ಗಂಭೀರ್ ತಲೆದಂಡಕ್ಕೆ ಕೌಂಟ್​ಡೌನ್.. 2 ತಿಂಗಳು, 2 ಚಾನ್ಸ್ ಟೈಮ್​ ಫಿಕ್ಸ್..!

author-image
Ganesh
Updated On
Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!
Advertisment
  • ಅಲುಗಾಡ್ತಿದೆ ಗೌತಿಯ ಹೆಡ್ ಕೋಚ್ ಕುರ್ಚಿ
  • ಕೋಚ್ ಬದಲಾವಣೆಗೆ ಬಿಗ್​ಬಾಸ್​ಗಳ ಚಿಂತನೆ
  • ಸಿಡ್ನಿ​ ಸೋತರೆ ಟೆಸ್ಟ್​ ಫಾರ್ಮೆಟ್​ಗೆ ಹೊಸ ಕೋಚ್

ಗೌತಮ್​ ಗಂಭೀರ್​.. ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದು ಜಸ್ಟ್​ ಆರೇ ಆರು ತಿಂಗಳಾಗಿವೆ. 6 ತಿಂಗಳಲ್ಲೇ ಟೀಮ್ ಇಂಡಿಯಾದ ಆಂತರಿಕ ಕಲಹಗಳು ಒಂದೊಂದಾಗಿ ಹೊರಬೀಳ್ತಿವೆ. ಇದರ ಮಧ್ಯೆ ಗೌತಮ್ ಗಂಭೀರ್​​​ ಭವಿಷ್ಯದ ಪ್ರಶ್ನೆಯೂ ಉದ್ಭವ ಆಗಿದೆ.

ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆದ್ಮೇಲಿಂದ ನಿರೀಕ್ಷೆ ಡಬಲ್ ಆಗಿತ್ತು. ಟೀಮ್ ಇಂಡಿಯಾಗೆ ತಕ್ಕ ಕೋಚ್ ಸಿಕ್ಕಾಯ್ತು. ಇನ್ಮುಂದೆ ನಮ್ದೇ ಹವಾ ಅಂತಾ ಕೊಂಡಾಡಿದ್ದಾಯ್ತು. ಯಾವ ಟೀಮ್ ಇಂಡಿಯಾ ಕೋಚ್​ ಎಂಟ್ರಿಗೂ ಸಿಗದಷ್ಟು ಬಿಲ್ಡಪ್ ಗಂಭೀರ್​ಗೆ ಸಿಕ್ಕಿತ್ತು​. ಗಂಭೀರ್​ ಬಂದಾಯ್ತು ಗೆಲುವು ನಮ್ದೇ ಅನ್ನೋ ರೇಂಜ್​ನಲ್ಲಿ ಹೊಗಳಿ ಅಟ್ಟಕ್ಕೇರಿಸಿದ್ದಾಯ್ತು. ಅಖಾಡಕ್ಕಿಳಿದ ಗಂಭೀರ್​​, ಫಸ್ಟ್​ ಸಿರೀಸ್​ನಲ್ಲಿ ಮಾಡಿದ ಚಮತ್ಕಾರಕ್ಕೆ, ಬಿಟ್ಟಿ ಡೈಲಾಗ್ಸ್​ಗೆ ಇದು ಅಸಲಿ ಕೋಚಿಂಗ್ ಸ್ಟ್ರೈಲ್​ ಅಂತಾನೇ ಕೊಂಡಾಡಿದ್ರು. ಆದ್ರೀಗ ಇದೇ ಹೆಡ್​ ಕೋಚ್ ಗಂಭೀರ್ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ.

ಇದನ್ನೂ ಓದಿ:ರೋಹಿತ್​​ರನ್ನು ಹೊರಗಿಟ್ಟಿದ್ದು ಗಂಭೀರ ಅಲ್ಲ; ಈ ನಿರ್ಧಾರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡ..!

publive-image

ಗಂಭೀರ್ ತಲೆದಂಡಕ್ಕೆ ಕೌಂಟ್​ಡೌನ್..!

6 ತಿಂಗಳ ಹಿಂದೆ ಹೆಡ್​ ಕೋಚ್ ಹುದ್ದೆಗೇರಿದ್ದ ಗಂಭೀರ್, ಹೆಡ್ ಕೋಚ್ ಸ್ಥಾನ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಕಳೆದ ಟೀಮ್ ಇಂಡಿಯಾದ ಸಾಲು ಸಾಲು ವೈಫಲ್ಯಗಳು. ಟಿ20 ಫಾರ್ಮೆಟ್​ನಲ್ಲಿ ಹೊರತು ಪಡೆಸಿದ್ರೆ ಗಂಭೀರ್ ಅಂಡರ್​ನಲ್ಲಿ ಸಾಲು ಸಾಲು ಸೋಲುಗಳನ್ನ ಭಾರತ ಅನುಭವಿಸಿದೆ. ಶ್ರೀಲಂಕಾ ಎದುರಿನ ಏಕದಿನ ಸರಣಿ.. ನ್ಯೂಜಿಲೆಂಡ್ ಎದುರಿನ ಟೆಸ್ಟ್​ ಸರಣಿಯ ಮುಖಭಂಗ.. ಸದ್ಯ ನಡೀತಿರುವ ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿಯ ಹಿನ್ನಡೆ ಹಾಗೂ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನ ಪಾತಾಳಕ್ಕೆ ಕುಸಿದಿದೆ. ಆಂತರಿಕೆ ಕಚ್ಚಾಟಕ್ಕೂ ನಾಂದಿಯಾಡಿದೆ. ಇದೆಲ್ಲವೂ ಕೋಚ್​​​ ಗಂಭೀರ್, ಕಾರ್ಯವೈಖರಿಯನ್ನೇ ಪ್ರಶ್ನೆ ಮಾಡಿಲ್ಲ. ಗಂಭೀರ್, ಕೋಚ್ ತಲೆದಂಡಕ್ಕೂ ನಾಂದಿಯಾಡಿದೆ.

ಕೋಚ್ ಬದಲಾವಣೆಗೆ ಬಿಗ್​ಬಾಸ್​ಗಳ ಚಿಂತನೆ

ಗಂಭೀರ್ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಬಿಗ್​ಬಾಸ್​ಗಳು, ಕೋಚ್ ಬದಲಾವಣೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದು ಸಹಜವಾಗೇ ಗೌತಮ್ ಗಂಭೀರ್​, ಕೋಚ್ ಹುದ್ದೆ ಅಲುಗಾಡುವಂತೆ ಮಾಡಿದೆ. ಹುದ್ದೆಯಿಂದ ಕಿತ್ತೆಸೆಯೋ ಮುನ್ನ ಬಿಸಿಸಿಐ ಬಿಗ್​ಬಾಸ್​ಗಳು, ಗಂಭೀರ್​ಗೆ 2 ತಿಂಗಳಲ್ಲಿ ಎರಡು ಟಾಸ್ಕ್ ನೀಡಿದ್ದಾರೆ.​ ಆ ಎರಡು ಟಾಸ್​​​​ ಗೆದರಷ್ಟೇ ಕೋಚ್ ಆಗಿ ಉಳಿಯುವ ಷರತ್ತು ಮುಂದಿಟ್ಟಿದ್ದಾರೆ.

ಇದನ್ನೂ ಓದಿ:2025ರಲ್ಲಿ ಟೇಕ್‌ ಆಫ್ ಆಗಿ 2024ರಲ್ಲಿ ಲ್ಯಾಂಡ್ ಆದ ವಿಮಾನ.. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ!

publive-image

ಸಿಡ್ನಿಯಲ್ಲಿ​ ಸೋತರೆ ಹೊಸ ಕೋಚ್

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಈಗಾಗಲೇ ಸಾಲು ಸಾಲು ಸೋಲುಂಡಿದೆ. ಸರಣಿ ಸಮಬಲ ಮಾಡಿಕೊಳ್ಳುವ ತನಕದಲ್ಲಿದೆ. ಇದೇ ಸಿಡ್ನಿ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದ್ರೆ ಹೆಡ್​ ಕೋಚ್ ಆಗಿ ಗೌತಮ್ ಗಂಭೀರ್ ಉಳಿಯೋದು ಅನುಮಾನವಾಗಿದೆ.

ಗಂಭೀರ್​ ಅಂಡರ್​​ನಲ್ಲಿ ಟೀಮ್ ಇಂಡಿಯಾ ಗೆದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಹೀಗಾಗಿ ಗೌತಮ್ ಗಂಭೀರ್​ ಭವಿಷ್ಯ ಪ್ರಶ್ನಾರ್ಹವಾಗಿದೆ. ಇವತ್ತಿನಿಂದ ಆರಂಭವಾಗಿರುವ ಸಿಡ್ನಿ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಗೆದರಷ್ಟೇ ಗೌತಮ್ ಗಂಭೀರ್​ಗೆ ಉಳಿಗಾಲ ಇಲ್ಲ. ಟೆಸ್ಟ್​ ತಂಡದ ಕೋಚ್ ಹುದ್ದೆಯಿಂದ ಗೇಟ್​ ಪಾಸ್ ಫಿಕ್ಸ್​.

ಟ್ರೋಫಿ ಸೋತರೆ ವೈಟ್​ಬಾಲ್​​ನಿಂದ ಔಟ್​

ಸಿಡ್ನಿ ಸವಾಲು ಗೆಲ್ಲುವ ಟಾಸ್ಕ್ ನೀಡಿರುವ ಬಿಸಿಸಿಐ ಬಿಗ್​ಬಾಸ್​​ಗಳು, ವೈಟ್​ ಬಾಲ್ ಫಾರ್ಮೆಟ್​ ಕೋಚ್ ಆಗಿ ಉಳಿಯಬೇಕಾದ್ರೆ ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಲೇಬೇಕಾದ ಷರತ್ತು ವಿಧಿಸಿದ್ದಾರೆ. ಒಂದು ವೇಳೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಮತ್ತದೇ ವೈಫಲ್ಯ ಅನುಭವಿಸಿದ್ರೆ. ಟೆಸ್ಟ್​ ಮಾತ್ರವಲ್ಲ.. ವೈಟ್​ಬಾಲ್ ಫಾರ್ಮೆಟ್​ನಿಂದಲೂ ಗೌತಮ್ ಗಂಭೀರ್​​​ ಕಿಕ್​ ಔಟ್ ಆಗ್ತಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..

publive-image

2 ತಿಂಗಳಲ್ಲಿ.. 2 ಟಾಸ್ಕ್ ಗೆಲ್ತಾರಾ ಗಂಭೀರ್?

ಎಂಥವರಿಗೂ ಇಂಥ ಪ್ರಶ್ನೆ ಕಾಡೇ ಕಾಡುತ್ತೆ. ಗಂಭೀರ್ ಕೋಚ್ ಆಗಿ ವೈಫಲ್ಯ ಕಂಡಿರುವುದೇ ಏಕದಿನ ಹಾಗೂ ಟೆಸ್ಟ್​ ಫಾರ್ಮೆಟ್​ನಲ್ಲಿ. ಏಕದಿನ ಫಾರ್ಮೆಟ್​ನಲ್ಲಿ ಸಿಂಹಳೀಯರ ಎದುರೇ ಸೋತಿರುವ ಟೀಮ್ ಇಂಡಿಯಾ, ಚಾಂಪಿಯನ್ಸ್​ ಟ್ರೋಫಿಯಲ್ಲಿ ಬಲಾಢ್ಯ ತಂಡಗಳಿಗೆ ಫೈಟ್​ ನೀಡುತ್ತಾ ಅನ್ನೋದೇ ಪ್ರಶ್ನೆ. ಕಳೆದ 6 ತಿಂಗಳಿಂದ ಏಕದಿನ ಸರಣಿಯನ್ನೇ ಆಡದ ಟೀಮ್ ಇಂಡಿಯಾ, ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಇಂಗ್ಲೆಂಡ್ ಎದುರು ಕೇವಲ 3 ಏಕದಿನ ಪಂದ್ಯಗಳನ್ನಾಡಲಿದೆ. ಇಷ್ಟರಲ್ಲೇ ಕೋಚ್ ಗಂಭೀರ್, ಸಕ್ಸಸ್​ ಫುಲ್ ಟೀಮ್ ಕಟ್ಟಿ ಗೆಲ್ತಾರಾ ಅಂದ್ರೆ ನಿಜಕ್ಕೂ ಡೌಟೇ.

ಇದನ್ನೂ ಓದಿ:BBK11; ಬಿಗ್​​ಬಾಸ್​​ನಲ್ಲಿ ಸಿಹಿ ಮುತ್ತಿನ ಸುರಿಮಳೆ.. ಯಾರು ಯಾರಿಗೆ ಎಷ್ಟು ಕಿಸ್ ಕೊಟ್ಟರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment