ್ನೋದು ಸದ್ಯ ಹಾಟ್​ ಟಾಪಿಕ್​ ಆಗಿದೆ.

ಇಂಡೋ-ಇಂಗ್ಲೆಂಡ್​​ ನಡುವಿನ 3ನೇ ಟೆಸ್ಟ್​ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಹೈದ್ರಾಬಾದ್​​ ಟೆಸ್ಟ್​ ಸೋತು, ವಿಶಾಖಪಟ್ಟಣದಲ್ಲಿ ಗೆದ್ದು ಬೀಗಿರುವ ಟೀಮ್​ ಇಂಡಿಯಾ ರಾಜ್​ಕೋಟ್​ನಲ್ಲಿ ರಾಜನಂತೆ ಮೆರೆದಾಡೋ ಲೆಕ್ಕಾಚಾರದಲ್ಲಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಹಿನ್ನಡೆಗಳು ಎದುರಾಗ್ತಿವೆ. ಸರಣಿಗೆ ವಿರಾಟ್​ ಕೊಹ್ಲಿ ಅಲಭ್ಯತೆರಾದ ಬೆನ್ನಲ್ಲೇ ಅನುಭವಿ ಕೆ.ಎಲ್​.ರಾಹುಲ್​ ಕೂಡ ಪಂದ್ಯದಿಂದ ಹೊರಬಿದ್ದಿದ್ದಾರೆ.

ಪ್ಲೇಯರ್ಸ್​​ ಜೊತೆ ಆಟವಾಡ್ತಿದ್ಯಾ ಬಿಸಿಸಿಐ?
ಈ ಪ್ರಶ್ನೆ ಕೇಳೋದಕ್ಕೆ ಕಾರಣಯಿದೆ. ಹೇಳಿಕೊಳ್ಳೋಕೆ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆ. ಇಂಟರ್​​ ನ್ಯಾಷನಲ್​ ಕ್ರಿಕೆಟ್​ ಕೌನ್ಸಿಲ್​ ಕೂಡ ಬಿಸಿಸಿಐ ಹುಕುಂ ಇಲ್ಲದೇ ಹೆಜ್ಜೆ ಇಡಲ್ಲ ಅನ್ನೋದು ಓಪನ್​ ಸೀಕ್ರೆಟ್​​. ಇಂತಾ ಬಿಸಿಸಿಐಗೆ ತನ್ನ ಆಟಗಾರರ ಫಿಟ್​ನೆಸ್​ ಬಗ್ಗೆನೇ ಮಾಹಿತಿ ಇಲ್ಲ. ಒಂದು ಸಣ್ಣ ಇಂಜುರಿಯನ್ನ ಮ್ಯಾನೇಜ್​ ಮಾಡೋಕೆ ಆಗ್ತಿಲ್ಲ.

ಮೊದಲ ಟೆಸ್ಟ್​ನ ಬಳಿಕ ಕ್ವಾಡ್ರೈಸಿಪ್​​​ (quadricep injury) ಇಂಜುರಿಗೆ ತುತ್ತಾದ ಕೆ.ಎಲ್.ರಾಹುಲ್​, 2ನೇ ಟೆಸ್ಟ್​​ನಿಂದ ಹೊರ ಬಿದ್ರು. ಬಳಿಕ ಹೈದ್ರಾಬಾದ್​​ನಿಂದ ನೇರವಾಗಿ ಬಂದಿಳಿದಿದ್ದು ಬೆಂಗಳೂರಿನ ಎನ್​ಸಿಎಗೆ. ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ರಾಹುಲ್​​, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಅದಾಗಿ ಸ್ವಲ್ಪ ದಿನಕ್ಕೆ ಬಿಸಿಸಿಐ, ಸರಣಿಯ ಉಳಿದ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿತ್ತು. ಸಬ್ಜೆಕ್ಟ್​ ಟು ಫಿಟ್​ನೆಸ್​​ ಕ್ಲೀಯರೆನ್ಸ್​ ಎಂಬ ಷರತ್ತಿನ ಅಡಿಯಲ್ಲಿ ರಾಹುಲ್​ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದ್ರೆ ಈಗ ನೋಡಿದ್ರೆ ಅನ್​ಫಿಟ್​ ರಾಹುಲ್​, ಪಂದ್ಯದಿಂದ ಹೊರಬಿದ್ದಿದ್ದಾರೆ.

ಸೂಪರ್​​ ಸ್ಟಾರ್​ಗಳಿಗೆ ‘ಸರಂಡರ್​’ ಆಗ್ತಿದ್ಯಾ ಬಿಸಿಸಿಐ?
ಎನ್​​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿರುವ ಕೆ.ಎಲ್​ ರಾಹುಲ್​ರ ಫಿಟ್​ನೆಸ್​ನ ಇಂಚಿಂಚೂ ಮಾಹಿತಿ ಬಿಸಿಸಿಐಗೆ ಇದ್ದೇ ಇರುತ್ತೆ. ಯಾವುದೆ ಆಟಗಾರ ಇರಲಿ. ಫುಲ್​ ಫಿಟ್​ ಆಗಿದ್ದಾರಾ.? ಇಲ್ವಾ.? ಎಂಬ ಮಾಹಿತಿಯನ್ನ ಪಡೆಯದೇ ತಂಡಕ್ಕೆ ಆಯ್ಕೆ ಮಾಡಲ್ಲ. ಅದ್ರೆ, ಶನಿವಾರ ಫಿಟ್​ ಆಗಿದ್ದ ರಾಹುಲ್​, ಸೋಮವಾರ ನೋಡಿದ್ರೆ ಅನ್​ಫಿಟ್​ ಆಗಿದ್ದಾರೆ. ಇದನ್ನ ನೋಡಿದ ಮೇಲೆ ​ಕೆಲ ಆಟಗಾರರ ವಿಚಾರದಲ್ಲಿ ಖಡಕ್​ ನಿರ್ಧಾರ ಕೈಗೊಳ್ಳೋ ಬಿಸಿಸಿಐ, ಸ್ಟಾರ್​ಗಳ ವಿಚಾರದಲ್ಲಿ ಸರಂಡರ್​ ಆಗ್ತಿದ್ಯಾ ಎಂಬ ಅನುಮಾನ ನಿಮ್ಮಲ್ಲೂ ಮೂಡದೇ ಇರಲ್ಲ. ಇದೇ ವಿಚಾರ ಇದೀಗ ಬಿಸಿಸಿಐ ವಲಯದಲ್ಲೂ ಕೆಲ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಿದೆ

‘ತಪ್ಪಾದ ಸಂದೇಶವನ್ನ ಕೊಡುತ್ತಿದೆ’
ಬಿಸಿಸಿಐನ ಮೆಡಿಕಲ್​ ಟೀಮ್​ಗೆ ರಾಹುಲ್​ ಇಂಜುರಿ ಗಂಭೀರ ಸ್ವರೂಪದ್ದು ಎಂದು ತಿಳಿದ ಮೇಲೆ ತಂಡಕ್ಕೆ ಆಯ್ಕೆ ಮಾಡಿದ್ದೇಕೆ.? ಆಟಗಾರರು ಸೋಷಿಯಲ್​ ಮೀಡಿಯಾಗಳಲ್ಲಿ ನಾನು ಫಿಟ್​ ಎಂಬಂತಾ ಸಂದೇಶಗಳು ನೀಡುವ ವಿಡಿಯೋ ಮತ್ತು ಪೋಸ್ಟ್​ಗಳನ್ನ ಹಾಕೋದೇಕೆ? ಇದು ತಪ್ಪಾದ ಸಂದೇಶವನ್ನ ಕೊಡುತ್ತಿದೆ-ಬಿಸಿಸಿಐ ಅಧಿಕಾರಿ

ಸೋಷಿಯಲ್​ ಮೀಡಿಯಾ ಪೋಸ್ಟ್​ಗಳೇ ಫಿಟ್​ನೆಸ್​ ಸರ್ಟಿಫಿಕೇಟ್​​
ಬಿಸಿಸಿಐ ಅಧಿಕಾರಿ ಮೆಡಿಕಲ್​ ಟೀಮ್ ಫಿಟ್​ನೆಸ್​ ಸರ್ಟಿಫಿಕೇಟ್​ ನೀಡಿದ್ರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದ್ರ ಜೊತೆಗೆ ಆಟಗಾರರ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು ತಪ್ಪು ಸಂದೇಶ ಕೊಡ್ತಿವೆ ಅಂದಿದ್ದಾರೆ. ಪಂದ್ಯದಿಂದ ಹೊರ ಬೀಳೋಕೂ ಮುನ್ನ ಕೆ.ಎಲ್​ ರಾಹುಲ್​ ಕೂಡ ಎನ್​ಸಿಎನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸೋ ಪೋಸ್ಟ್​ ಹಾಕಿದ್ರು. ಹೀಗಾಗಿ ಆಟಗಾರರು ಸೋಷಿಯಲ್​​ ಮೀಡಿಯಾದಲ್ಲಿ ಹಾಕ್ತಿರುವ ಫೋಸ್ಟ್​ಗಳ ಆಧಾರದಲ್ಲಿ ತಂಡದ ಆಯ್ಕೆ ಆಗ್ತಿದ್ಯಾ ಎಂಬ ಪ್ರಶ್ನೆ ಈಗ ಹುಟ್ಟಿದೆ.

ಮೆಡಿಕಲ್​ ಟೀಮ್​ ಕಾರ್ಯವೈಖರಿಯ ಬಗ್ಗೆ ಹುಟ್ಟಿದ ಪ್ರಶ್ನೆ
ಕೆ.ಎಲ್​ ರಾಹುಲ್​ ತಂಡಕ್ಕೆ ಬರೋದು ಹಾಗೇ ಹೋಗೋದು ಇಂದು ನಿನ್ನೆಯ ಕಥೆಯಲ್ಲ. ಜನವರಿ 2021ರಿಂದ ಈವರೆಗೆ ಬರೋಬ್ಬರಿ 6 ಬಾರಿ ರಾಹುಲ್ ಮೇಜರ್​​ ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್ ಹೊರತಾಗಿ ಇನ್ನೂ ಕೆಲ ಆಟಗಾರರ ಪಾಲಿಗೆ ಎನ್​ಸಿಎನೇ ತವರು ಮನೆಯಾಗಿದೆ. ಹೀಗೆ ಪದೇ ಪದೇ ಆಟಗಾರರು​ ಇಂಜುರಿ ತುತ್ತಾಗ್ತಿರೋದು ಎನ್​ಸಿಎನ ಮೆಡಿಕಲ್​ ಟೀಮ್​ ಇಂಡಿಯಾ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.

ಒಟ್ಟಿನಲ್ಲಿ ರಾಹುಲ್​ ಇಂಜುರಿ ಡ್ರಾಮಾ ಬಿಸಿಸಿಐನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಬಟಾ ಬಯಲು ಮಾಡಿದೆ. ಮುಂದಾದ್ರೂ, ತಂಡದ ಆಯ್ಕೆಗೂ ಮುನ್ನ ಸೆಲೆಕ್ಷನ್​ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡುತ್ತಾ? ಮೆಡಿಕಲ್​ ಟೀಮ್​ನಿಂದ ಬಿಗ್​ಬಾಸ್​ಗಳು ಸ್ಪಷ್ಟ ಮಾಹಿತಿಯನ್ನು ಪಡೀತಾರಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೂಪರ್​​ ಸ್ಟಾರ್​ಗಳಿಗೆ ಬಿಸಿಸಿಐ ಸರೆಂಡರ್; K.L.ರಾಹುಲ್​ ಫಿಟ್​ನೆಸ್​ ವಿಚಾರದಲ್ಲಿ ಅಸಲಿ ಸತ್ಯ ರಿವೀಲ್..!

https://newsfirstlive.com/wp-content/uploads/2024/01/KL_Rahul_Test.jpg

Load More