/newsfirstlive-kannada/media/post_attachments/wp-content/uploads/2025/05/ROHIT_BABAR.jpg)
ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯ ಬಿಸಿ ಕ್ರಿಕೆಟ್ ಮೇಲೂ ದೀರ್ಘಕಾಲ ಪರಿಣಾಮ ಬೀರುವ ಲಕ್ಷಣಗಳು ಕಾಣುತ್ತಿವೆ. 2025ರ ಏಷ್ಯಾಕಪ್ ಹಾಗೂ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸದಿರಲು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಭಾರತ ಹಾಗೂ ಪಾಕ್ ಕ್ರಿಕೆಟ್ ತಂಡದ ನಡುವೆ ಏಪ್ಯಾಕಪ್ನಂತಹ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. ಈ ಪಂದ್ಯಗಳಿಗೂ ಇನ್ಮುಂದೆ ಕಂಟಕ ಎದುರಾಗಬಹುದು. ಸದ್ಯ 2025ರ ಏಷ್ಯಾಕಪ್ ಆಡದಿರಲು ಮತ್ತು ಟೂರ್ನಿಯನ್ನು ಭಾರತದಲ್ಲಿ ಆಯೋಜನೆ ಮಾಡದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ 2025ರ ಏಷ್ಯಾಕಪ್ ನಡೆಯಲಿದೆ. ಈ ಟೂರ್ನಿಯನ್ನು ಆರ್ಥಿಕ ದೃಷ್ಟಿಯಿಂದ ನೋಡಿದರೆ ಶ್ರೀಲಂಕಾ, ಬಾಂಗ್ಲಾ ಮತ್ತು ಅಫ್ಘಾನ್ ಒಳ್ಳೆಯ ಆದಾಯ ಮಾಡಿಕೊಳ್ಳುತ್ತವೆ. ಇವುಗಳಲ್ಲಿ ಭಾರತ- ಪಾಕ್ ಪಂದ್ಯವೆಂದರೆ ಅತಿ ಹೆಚ್ಚು ಆಕರ್ಷಣೆ ಜೊತೆಗೆ ಲಾಭನೂ ದುಪ್ಪಟ್ಟು ಆಗಿರುತ್ತದೆ. ಈಗಿನ ರಾಜಕೀಯ ಬೆಳವಣಿಗೆಯಿಂದ ಬಿಸಿಸಿಐ ಈ ಟೂರ್ನಿಯಲ್ಲಿ ಮುಂದುವರೆಯುವ ಸಾಧ್ಯತೆ ಕಡಿಮೆ ಇದೆ. ಇದರಿಂದ ಭಾರತ ಹಿಂದಕ್ಕೆ ಬಂದರೆ ಇಡೀ ಟೂರ್ನಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬೀಳಲಿದೆ ಎನ್ನಲಾಗಿದೆ.
ಇದನ್ನೂ ಓದಿ:RCB ಸ್ಟಾರ್ ವಿರಾಟ್ ಬ್ಯಾಟಿಂಗ್ ಸ್ಪೀಡ್ ಹೇಗಿದೆ..? ಈ ಐಪಿಎಲ್ ಚೇಸಿಂಗ್ನಲ್ಲೂ ಕೊಹ್ಲಿ ಕಿಂಗ್!
ಎಸಿಸಿ ಆಯೋಜನೆ ಮಾಡುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡುವುದಿಲ್ಲ. ಈ ಬಗ್ಗೆ ಎಸಿಸಿ ಜೊತೆ ಪತ್ರ ವ್ಯವಹಾರ ಮಾಡಲಾಗಿದೆ. ಇದಿಷ್ಟೇ ಅಲ್ಲ ಈ ವರ್ಷ ನಡೆಯುವ ಮಹಿಳೆಯರ ಎಮರ್ಜಿಂಗ್ ಟೀಮ್ಸ್ ಮತ್ತು ಪುರುಷರ ಏಷ್ಯಾಕಪ್ನಲ್ಲೂ ಭಾಗಿಯಾಗಲ್ಲ. ಮುಂದಿನ ಯಾವುದೇ ಕಾರ್ಯಕ್ರಮಗಳಲ್ಲೂ ಭಾಗಿ ಆಗುವುದಿಲ್ಲ. ನಾವು ನಿರಂತರವಾಗಿ ಭಾರತ ಸರ್ಕಾರದ ಸಂಪರ್ಕದಲ್ಲಿ ಇದ್ದೇವೆ ಎಂದು ಪತ್ರದಲ್ಲಿ ಬಿಸಿಸಿಐ ತಿಳಿಸಿದೆ.
2024ರಲ್ಲಿ ಏಷ್ಯಾ ಕಪ್‌ನ ಮಾಧ್ಯಮ ಹಕ್ಕುಗಳನ್ನು 170 ಮಿಲಿಯನ್ ಯುಎಸ್ ಡಾಲರ್ ಅಂದರೆ 14,52,24,45,500 ಕೋಟಿ ರೂಪಾಯಿಗೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) ಖರೀದಿ ಮಾಡಿತ್ತು. ಈ ಸಲ ಏಷ್ಯಾಕಪ್ ಪಂದ್ಯಾವಳಿಗಳು ನಡೆಯದಿದ್ದರೇ ಒಪ್ಪಂದವನ್ನು ಪುನರ್ ರಚಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ