ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐನಿಂದ ಭರ್ಜರಿ ಗುಡ್​ನ್ಯೂಸ್​; ಏನದು?

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಇಂದು ನಿವೃತ್ತಿ ಘೋಷಿಸಲಿರೋ ಮೂವರು ಸ್ಟಾರ್​ ಕ್ರಿಕೆಟರ್ಸ್​ ಇವ್ರು!
Advertisment
  • ಇಂದಿನಿಂದ ಬಹುನಿರೀಕ್ಷಿತ 2025ರ ಚಾಂಪಿಯನ್ಸ್​​ ಟ್ರೋಫಿ ಶುರು
  • ನಾಳೆ ಪಂದ್ಯದಲ್ಲಿ ಟೀಮ್​ ಇಂಡಿಯಾ, ಬಾಂಗ್ಲಾದೇಶ ಮುಖಾಮುಖಿ
  • ಫೆ. 20ರಂದು ಬಾಂಗ್ಲಾ ವಿರುದ್ಧದ ಪಂದ್ಯದೊಂದಿಗೆ ಭಾರತ ಅಭಿಯಾನ

ಇಂದಿನಿಂದ ಬಹುನಿರೀಕ್ಷಿತ 2025ರ ಚಾಂಪಿಯನ್ಸ್​​ ಟ್ರೋಫಿ ಶುರುವಾಗಿದೆ. ನಾಳೆ ನಡೆಯಲಿರೋ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ಟೀಮ್​ ಇಂಡಿಯಾ, ಬಾಂಗ್ಲಾದೇಶ ಮುಖಾಮುಖಿ ಆಗಲಿವೆ. ಇದರ ಮಧ್ಯೆ ಬಿಸಿಸಿಐ ಟೀಮ್​ ಇಂಡಿಯಾ ಆಟಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದೆ.

ಇತ್ತೀಚೆಗೆ ಹೊರಡಿಸಿದ್ದ 10 ನಿಮಯಗಳಲ್ಲಿ ಒಂದನ್ನು ಬಿಸಿಸಿಐ ಸಡಿಲಿಕೆ ಮಾಡಿದೆ. ಇದು ಟೀಮ್ ಇಂಡಿಯಾ ಆಟಗಾರರಿಗೆ ಬಹಳ ತಂದಿದೆ. ಕ್ರಿಕೆಟಿಗರ ಕುಟುಂಬಸ್ಥರು ದುಬೈನಲ್ಲಿ ಯಾವುದಾದ್ರೂ ಒಂದು ಪಂದ್ಯ ವೀಕ್ಷಣೆ ಮಾಡಬಹುದು. ಇದಕ್ಕೆ ಬಿಸಿಸಿಐ ಬಳಿಕ ಆಟಗಾರರು ಅನುಮೋದನೆ ಪಡೆಯಬೇಕಾಗುತ್ತದೆ.

ಏನಿದು ಹೊಸ ನಿಮಯ?

ಕ್ರಿಕೆಟಿಗರು ತಮ್ಮ ಪತ್ನಿ ಜೊತೆಗೆ ಇರಬಹುದು. ಚಾಂಪಿಯನ್ಸ್ ಟ್ರೋಫಿಯ ಒಂದು ಪಂದ್ಯಕ್ಕೆ ಮಾತ್ರ ಈ ಅವಕಾಶ ನೀಡಲಾಗಿದೆ. ಈ ವಿಷಯದಲ್ಲಿ ಕ್ರಿಕೆಟಿಗರು ಮಂಡಳಿಯಿಂದ ಅಂತಿಮ ಅನುಮತಿ ಪಡೆಯಬೇಕು. ತಮ್ಮ ಕುಟುಂಬಸ್ಥರು ಯಾರು ಭಾಗವಹಿಸುತ್ತಾರೆ ಅನ್ನೋದು ಬಿಸಿಸಿಐಗೆ ಮಾಹಿತಿ ನೀಡಬೇಕು.

ಈ ಹಿಂದೆಯೇ ಕ್ರಿಕೆಟಿಗರು ತಮ್ಮ ಹೆಂಡತಿ ಜತೆಗೆ 45 ದಿನಗಳಿಗಿಂತ ಕಡಿಮೆ ಅವಧಿಯ ಪ್ರವಾಸಗಳಿಗೆ ಹೋಗಲು ಅವಕಾಶ ಇಲ್ಲ ಎಂದು ಬಿಸಿಸಿಐ ಹೇಳಿದೆ. ಆರಂಭದಲ್ಲಿ ಕ್ರಿಕೆಟಿಗರು ತಮ್ಮ ಪತ್ನಿಯರೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ದುಬೈಗೆ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ. ಆದರೀಗ, ಒಂದು ಪಂದ್ಯಕ್ಕೆ ಮಾತ್ರ ಅವಕಾಶ ನೀಡಿದೆ ಬಿಸಿಸಿಐ.

ಟೀಮ್​ ಇಂಡಿಯಾ ಎಲ್ಲಾ ಪಂದ್ಯಗಳು ದುಬೈನಲ್ಲೇ ನಡೆಯಲಿವೆ. ಫೆಬ್ರವರಿ 20ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಭಾರತದ ಅಭಿಯಾನ ಶುರುವಾಗಲಿದೆ. ಫೆಬ್ರವರಿ 23 ಮತ್ತು ಮಾರ್ಚ್ 2ನೇ ತಾರೀಕು ಕ್ರಮವಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ಆಡಲಿದೆ.

ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿಂದರೆ ಲಾಭವೇನು? ಹತ್ತಾರು ಸಮಸ್ಯೆ ನಿವಾರಿಸುತ್ತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment