newsfirstkannada.com

INDvsSA:​ ಬ್ಲಾಕ್​ ಟಿಕೆಟ್​ ಮಾರಾಟ ಆರೋಪ; 108 ಟಿಕೆಟ್​​ ಜೊತೆಗೆ 19 ಜನರ ಬಂಧನ; ರೋಜರ್​ ಬಿನ್ನಿಗೆ ಪೊಲೀಸರಿಂದ ನೋಟಿಸ್​

Share :

Published November 5, 2023 at 2:07pm

Update November 5, 2023 at 2:11pm

    BCCI ಅಧ್ಯಕ್ಷ ರೋಜರ್​ ಬಿನ್ನಿ ಅವರಿಗೆ ಪೊಲೀಸರಿಂದ ನೋಟಿಸ್​

    ವಿಶ್ವಕಪ್​ ಬ್ಲಾಕ್​ ಟಿಕೆಟ್​ ಮಾರಾಟ ಮಾಡಿದ ಆರೋಪ

    19 ಜನರನ್ನು ಬಂಧಿಸಿದ ಕೋಲ್ಕತ್ತಾ ಪೊಲೀಸರು

ಇಂದು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯುತ್ತಿದ್ದು, ಈಡನ್​ ಗಾರ್ಡನ್​​ ಮೈದಾನದಲ್ಲಿ ಟಾಸ್​ ಗೆದ್ದ ರೋಹಿತ್​ ಪಡೆ ಬ್ಯಾಟಿಂಗ್​ ಆಯ್ದುಕೊಂಡಿದೆ. ಇಂತಹ ಸಂತಸದ ವಿಚಾರದ ನಡುವೆ ಕೋಲ್ಕತ್ತಾ ಪೊಲೀಸರು ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ಅವರಿಗೆ ನೋಟಿಸ್​​ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ವಿಶ್ವಕಪ್​ ಕ್ರಿಕೆಟ್​​ ಪಂದ್ಯದ ಟಿಕೆಟ್​​ಗಳನ್ನು ಬ್ಲಾಕ್​ ಆಗಿ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ನೋಟಿಸ್​ ಹೊರಡಿಸಲಾಗಿದೆ ಎನ್ನಲಾಗಿದೆ. ನಿನ್ನೆ ಸಂಜೆ ವೇಳೆ ನೋಟಿಸ್​ ಕಳುಹಿಸಿದ್ದಾರೆ.

ಇನ್ನು ವಿಶ್ವಕಪ್​ ಪಂದ್ಯ ಟಿಕೆಟ್​ ಬ್ಲಾಕ್​ ಆಗಿ ಸೇಲ್​ ಮಾಡಿರುವ ಆರೋಪದ ಹಿನ್ನೆಲೆ 19 ಜನರನ್ನು ಬಂಧಿಸಿದ್ದಾರೆ ಮತ್ತು ಅವರಿಂದ 108 ಟಿಕೆಟ್​​ ವಶಪಡಿಸಿಕೊಂಡಿದ್ದಾರೆ. ಇವರ ಮೇಲೆ ಏಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsSA:​ ಬ್ಲಾಕ್​ ಟಿಕೆಟ್​ ಮಾರಾಟ ಆರೋಪ; 108 ಟಿಕೆಟ್​​ ಜೊತೆಗೆ 19 ಜನರ ಬಂಧನ; ರೋಜರ್​ ಬಿನ್ನಿಗೆ ಪೊಲೀಸರಿಂದ ನೋಟಿಸ್​

https://newsfirstlive.com/wp-content/uploads/2023/10/Team-India-1.jpg

Load More