Advertisment

ನ್ಯೂಜಿಲೆಂಡ್ ವಿರುದ್ಧ ಕ್ಲೀನ್​ಸ್ವೀಪ್ ಮುಖಭಂಗ; ಭಾರೀ ಬದಲಾವಣೆಗೆ ಮುಂದಾದ ಬಿಸಿಸಿಐ!

author-image
Gopal Kulkarni
Updated On
ನ್ಯೂಜಿಲೆಂಡ್ ವಿರುದ್ಧ ಕ್ಲೀನ್​ಸ್ವೀಪ್ ಮುಖಭಂಗ; ಭಾರೀ ಬದಲಾವಣೆಗೆ ಮುಂದಾದ ಬಿಸಿಸಿಐ!
Advertisment
  • ಟೀಂ ಇಂಡಿಯಾದ ಭವಿಷ್ಯದ ಚಿಂತೆಗೆ ಬಿದ್ದ ಬಿಸಿಸಿಐ ಬಾಸ್​​ಗಳು
  • ಪಂತ್​​ಗೆ ಪಟ್ಟ ಕಟ್ಟಲು ಬಿಸಿಸಿಐ ವಲಯದಲ್ಲಿ ನಡೆಯುತ್ತಿವೆ ಚರ್ಚೆ
  • ಪ್ರತ್ಯೇಕ ನಾಯಕರ ನೇಮಕಕ್ಕೆ ಬಿಸಿಸಿಐ ಒಲವು.! ರಿಷಬ್​ಗೆ ಪಟ್ಟ?

ನ್ಯೂಜಿಲೆಂಡ್​ ವಿರುದ್ಧದ ಕ್ಲೀನ್​ ಸ್ವೀಪ್​ ಮುಖಭಂಗದ ಬಳಿಕ ಬಿಸಿಸಿಐ ವಲಯದಲ್ಲಿ ಭಾರಿ ಬೆಳವಣಿಗೆಗಳು ನಡೀತಿವೆ. ಭವಿಷ್ಯಕ್ಕೆ ಪ್ಲಾನ್​ ರೂಪಿಸ್ತಿರೋ ಬಿಸಿಸಿಐ ಬಾಸ್​ಗಳು, ರಿಷಭ್​ ಪಂತ್​​ಗೆ ಹೊಸ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ. ಬಿಸಿಸಿಐ ವಲಯದಲ್ಲಿ ನಡೆದಿರೋ ಚರ್ಚೆ ಏನು.? ಪಂತ್​​ಗೆ ನೀಡಲು ಹೊರಟಿರೋ ಜವಾಬ್ದಾರಿ ಯಾವುದು?
ಇಂಡೋ-ಆಸಿಸ್​ ಹೈವೋಲ್ಟೆಜ್​ ಟೆಸ್ಟ್​ ಸರಣಿ ಆರಂಭಕ್ಕೆ ದಿನಗಣನೆ​​ ಶುರುವಾಗಿದೆ. ಪ್ರತಿಷ್ಠಿತ ಬಾರ್ಡರ್​​-ಗವಾಸ್ಕರ್​​ ಟೆಸ್ಟ್​​ ಸರಣಿಯನ್ನಾಡಲು ಟೀಮ್​ ಇಂಡಿಯಾ ಆಸ್ಟ್ರೇಲಿಯಾಗೆ ಹಾರಿದೆ. ತವರಿನಲ್ಲಿ ಹೀನಾಯ ಮುಖಭಂಗ ಅನುಭವಿಸಿರೋ ಟೀಮ್​ ಇಂಡಿಯಾ, ಕಾಂಗರೂ ನಾಡಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳೋ ಲೆಕ್ಕಾಚಾರ ಹಾಕಿಕೊಂಡಿದೆ.

Advertisment

publive-image

ರೋಹಿತ್​ ಅಲಭ್ಯತೆಯಲ್ಲಿ ಬೂಮ್ರಾ ನಾಯಕ.!
2ನೇ ಮಗುವಿನ ನಿರೀಕ್ಷೆಯಲ್ಲಿರೋ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಮುಂಬೈನಲ್ಲೇ ಉಳಿದಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ ರೋಹಿತ್,​​ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನಾಡೋದು ಅನುಮಾನವಾಗಿದೆ. ರೋಹಿತ್​ ಅಲಭ್ಯತೆಯಲ್ಲಿ ವೈಸ್​​ ಕ್ಯಾಪ್ಟನ್​ ಆಗಿರೋ ಜಸ್​ಪ್ರಿತ್ ಬೂಮ್ರಾ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.

ಪಂತ್​​ಗೆ ಪಟ್ಟ? ಬಿಸಿಸಿಐ ವಲಯದಲ್ಲಿ ಬಿಸಿ ಚರ್ಚೆ.!
ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್​ ಅಲಭ್ಯತೆಯಲ್ಲಿ ಬೂಮ್ರಾಗೆ ನಾಯಕತ್ವ ಜವಾಬ್ದಾರಿ ನೀಡೋ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ. ಅನುಭವ ಹಾಗೂ ಸೀನಿಯಾರಿಟಿ ಲೆಕ್ಕಾಚಾರದಲ್ಲಿ ಬೂಮ್ರಾನೇ ಸದ್ಯಕ್ಕೆ ಬೆಸ್ಟ್​ ಚಾಯ್ಸ್​.! ಹೀಗಾಗಿ ಬಿಸಿಸಿಐ ಈ ನಿರ್ಧಾರ ಮಾಡಿದೆ. ಆದ್ರೂ, ಇದ್ರ ನಡುವೆ ರಿಷಭ್​ ಪಂತ್​ಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡೋ ಬಗ್ಗೆಯೂ ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿದೆ. ಯಾಕಂದ್ರೆ, ಭವಿಷ್ಯದಲ್ಲಿ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರೆ, ಉತ್ತರಾಧಿಕಾರಿಯಾಗಿ ರಿಷಭ್ ಪಂತ್​ನ ಬೆಳೆಸೋ ಕೆಲಸ ಶುರುವಾಗಿದೆ.

ಇದನ್ನೂ ಓದಿ:KL​​ ರಾಹುಲ್​ ಬೆನ್ನಲ್ಲೇ ಆರ್​​ಸಿಬಿ ಟೀಮ್​ಗೆ ಮತ್ತೋರ್ವ ಕನ್ನಡಿಗ ಎಂಟ್ರಿ.. ಯಾರದು? 

Advertisment

publive-image

ಟೆಸ್ಟ್​ ತಂಡಕ್ಕೆ ರಿಷಭ್​ ಪಂತ್​ ಭವಿಷ್ಯದ ನಾಯಕ?
37 ವರ್ಷದ ರೋಹಿತ್ ಯಾವಾಗ ಬೇಕಾದ್ರೂ, ಕ್ರಿಕೆಟ್​ಗೆ ಗುಡ್​ ಬೈ ಹೇಳಬಹುದು. ಹೀಗಾಗಿ ರೋಹಿತ್​ ಶರ್ಮಾ ತಂಡದಲ್ಲಿದ್ದಾಗಲೇ ಭವಿಷ್ಯದ ನಾಯಕನನ್ನ ರೂಪಿಸೋ ಕೆಲಸ ಬಿಸಿಸಿಐ ವಲಯದಲ್ಲಿ ಜೋರಾಗಿ ನಡೀತಿದೆ. ಭವಿಷ್ಯದಲ್ಲಿ ವೈಟ್​ಬಾಲ್​ ಹಾಗೂ ರೆಡ್​ಬಾಲ್ ಕ್ರಿಕೆಟ್​ಗೆ ಪ್ರತ್ಯೇಕ ನಾಯಕರ ನೇಮಕಕ್ಕೆ ಬಿಸಿಸಿಐ ಒಲವು ಹೊಂದಿದೆ. ಈಗಾಗಲೇ ಏಕದಿನ ಹಾಗೂ ಟಿ20 ತಂಡಕ್ಕೆ ಯುವ ಆಟಗಾರ ಶುಭ್​ಮನ್​ ಗಿಲ್​ನ ಉಪನಾಯಕನನ್ನಾಗಿ ನೇಮಿಸಲಾಗಿದೆ. ಇದ್ರೊಂದಿಗೆ ಗಿಲ್​​ ವೈಟ್​ಬಾಲ್​ ಫಾರ್ಮೆಟ್​ನ ಭವಿಷ್ಯದ ನಾಯಕ ಅನ್ನೋ ಸಂದೇಶವನ್ನ ಬಿಸಿಸಿಐ ನೀಡಿದೆ. ಇದೀಗ ಟೆಸ್ಟ್​ ತಂಡದ ಪ್ಯೂಚರ್​ ಕ್ಯಾಪ್ಟನ್​ ಆಗಿ ರಿಷಭ್ ಪಂತ್​ ಬೆಳೆಸಲು ಬಾಸ್​ಗಳು ಮುಂದಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆಯ ವೇಳೆಯೇ ಈ ಬಗ್ಗೆ ಚರ್ಚೆ ನಡೆದಿವೆ ಎನ್ನಲಾಗಿದೆ.

ಟೆಸ್ಟ್​ ನಾಯಕತ್ವಕ್ಕೆ ಪಂತ್​ ಆಯ್ಕೆ ಹಿಂದಿದೆ ಕಾರಣ.!
ರಿಷಭ್​ ಪಂತ್​​ ತ್ರಿ ಫಾರ್ಮೆಟ್​ ಪ್ಲೇಯರ್​​ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ, ಟೆಸ್ಟ್​ನಲ್ಲಿ ರಿಷಭ್​ ಪಂತ್​ ಹೆಚ್ಚು ಎಫೆಕ್ಟಿವ್​​. ಎಲ್ಲಾ ಕಂಡಿಷನ್ಸ್​ನಲ್ಲಿ ಸಾಮರ್ಥ್ಯವನ್ನ ಪ್ರೂವ್​ ಮಾಡಿದ್ದಾರೆ. ಎದುರಾಳಿಯ ಗೇಮ್​ಪ್ಲಾನ್​ಗಳನ್ನ ಅರ್ಥ ಮಾಡಿಕೊಳ್ಳುವ, ಪರ್ಫೆಕ್ಟ್​ ಆಗಿ ಗೇಮ್​ ರೀಡ್ ಮಾಡುವ, ಒತ್ತಡವನ್ನ ನಿಭಾಯಿಸುವ ಸಾಮರ್ಥ್ಯ ಪಂತ್​ಗಿದೆ. ಫೀಲ್ಡ್​ ಪ್ಲೇಸ್​ಮೆಂಟ್​, ಬೌಲರ್ಸ್​ ರೋಟೆಶನ್​ ವಿಚಾರದಲ್ಲಿ ಈಗಲೇ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಸಲಹೆ ನೀಡ್ತಿದ್ದಾರೆ. ಹೀಗಾಗಿ ಪಂತ್​​ಗೆ ನಾಯಕತ್ವ ಜವಾಬ್ಧಾರಿ ನೀಡಿದ್ರೆ, ಸಮರ್ಥವಾಗಿ ನಿಭಾಯಿಸ್ತಾರೆ ಅನ್ನೋದು ಬಾಸ್​ಗಳ ಲೆಕ್ಕಾಚಾರ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ​​ ಆತಿಥ್ಯದಿಂದ ಹಿಂದೆ ಸರಿಯುತ್ತಾ ಪಾಕಿಸ್ತಾನ? ಕಾರಣವೇನು ಗೊತ್ತಾ?

Advertisment

ಆಟದ ಹೊರತಾಗಿ ಮ್ಯಾನ್​ ಮ್ಯಾನೇಜ್​ಮೆಂಟ್​ ಸ್ಕಿಲ್​ ವಿಚಾರದಲ್ಲಿ ಪಂತ್​ಗೆ​ ಫುಲ್​ ಮಾರ್ಕ್ಸ್​. ಜೂನಿಯರ್​-ಸೀನಿಯರ್​​ ಎಂಬ ಬೇಧವಿಲ್ಲದೇ ಎಲ್ಲರೊಂದಿಗೆ ಬೆರೆಯುವ ಪಂತ್​, ಡ್ರೆಸ್ಸಿಂಗ್​ ರೂಮ್​​ ವಾತಾವರಣವನ್ನ ಚನ್ನಾಗಿ ಇಡಬಲ್ಲರು. ಈ ಕ್ವಾಲಿಟಿ ಕೂಡ ಪಂತ್​ ಮೇಲೆ ಬಿಸಿಸಿಐ ಬಾಸ್​ಗಳು ಒಲವು ತೋರಲು ಕಾರಣವಾಗಿದೆ.
ನ್ಯೂಜಿಲೆಂಡ್​ ವಿರುದ್ಧ ಸರಣಿ ಸೋಲಿನ ಬಳಿಕ ಬಿಸಿಸಿಐ ವಲಯದಲ್ಲಿ ಹಲವು ಬೆಳವಣಿಗೆಗಳು ನಡೀತಿವೆ. ಅದ್ರಲ್ಲಿ ಭವಿಷ್ಯದ ನಾಯಕನ ಆಯ್ಕೆಯೂ ಒಂದಾಗಿದ್ದು, ರಿಷಭ್​ ಪಂತ್​ ಮೇಲೆ ಬಾಸ್​ಗಳು ಒಲವು ತೋರಿದ್ದಾರೆ. ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್​ ಆಟದ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಕಾಂಗರೂ ನಾಡಲ್ಲಿ ಪಂತ್​ ಇಂಪ್ರೆಸ್ಸಿವ್​ ಆಟವಾಡಿದ್ರೆ, ಬಂಪರ್​ ಗ್ಯಾರಂಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment