ಒಂದೇ ವರ್ಷದಲ್ಲಿ ಐಪಿಎಲ್​​ನಿಂದ ಬರೋಬ್ಬರಿ 11,769 ಕೋಟಿ ರೂ. ಆದಾಯ; ಹೇಗೆ?

author-image
Ganesh Nachikethu
Updated On
RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಈಗಿನಿಂದಲೇ ತಯಾರಿ!
  • ಮೆಗಾ ಆಕ್ಷನ್​ ಬೆನ್ನಲ್ಲೇ ಬಿಸಿಸಿಐನಿಂದ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​
  • ಅಬ್ಬಬ್ಬಾ! ಐಪಿಎಲ್​​ನಿಂದ ಬಿಸಿಸಿಐಗೆ ಬಂದ ಆದಾಯ ಎಷ್ಟು ಕೋಟಿ?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಮೆಗಾ ಆಕ್ಷನ್​​ನಲ್ಲಿ ತಮಗೆ ಬೇಕಾದ ಆಟಗಾರರ ಖರೀದಿ ಮಾಡಿ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ರೂಪಿಸಿವೆ. ಇದರ ಮಧ್ಯೆ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ. ಐಪಿಎಲ್​​ನಿಂದ ಬಿಸಿಸಿಐಗೆ ಭಾರೀ ಆದಾಯ ಬಂದಿದೆ ಎಂದು ವರದಿಯಾಗಿದೆ.

ಬಿಸಿಸಿಐ 2023ರ ಐಪಿಎಲ್ ಆವೃತ್ತಿಯಿಂದ ಸುಮಾರು 5120 ಕೋಟಿ ರೂ. ಆದಾಯ ಗಳಿಸಿತ್ತು. 2022 ಐಪಿಎಲ್‌ನಲ್ಲಿ ಬಿಸಿಸಿಐ 2,367 ಕೋಟಿ ರೂ. ಇತ್ತು. ಬಿಸಿಸಿಐನ 2022-23ರ ವಾರ್ಷಿಕ ವರದಿ ಪ್ರಕಾರ, ಐಪಿಎಲ್ 2023ರ ಒಟ್ಟು ಆದಾಯ ವರ್ಷದಿಂದ ವರ್ಷಕ್ಕೆ 78% ರಷ್ಟು ಏರಿಕೆಯಾಗಿದೆ. ಅಂದರೆ ಬರೋಬ್ಬರಿ 11,769 ಕೋಟಿ ರೂ. ಆದಾಯ ಐಪಿಎಲ್​ನಿಂದ ಬಿಸಿಸಿಐ ಗಳಿಸಿದೆ ಎಂದು ವರದಿಯಾಗಿದೆ.

ಇನ್ನು,11,769 ಕೋಟಿ ಪೈಕಿ ಸುಮಾರು 6648 ಕೋಟಿ ಐಪಿಎಲ್ ಆಯೋಜನೆಗೆ ಖರ್ಚಾಗಿದೆ. 5120 ಕೋಟಿ ಆದಾಯ ಬಿಸಿಸಿಐ ಬೊಕ್ಕಸಕ್ಕೆ ಸಂದಿದೆ. ಕೇವಲ ಮಾಧ್ಯಮ ಹಕ್ಕು ಮತ್ತು ಪ್ರಾಯೋಜಕರ ವ್ಯವಹಾರಗಳಿಂದಲೇ ಇಷ್ಟು ಆದಾಯ ಬಂದಿದೆ ಎಂಬುದು ಗಮನಾರ್ಹ.

2023-27ರವರೆಗಿನ ಲೈವ್​ ಪ್ರಸಾರದ ಹಕ್ಕು 48,390 ಕೋಟಿಗೆ ಸೇಲ್ ಆಗಿದೆ. 2023-27ರ ಐಪಿಎಲ್‌ನ ಟಿವಿ ಹಕ್ಕನ್ನು ಡಿಸ್ನಿ ಸ್ಟಾರ್ 23,575 ಕೋಟಿ ರೂ.ಗೆ ಖರೀದಿಸಿದ್ದು, ವಯಾಕಾಮ್ 18 ಒಡೆತನದ ಜಿಯೋ ಸಂಸ್ಥೆ ಐಪಿಎಲ್‌ ಡಿಜಿಟಲ್ ಹಕ್ಕು 23,758 ಕೋಟಿಗೆ ಪಡೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment