IPL 2025: ಬಿಸಿಸಿಐನಿಂದ ಶಾಕಿಂಗ್​ ನಿರ್ಧಾರ; ಸ್ಟಾರ್​ ಆಟಗಾರರಿಗೆ ದೊಡ್ಡ ಆಘಾತ!

author-image
Ganesh Nachikethu
Updated On
ಕೊಹ್ಲಿ, ಧೋನಿ ಸ್ನೇಹದ ಕತೆ; 16 ವರ್ಷಗಳ ಬಾಂಧವ್ಯ ನೆನೆದು ಮಾಹಿ ಹೇಳಿದ್ದೇನು..?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗಾಗಿ ಭಾರೀ ತಯಾರಿ..!
  • ಬಿಸಿಸಿಐ ಶಾಕಿಂಗ್​ ನಿರ್ಧಾರದಿಂದ ಐಪಿಎಲ್​ ತಂಡಗಳಿಗೆ ದೊಡ್ಡ ಆಘಾತ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗಾಗಿ ರೂಪುರೇಷೆಗಳು ಸಿದ್ಧವಾಗುತ್ತಿದೆ. ರೂಪುರೇಷೆಗಳ ಬಳಿಕ ಎಲ್ಲಾ ಐಪಿಎಲ್​​​ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು ಅನ್ನೋ ನಿರ್ಧಾರ ಅಂತಿಮವಾಗಲಿದೆ. ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಈ ಸಲ ಎಲ್ಲಾ ತಂಡಗಳಿಗೂ 4+2 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಬಹುದು ಎಂದು ತಿಳಿದು ಬಂದಿದೆ.

ಇನ್ನು, ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ನಾಲ್ವರನ್ನು ನೇರ ರಿಟೈನ್ ಮಾಡಿಕೊಳ್ಳಬಹುದು. ಬಳಿಕ ಉಳಿದ ಇಬ್ಬರು ಆಟಗಾರರನ್ನು ಆರ್​ಟಿಎಂ ಕಾರ್ಡ್​ ಬಳಸಿ ಹರಾಜಿಗೆ ರಿಲೀಸ್​ ಮಾಡಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕನಿಷ್ಠ 19 ಆಟಗಾರರನ್ನು ರಿಲೀಸ್​ ಮಾಡಲಿದೆ ಎಂಬುದು ಖಚಿತವಾಗಿದೆ.

ಇತ್ತೀಚೆಗಷ್ಟೇ ಮುಂಬೈ ಪ್ರಧಾನಿ ಕಚೇರಿಯಲ್ಲಿ ಐಪಿಎಲ್​ ತಂಡಗಳ ಮಾಲೀಕರ ಜೊತೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೆಲವು ತಂಡಗಳು ಐಪಿಎಲ್​ ಮೆಗಾ ಹರಾಜು ಬೇಡ ಎಂದರು. ಇನ್ನೂ ಹಲವು ತಂಡಗಳು 6+2 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ಕೊಡಿ ಎಂದಿದ್ದರು. ಅಲ್ಲದೇ ಪಂಜಾಬ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ ಜೀರೋ ರೀಟೆನ್ಷನ್​​ ಪಾಲಿಸಿ ಬಗ್ಗೆ ಪ್ರಸ್ತಾಪ ಮಾಡಿತ್ತು. ಈಗ ಬಿಸಿಸಿಯ ಶಾಕಿಂಗ್​ ನಿರ್ಧಾರ ಕೈಗೊಂಡಿದ್ದು, ಐಪಿಎಲ್​ ತಂಡಗಳು ಮತ್ತು ಸ್ಟಾರ್​​ ಆಟಗಾರರಿಗೆ ದೊಡ್ಡ ಆಘಾತ ನೀಡಿದೆ. ಐಪಿಎಲ್​ ತಂಡಗಳು ರೀಟೈನ್​ ಮಾಡಿಕೊಂಡ ಆಟಗಾರರನ್ನು ಆರ್​ಟಿಎಂ ಕಾರ್ಡ್​ ಬಳಸಿ ರಿಲೀಸ್​ ಮಾಡಬಹುದು ಅನ್ನೋದು ಸ್ಟಾರ್​ ಪ್ಲೇಯರ್ಸ್​ಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ರಿಂಕು ಸಿಂಗ್​ಗೆ ಕೆಕೆಆರ್ ಬಿಗ್ ಶಾಕ್.. RCB ಹೆಸರು ಕನವರಿಸಿದ ರಿಂಕು ಸಿಂಗ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment