/newsfirstlive-kannada/media/post_attachments/wp-content/uploads/2024/11/Gambhir-Kohli.jpg)
ಇತ್ತೀಚೆಗೆ ನಡೆದ ಬಾರ್ಡರ್​​-ಗವಾಸ್ಕರ್​ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಭಾರತದ ಈ ಸೋಲು ಕ್ರಿಕೆಟ್​ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆಟಗಾರರ ಪರ್ಫಾಮೆನ್ಸ್​, ರೋಹಿತ್​ ಶರ್ಮಾ ನಾಯಕತ್ವ, ಕೋಚ್ ಗಂಭೀರ್​​​ ನಿರ್ಧಾರಗಳ ಬಗ್ಗೆ ಚರ್ಚೆ ಎದ್ದಿತ್ತು. ಇದ್ರ ಬೆನ್ನಲ್ಲೇ ಬಿಸಿಸಿಐ ಬಾಸ್​ಗಳು ರಿವ್ಯೂ ಮೀಟಿಂಗ್​ಗೆ ಬುಲಾವ್​ ನೀಡಿದ್ರು. ಕುತೂಹಲ ಕೆರಳಿಸಿದ್ದ ಹೈವೋಲ್ಟೆಜ್​ ಮೀಟಿಂಗ್​ ಬಿಸಿಸಿಐ ಹೆಡ್​​ ಕ್ವಾಟರ್ಸ್​ನಲ್ಲಿ ನಡೆದಿದೆ. ಬಿಸಿಸಿಐ ಬಾಸ್​​ಗಳು, ಸೆಲೆಕ್ಟರ್ಸ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​​ ಗೌತಮ್​ ಗಂಭೀರ್​ ಭಾಗಿಯಾಗಿದ್ದ ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಯಾಗಿದೆ.
ರೋಹಿತ್​ ಶರ್ಮಾ ಭವಿಷ್ಯವೇನು? ವಿರಾಟ್​​ ಕೊಹ್ಲಿಯನ್ನ ಡ್ರಾಪ್​ ಮಾಡ್ಬೇಕಾ? ಹೀಗೆ ಹಲವಾರು ಪ್ರಶ್ನೆಗಳು ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ಬಳಿಕ ಎದ್ದಿದ್ದವು. ಈ ಎಲ್ಲ ಮಹತ್ವದ ವಿಚಾರಗಳ ಬಗ್ಗೆ ಬಿಸಿಸಿಐ ಹೆಡ್​ಕ್ವಾಟರ್ಸ್​ನಲ್ಲಿ ನಡೆದ ಹೈವೋಲ್ಟೆಜ್​ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಸಿಸಿಐ ಬಾಸ್​ಗಳ ಖಡಕ್​ ಪ್ರಶ್ನೆಗಳಿಗೆ, ರೋಹಿತ್​-ಗಂಭೀರ್​​ ಆನ್ಸರ್​ ಕೊಟ್ಟಿದ್ದಾರೆ.
ಕೊಹ್ಲಿಗೆ ಚಾಂಪಿಯನ್ಸ್​​ ಟ್ರೋಫಿಯೇ ಲಾಸ್ಟ್​ ಚಾನ್ಸ್​.!
ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿರುವ ವಿರಾಟ್​ ಕೊಹ್ಲಿ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಕೊಹ್ಲಿ ಡ್ರಾಪ್​ ಮಾಡೋದ್ರ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ. ಅಂತಿಮವಾಗಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿ ಅಂತ್ಯದ ಬಳಿಕ ಕೊಹ್ಲಿ ಭವಿಷ್ಯವನ್ನ ನಿರ್ಧರಿಸಲು ತೀರ್ಮಾನಿಸಲಾಗಿದೆ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ಪರ್ಫಾಮೆನ್ಸ್​ ಮೇಲೆ ಕೊಹ್ಲಿ ಭವಿಷ್ಯ ನಿರ್ಧಾರವಾಗಲಿದೆ.
ಟೀಮ್​ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಇವರು ವಿಫಲರಾಗಿದ್ರು. ಹಾಗಾಗಿ ಕೊಹ್ಲಿ ಭವಿಷ್ಯದ ಬಗ್ಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ಚರ್ಚೆ ನಡೆಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರಿಸದೇ ಇದ್ದರೆ ಇವರ ಕ್ರಿಕೆಟ್​ ಕರಿಯರ್​ ಅಂತ್ಯವಾಗಲಿದೆ.
ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ಪರ್ತ್‌ನಲ್ಲಿ ಶತಕ ಬಾರಿಸಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಮೌನಕ್ಕೆ ಶರಣಾಗಿದ್ದರು. ಕೊಹ್ಲಿ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 190 ರನ್ ಕಲೆ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us