ಗಂಭೀರ್​​, ರೋಹಿತ್​​ ಜತೆ BCCI ಚರ್ಚೆ; ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ನಿರ್ಧಾರ

author-image
Ganesh Nachikethu
Updated On
ರೋಹಿತ್- ಕೋಚ್ ಗಂಭೀರ್​ ಮಧ್ಯೆ ಎಲ್ಲವೂ ಸರಿ ಇಲ್ವಾ.. BCCI ಸಭೆಯಲ್ಲಿ ಏನೇನ್ ಚರ್ಚೆ ಆಗುತ್ತೆ?
Advertisment
  • BCCI ಬಾಸ್​ಗಳ ಹೈವೋಲ್ಟೆಜ್​ ಸಭೆಯಲ್ಲಿ ಏನೇನಾಯ್ತು?
  • ರೋಹಿತ್​, ಗಂಭೀರ್​ಗೆ ಬಿಸಿಸಿಐನಿಂದ ಪ್ರಶ್ನೆಗಳ ಸುರಿಮಳೆ
  • ತಂಡದ ನಾಯಕತ್ವ ಬದಲಾವಣೆ ಬಗ್ಗೆ ಅಂತಿಮ ತೀರ್ಮಾನ

ರೋಹಿತ್​ ಶರ್ಮಾ ಭವಿಷ್ಯವೇನು? ವಿರಾಟ್​​ ಕೊಹ್ಲಿಯನ್ನ ಡ್ರಾಪ್​ ಮಾಡ್ಬೇಕಾ? ಬೂಮ್ರಾ ನಾಯಕನಾಗಬೇಕಾ? ಹೀಗೆ ಹಲವಾರು ಪ್ರಶ್ನೆಗಳು ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ಬಳಿಕ ಎದ್ದಿದ್ದವು. ಈ ಎಲ್ಲ ಮಹತ್ವದ ವಿಚಾರಗಳ ಬಗ್ಗೆ ಬಿಸಿಸಿಐ ಹೆಡ್​ಕ್ವಾಟರ್ಸ್​ನಲ್ಲಿ ನಡೆದ ಹೈವೋಲ್ಟೆಜ್​ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಸಿಸಿಐ ಬಾಸ್​ಗಳ ಖಡಕ್​ ಪ್ರಶ್ನೆಗಳಿಗೆ, ರೋಹಿತ್​-ಗಂಭೀರ್​​ ಆನ್ಸರ್​ ಕೊಟ್ಟಿದ್ದಾರೆ.

ಬಾರ್ಡರ್​​-ಗವಾಸ್ಕರ್​ ಸರಣಿಯ ಸೋಲು ಭಾರತೀಯ ಕ್ರಿಕೆಟ್​ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಟಗಾರರ ಪರ್ಫಾಮೆನ್ಸ್​, ರೋಹಿತ್​ ಶರ್ಮಾ ನಾಯಕತ್ವ, ಕೋಚ್ ಗಂಭೀರ್​​​ ನಿರ್ಧಾರಗಳ ಬಗ್ಗೆ ಚರ್ಚೆ ಎದ್ದಿತ್ತು. ಇದ್ರ ಬೆನ್ನಲ್ಲೇ ಬಿಸಿಸಿಐ ಬಾಸ್​ಗಳು ರಿವ್ಯೂ ಮೀಟಿಂಗ್​ಗೆ ಬುಲಾವ್​ ನೀಡಿದ್ರು. ಕುತೂಹಲ ಕೆರಳಿಸಿದ್ದ ಹೈವೋಲ್ಟೆಜ್​ ಮೀಟಿಂಗ್​ ಬಿಸಿಸಿಐ ಹೆಡ್​​ ಕ್ವಾಟರ್ಸ್​ನಲ್ಲಿ ನಡೆದಿದೆ. ಬಿಸಿಸಿಐ ಬಾಸ್​​ಗಳು, ಸೆಲೆಕ್ಟರ್ಸ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​​ ಗೌತಮ್​ ಗಂಭೀರ್​ ಭಾಗಿಯಾಗಿದ್ದ ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಯಾಗಿದೆ.

ಚಾಂಪಿಯನ್ಸ್​ ಟ್ರೋಫಿ ಅಂತ್ಯದವರೆಗೆ ರೋಹಿತ್​ ನಾಯಕ.!

ಆಸ್ಟ್ರೇಲಿಯಾ ಪ್ರವಾಸದ ಸೋಲಿನ ಬಳಿಕ ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನೆ ಎದ್ದಿತ್ತು. ಸಭೆಯಲ್ಲಿ ಈ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿದ್ದು, ಇನ್ನು ಕೆಲ ತಿಂಗಳು ನಾನು ನಾಯಕನಾಗಿ ಮುಂದುವರೆಯುತ್ತೇನೆ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ. ಕೊಚ್​ ಗೌತಮ್​​ ಗಂಭೀರ್​ ಕೂಡ ಚಾಂಪಿಯನ್ಸ್​ ಟ್ರೋಫಿ ಅಂತ್ಯದವರೆಗೆ ನಾಯಕತ್ವದಲ್ಲಿ ಬದಲಾವಣೆ ಬೇಡ ಎಂದಿದ್ದಾರೆ. ಇದಕ್ಕೆ ಒಕೆ ಎಂದಿರೋ ಬಿಸಿಸಿಐ ಬಾಸ್​ಗಳು ಚಾಂಪಿಯನ್ಸ್​ ಟ್ರೋಫಿ ರಿಸಲ್ಟ್​ನ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಬೂಮ್ರಾಗೆ ನಾಯಕತ್ವ ನೀಡಲು ಕೆಲವರ ವಿರೋಧ.!

ರೋಹಿತ್​ ಶರ್ಮಾ ಬಳಿಕ ಜಸ್​ಪ್ರಿತ್​ ಬೂಮ್ರಾಗೆ ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕತ್ವದ ಜವಾಬ್ಧಾರಿ ನೀಡೋ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇದಕ್ಕೆ ಕೆಲ ಬಿಸಿಸಿಐ ಅಧಿಕಾರಿಗಳು, ಸೆಲೆಕ್ಟರ್ಸ್​​​ ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣಕ್ಕೆ ಬೂಮ್ರಾಗೆ ವಿಶ್ರಾಂತಿ ನೀಡಬೇಕಾಗುತ್ತೆ. ನಾಯಕನಾಗಿ ಎಲ್ಲಾ ಪಂದ್ಯಗಳಿಗೂ ಬೂಮ್ರಾ ಲಭ್ಯರಿರಲ್ಲ. ಹೀಗಾಗಿ ಬೂಮ್ರಾಗೆ ನಾಯಕತ್ವ ನೀಡೋದು ಬೇಡ ಎನ್ನಲಾಗಿದೆ.

ಕೊಹ್ಲಿಗೆ ಚಾಂಪಿಯನ್ಸ್​​ ಟ್ರೋಫಿಯೇ ಲಾಸ್ಟ್​ ಚಾನ್ಸ್​.!

ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿರುವ ವಿರಾಟ್​ ಕೊಹ್ಲಿ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಕೊಹ್ಲಿ ಡ್ರಾಪ್​ ಮಾಡೋದ್ರ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ. ಅಂತಿಮವಾಗಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿ ಅಂತ್ಯದ ಬಳಿಕ ಕೊಹ್ಲಿ ಭವಿಷ್ಯವನ್ನ ನಿರ್ಧರಿಸಲು ತೀರ್ಮಾನಿಸಲಾಗಿದೆ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಪರ್ಫಾಮೆನ್ಸ್​ ಮೇಲೆ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ.

ನೋ ಕಾಂಪ್ರಮೈಸ್​​.. ಡೊಮೆಸ್ಟಿಕ್​ ಕ್ರಿಕೆಟ್​ ಕಡ್ಡಾಯ.!

ಬಾರ್ಡರ್​​-ಗವಾಸ್ಕರ್​ ಸರಣಿ ಅಂತ್ಯದ ಬೆನ್ನಲ್ಲೇ ಕೋಚ್​ ಗೌತಮ್​ ಗಂಭೀರ್​​, ಎಲ್ಲಾ ಕ್ರಿಕಟರ್ಸ್​ಗೆ ಡೊಮೆಸ್ಟಿಕ್​ ಕ್ರಿಕೆಟ್ ಕಡ್ಡಾಯ ಎಂದು ವಾರ್ನಿಂಗ್​ ಕೊಟ್ಟಿದ್ರು. ಈ ಬಗ್ಗೆ ಸಭೆಯಲ್ಲೂ ಚರ್ಚೆಯಾಗಿದ್ದು, ಟೀಮ್​ ಇಂಡಿಯಾ ಪರ ಆಡದೇ ಇದ್ದ ಸಮಯದಲ್ಲಿ ದೇಶಿ ಕ್ರಿಕೆಟ್​ ಆಡಬೇಕು ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣದಿಂದ ಡೊಮೆಸ್ಟಿಕ್​ ಕ್ರಿಕೆಟ್​ನಿಂದ ದೂರ ಉಳಿಯೋದಾದ್ರೆ, ಸೆಲೆಕ್ಟರ್ಸ್​​, ಕೋಚ್​​ ಒಪ್ಪಿಗೆ ಪಡೆಯೋದು ಕಡ್ಡಾಯ ಎಂಬ ನಿರ್ಧಾರ ಮಾಡಲಾಗಿದೆ.

ಫಿಟ್​ನೆಸ್​ಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನ.!

ಈ ಸಭೆಯಲ್ಲಿ ಆಟಗಾರರ ಇಂಜುರಿಗಳ ಬಗ್ಗೆಯೂ ಚರ್ಚೆಯಾಗಿದೆ. ಇಂಜುರಿ ಮ್ಯಾನೇಜ್​ಮೆಂಟ್​ ಹಾಗೂ ವರ್ಕ್​ಲೋಡ್ ಮ್ಯಾನೇಜ್​ಮೆಂಟ್​ ಜೊತೆಗೆ ಫಿಟ್​ನೆಸ್​​ಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ. ಯಾವುದೇ ಆಟಗಾರ ತಂಡದಿಂದ ಹೊರಗುಳಿದ್ರೆ, ವಾಪಾಸ್ಸಾಗೋಕು ಮುನ್ನ ಫಿಟ್​ನೆಸ್​​ ಟೆಸ್ಟ್​ನಲ್ಲಿ ಪಾಸಾಗೋದು ಕಡ್ಡಾಯ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ, ಹೀನಾಯ ಮುಖಭಂಗದ ಬಳಿಕ ಎಚ್ಚೆತ್ತುಕೊಂಡಂತೆ ಕಾಣ್ತಿರೋ ಬಿಸಿಸಿಐ ಬಾಸ್​ಗಳು, ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ, ಯಾವುದೇ ಬಿಗ್​ ಡಿಶಿಷನ್​ ತೆಗೆದುಕೊಳ್ಳದೇ, ಎಲ್ಲದಕ್ಕೂ ಚಾಂಪಿಯನ್ಸ್​ ಟ್ರೋಫಿಯನ್ನ ಡೆಡ್​ಲೈನ್​ ಮಾಡಿಕೊಂಡಿದ್ದಾರೆ. ಹೀಗಾಗಿ, ಮಹತ್ವದ ಐಸಿಸಿ ಟೂರ್ನಿ ಬಳಿಕ ಟೀಮ್​ ಇಂಡಿಯಾದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ:ಕ್ಯಾಪ್ಟನ್​ ಆಗಬೇಕಿದ್ದ ಹಾರ್ದಿಕ್​ ಪಾಂಡ್ಯಗೆ ಮತ್ತೆ ಮೋಸ; ಬಿಸಿಸಿಐನಿಂದ ಬಿಗ್​​ ಶಾಕ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment