Advertisment

ನಾಯಕತ್ವ ವಿಚಾರದಲ್ಲಿ ರಾಹುಲ್​ಗೆ ಅನ್ಯಾಯ.. ಹೀಗಾದ್ರೆ ಈ ಕನ್ನಡಿಗ ತಂಡದಲ್ಲೂ ಇರಲ್ವಾ?​​

author-image
AS Harshith
Updated On
ನಾಯಕತ್ವ ವಿಚಾರದಲ್ಲಿ ರಾಹುಲ್​ಗೆ ಅನ್ಯಾಯ.. ಹೀಗಾದ್ರೆ ಈ ಕನ್ನಡಿಗ ತಂಡದಲ್ಲೂ ಇರಲ್ವಾ?​​
Advertisment
  • ದುಲೀಪ್​ ಟ್ರೋಫಿಯಲ್ಲಿ ಕೆ.ಎಲ್.ರಾಹುಲ್​​ಗಿಲ್ಲ ನಾಯಕತ್ವ!
  • ಶುಭ್​ಮನ್ ಗಿಲ್ ನಾಯಕತ್ವದ ಅಡಿ ಆಡಬೇಕು ಕನ್ನಡಿಗ..!
  • ಕನ್ನಡಿಗ ರಾಹುಲ್​​ಗೆ ನಾಯಕತ್ವ ಮುಗಿದ ಅಧ್ಯಾಯ..?

ದಿನದಿಂದ ದಿನಕ್ಕೆ ಟೀಮ್​ ಇಂಡಿಯಾದಿಂದ ಕೆ.ಎಲ್.ರಾಹುಲ್ ಸೈಡ್​ ಲೈನ್ ಆಗ್ತಿದ್ದಾರಾ? ಕೆ.ಎಲ್.ರಾಹುಲ್ ಪಾಲಿಗೆ ಭಾರತ ತಂಡದ ನಾಯಕತ್ವ ಮುಗಿದ ಅಧ್ಯಾಯವಾಗಿದ್ಯಾ? ಬಿಸಿಸಿಐನ ನಡೆ ಈ ಪ್ರಶ್ನೆಗಳನ್ನ ಹುಟ್ಟಿಸಿದೆ. ನಾಯಕತ್ವ ಮಾತ್ರವಲ್ಲ, ಕೆ.ಎಲ್.ರಾಹುಲ್ ಭವಿಷ್ಯಕ್ಕೂ ಕುತ್ತು ಬಂದಿದ್ಯಾ ಎಂಬ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣ ಏನು ಅಂತೀರಾ.? ಈ ಸ್ಟೋರಿ ಓದಿ.

Advertisment

ಕೆ.ಎಲ್.ರಾಹುಲ್. ಟೀಮ್ ಇಂಡಿಯಾದ ಸ್ಟ್ರೈಲಿಶ್ ಬ್ಯಾಟ್ಸ್​ಮನ್​​. ಈತನ ಒಂದೊಂದು ಕ್ಲಾಸಿಕ್​ ಶಾಟ್ಸ್​ ನೋಡೋದೆ ಕಣ್ಣಿಗೆ ಹಬ್ಬ. ಫಾರ್ಮೆಟ್​​​​ಗೆ ತಕ್ಕಂತೆ ತಮ್ಮನ್ನ ಬದಲಿಸಿಕೊಳ್ಳುವ ಕನ್ನಡಿಗ ರಾಹುಲ್​, ಪರ್ಫೆಕ್ಟ್ ಟೀಮ್ ಮ್ಯಾನ್​​. ಟೀಮ್ ಇಂಡಿಯಾದಲ್ಲಿ ಯಾವುದೇ ಸಮಸ್ಯೆ ಬಂದ್ರೂ ಕೆ.ಎಲ್.ರಾಹುಲ್ ಉತ್ತರವಾಗ್ತಿದ್ರು. ಓಪನರ್​ ಆಗಿ, ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ, ವಿಕೆಟ್ ಕೀಪರ್​​ ಆಗಿ​, ನಾಯಕನಾಗಿ ತಂಡಕ್ಕಾಗಿ ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ರು.

ಇದನ್ನೂ ಓದಿ: ಪ್ರಾಂಕ್​ ಮಾಡ್ತಾರೆ ಈ ಕೊಹ್ಲಿ! ಯುಟ್ಯೂಬ್​ಗೆ ವಿಡಿಯೋ ಅಪ್​ಲೋಡ್​ ಮಾಡಿ ಹಣ ಮಾಡ್ತಾರೆ!

ಆದರೀಗ ಅದೇ ಆಪತ್ಭಾಂದವ ರಾಹುಲ್​ನ ಪ್ರತಿ ಹೆಜ್ಜೆಯಲ್ಲೂ​​ ಟೀಮ್​ ಇಂಡಿಯಾದಲ್ಲಿ ಸೈಡ್​ಲೈನ್​ ಮಾಡಲಾಗ್ತಿದೆ. ಅಂದು ಪ್ರತಿಯೊಂದಕ್ಕೂ ಕನ್ನಡಿಗ ಕೆ.ಎಲ್.ರಾಹುಲ್ ಬೇಕು ಅಂತಿದ್ದ ಬಿಸಿಸಿಐ ಆ್ಯಂಡ್ ಟೀಮ್ ಮ್ಯಾನೇಜ್​ಮೆಂಟ್​ ದೂರ ಇಡೋ ಪ್ರಯತ್ನ ಮಾಡ್ತಿದೆ. ಟಿ20 ತಂಡದಿಂದ ಕೈ ಬಿಟ್ಟಿದ್ದಾಯ್ತು. ಇದೀಗ ನಾಯಕತ್ವದ ವಿಚಾರದಲ್ಲೂ ರಾಹುಲ್​ಗೆ ಅನ್ಯಾಯವಾಗುವಂತೆ ಕಾಣಿಸ್ತಿದೆ.

Advertisment

publive-image

ಟೀಮ್ ಇಂಡಿಯಾ ನಾಯಕನಾಗಬೇಕಿದ್ದವನಿಗೆ ಇದೆಂಥಾ ಶಿಕ್ಷೆ..?

2 ತಿಂಗಳ ಹಿಂದಿನ ಪುಟ ಓಪನ್​ ಮಾಡಿದ್ರೆ, ಟೀಮ್ ಇಂಡಿಯಾದ ನಾಯಕತ್ವಕ್ಕೆ ರಾಹುಲ್​​ ಬೆಸ್ಟ್​ ಚಾಯ್ಸ್ ಆಗಿದ್ರು. ರೋಹಿತ್ ಶರ್ಮಾ ನಿರ್ಗಮನದ ಬಳಿಕ ನಾಯಕನ ಸ್ಥಾನಕ್ಕೆ ಹೇಳಿ ಮಾಡಿಸಿದ್ದ ಆಟಗಾರ ಮಾತ್ರವಲ್ಲ, ಅರ್ಹ ವ್ಯಕ್ತಿಯೂ ಆಗಿದ್ದರು. ಇದಕ್ಕೆ ಕಾರಣ ಟೀಮ್ ಇಂಡಿಯಾಗೆ ಕನ್ನಡಿಗ ಕೆ.ಎಲ್.ರಾಹುಲ್ ನೀಡಿದ್ದ ಕೊಡುಗೆ ಹಾಗೂ ಆಟಗಾರರ ಜೊತೆಗಿನ ಬಾಂಧವ್ಯ. ಆದ್ರೆ, ಟಿ20 ವಿಶ್ವಕಪ್​ ಬಳಿಕ ನೋಡಿದ್ರೆ, ಎಲ್ಲವೂ ಉಲ್ಟಾ ಆಗಿದೆ. ಧಿಡೀರ್​ ಶುಭ್​ಮನ್ ಗಿಲ್​​ಗೆ ಟಿ20 ಹಾಗೂ ಏಕದಿನ ತಂಡದ ಉಪ ನಾಯಕತ್ವದ ಜವಾಬ್ದಾರಿ ನೀಡಲಾಯ್ತು. ಇದೀಗ ದುಲೀಪ್​ ಟ್ರೋಫಿಗೂ ಅದೇ ನಿರ್ಧಾರ ವಿಸ್ತರಣೆಯಾಗಿದೆ.

ಇದನ್ನೂ ಓದಿ: ಮುಂಬೈ ರೋಡಲ್ಲಿ.. ಲ್ಯಾಂಬೋರ್ಗಿನಿ ಕಾರಲ್ಲಿ.. ರೋಹಿತ್​​ ಸುತ್ತೋ ಕಾರಿಗಿಂತ ನಂಬರ್​ ಪ್ಲೇಟ್​ ಮೇಲಿದೆ ಎಲ್ಲರ ಕಣ್ಣು!

ದುಲೀಪ್​ ಟ್ರೋಫಿಗೆ ತಂಡಗಳನ್ನು ಪ್ರಕಟಿಸಿರುವ ಬಿಸಿಸಿಐ, ಎ ತಂಡದ ನಾಯಕತ್ವವನ್ನ ಅದೇ ತಂಡದಲ್ಲಿರೋ ಸೀನಿಯರ್​ ರಾಹುಲ್​ನ ಕಡೆಗಣಿಸಿ, ಯಂಗ್​​ ಶುಭ್​ಮನ್​ ಗಿಲ್​​ಗೆ ಕಟ್ಟಿದೆ. ಇದೀಗ ಅನುಭವಿ ಕೆ.ಎಲ್.ರಾಹುಲ್​, ಶುಭ್​ಮನ್ ಗಿಲ್ ಅಡಿಯಲ್ಲೇ ಆಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೆ, ಬಿಸಿಸಿಐನ ಈ ನಡೆ ಮತ್ತೊಂದು ಸಂದೇಶವನ್ನೇ ನೀಡ್ತಿದೆ.

Advertisment

publive-image

ಟೆಸ್ಟ್ ತಂಡದಲ್ಲಿ ಇಲ್ಲ ನಾಯಕತ್ವ, ಉಪ ನಾಯಕತ್ವ.?

ಕೆ.ಎಲ್.ರಾಹುಲ್​​, ಯಾವುದೇ ಕಂಡೀಷನ್ಸ್​ನಲ್ಲದರೂ ಸರಾಗವಾಗಿ ರನ್​ ಗಳಿಸುವ ಕಲೆಗಾರ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ನಂಥಹ ಚಾಲೆಂಜಿಂಗ್ ಪಿಚ್​​ಗಳಲ್ಲಿ ಸಿಡಿಸಿದ ಶತಕಗಳು ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.. ಕಳೆದ ವರ್ಷ ಸೌತ್​ ಆಫ್ರಿಕಾದ ಸೆಂಚೂರಿಯನ್​ನಲ್ಲಿ ಸಿಡಿಸಿದ ಶತಕ ನೋಡಿದ್ರೆ ಸಾಕು. ಕೆ.ಎಲ್.ರಾಹುಲ್ ಎಂಥಹ ವರ್ಲ್ಡ್​ ಕ್ಲಾಸ್ ಬ್ಯಾಟರ್ ಅನ್ನೋದಕ್ಕೆ ಉತ್ತರ ಸಿಗುತ್ತೆ.

ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ BCCI: ಹಳೆಯ ನಿಯಮ ಮತ್ತೆ ಜಾರಿಗೆ, ಏನದು?

ಬ್ಯಾಟಿಂಗ್​ ಮಾತ್ರವಲ್ಲ. ಟೆಸ್ಟ್​ನಲ್ಲಿ ಟೀಮ್​ ಇಂಡಿಯಾವನ್ನ 3 ಪಂದ್ಯಗಳಲ್ಲಿ ಮುನ್ನಡೆಸಿದ ಅನುಭವವೂ ರಾಹುಲ್​ಗಿದೆ. ಎಲ್ಲಾ ಫಾರ್ಮೆಟ್​ ಸೇರಿ 16 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರೋ ರಾಹುಲ್​, 11 ಗೆಲುವುಗಳನ್ನ ತಂದುಕೊಟ್ಟಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ರಾಹುಲ್​​ಗೆ ನಾಯಕತ್ವ ಸಿಗುತ್ತೆ ಅನ್ನೋ ಭರವಸೆ ಇತ್ತು. ಟೀಮ್​ ಇಂಡಿಯಾದಲ್ಲಿ ಉಪನಾಯಕನ ಪಟ್ಟ ಕಟ್ಟಿ, ದೇಶಿ ಕ್ರಿಕೆಟ್​ನಲ್ಲೂ ಶುಭ್​​ಮನ್​ಗೆ ನಾಯಕತ್ವ ನೀಡಿರೋದನ್ನ ನೋಡಿದ್ರೆ, ರಾಹುಲ್​​ಗೆ ನಾಯಕತ್ವ ಸಿಗೋದು ಕಷ್ಟ ಸಾಧ್ಯ ಅನ್ನಿಸ್ತಿದೆ.

Advertisment

publive-image

ಇಂಜುರಿ ನೆಪ ರಾಹುಲ್​​ಗೆ ಮುಳ್ಳು.. ಗಿಲ್​ ಭವಿಷ್ಯಕ್ಕೆ ಅಡಿಗಲ್ಲು..!

ಟಿ20 ತಂಡದಿಂದ ರಾಹುಲ್​​ಗೆ ಕೊಕ್ ನೀಡಲು ಕಾರಣ ಸ್ಲೋ ಬ್ಯಾಟಿಂಗ್ ಆ್ಯಂಡ್ ಇನ್ಕನ್ಸಿಸ್ಟೆನ್ಸಿ ಅನ್ನೋ ಮಾತಿದೆ. ಆದ್ರೆ, ಏಕದಿನ ಫಾರ್ಮೆಟ್​​​ಗೆ ಬಂದ್ರೆ, ಸದ್ಯ ವಿಶ್ವ ಕ್ರಿಕೆಟ್​ನ ಬೆಸ್ಟ್​ ಮಿಡಲ್ ಆರ್ಡರ್​ ಬ್ಯಾಟರ್ ಅನ್ನೋ ಹೆಗ್ಗಳಿಕೆ ಇದೆ. ಆದ್ರೂ ಪಟ್ಟವನ್ನ ಕಿತ್ತುಕೊಳ್ಳಲಾಗಿದೆ. ಇನ್ನು, ಟೆಸ್ಟ್​ ಕ್ರಿಕೆಟ್​ಗಂತೂ ಪಕ್ಕಾ ಸೂಟ್ ಆಗ್ತಾರೆ. ಆದ್ರೆ, ಪದೇ ಪದೇ ಇಂಜುರಿಗೆ ತುತ್ತಾಗ್ತಿರುವುದು​ ನಾಯಕತ್ವಕ್ಕೆ ಕುತ್ತಾಗಿದೆ. ಈ ವಿಚಾರವೇ ಶುಭ್​ಮನ್​ ಗಿಲ್​ನ ಭವಿಷ್ಯದ ಕ್ಯಾಪ್ಟನ್ ಮಾಡಲು ಅಡಿಗಲ್ಲಾಗಿ ಮಾರ್ಪಟ್ಟಿದೆ.

ಟಿ20 ತಂಡದಲ್ಲಿ ಸ್ಥಾನ ಹೋಯ್ತು. ಅದಾದ ಬಳಿಕ ಉಪನಾಯಕನ ಪಟ್ಟ ಹೋಯ್ತು.. ಇದೀಗ ದುಲೀಫ್​ ಟ್ರೋಫಿಯಲ್ಲೂ ನಾಯಕತ್ವ ಕೈ ತಪ್ಪಿದೆ. ಇದು ರಾಹುಲ್​ಗಂತೂ ಎಚ್ಚರಿಕೆಯ ಕರೆಗಂಟೆಯಾಗಿದೆ. ಕನ್ಸಿಸ್ಟೆಂಟ್ ಪರ್ಫಾಮೆನ್ಸ್​ ನೀಡಿದೇ ಹೋದ್ರೆ, ಮುಂದೆ ತಂಡದಲ್ಲಿ ಸ್ಥಾನವೂ ಕೈ ತಪ್ಪೋ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment