/newsfirstlive-kannada/media/post_attachments/wp-content/uploads/2025/01/TEAM_INDIA-1.jpg)
ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋ ಸುದ್ದಿಯ ನಡುವೆ ಮತ್ತೊಬ್ಬ ಸಪೋರ್ಟ್ ಸ್ಟಾಫ್ ಸೆಲೆಕ್ಷನ್ಗೆ ವೇದಿಕೆ ಸಜ್ಜಾಗಿದೆ. ಬಿಸಿಸಿಐ ಬಾಸ್ಗಳು ನ್ಯೂ ಬ್ಯಾಟಿಂಗ್ ಕೋಚ್ ಹುಡುಕಾಟದಲ್ಲಿದ್ದಾರೆ. ಈ ಸುದ್ದಿ ಗೊತ್ತಾಗಿದ್ದೇ ತಡ ಇಂಗ್ಲೆಂಡ್ನ ಸೂಪರ್ ಸ್ಟಾರ್ ಬ್ಯಾಟರ್ ಕೆವಿನ್ ಪೀಟರ್ಸನ್ ಕೋಚ್ ಹುದ್ದೆಗೆ ಟವೆಲ್ ಹಾಕಿದ್ದಾರೆ.
ಬ್ಯಾಟಿಂಗ್ ಕೋಚ್ ಹುಡುಕಾಟಕ್ಕಿಳಿದ ಬಿಸಿಸಿಐ
ಬಿಸಿಸಿಐ ಬಿಗ್ಬಾಸ್ಗಳು, ಈಗ ಹೊಸ ಬ್ಯಾಟಿಂಗ್ ಕೋಚ್ ನೇಮಕಕ್ಕೆ ಚಿಂತನೆ ನಡೆಸ್ತಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿ ಸೋಲಿನ ರಿವ್ಯೂ ಮೀಟಿಂಗ್ನಲ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಶ್ರೀಲಂಕಾ ಪ್ರವಾಸ, ನ್ಯೂಜಿಲೆಂಡ್ ಸರಣಿ, ಆಸ್ಟ್ರೇಲಿಯಾ ಪ್ರವಾಸದ ಕಳಪೆ ಪರ್ಫಾಮೆನ್ಸ್ ಕಂಡು ಬೇಸರಗೊಂಡಿರೋ ಬಿಸಿಸಿಐ ಬಾಸ್ಗಳು ಇದೀಗ ಹೊಸ ಬ್ಯಾಟಿಂಗ್ ಕೋಚ್ ನೇಮಕಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸ್ಟೀವ್ ಜಾಬ್ಸ್ ಪತ್ನಿಗೆ ಆಧ್ಯಾತ್ಮಿಕ ದೀಕ್ಷೆ ನೀಡಿದ ಸ್ವಾಮಿ ಕೈಲಾಶಾನಂದ ಗಿರಿ ಯಾರು..?
ಪೀಟರ್ಸನ್ ಓಪನ್ ಆಫರ್
ಬ್ಯಾಟಿಂಗ್ ಕೋಚ್ ಹುಡುಕಾಟದ ಸುದ್ದಿ ಹೊರ ಬಂದಿದ್ದೆ ಬಂದಿದ್ದು, ಟೀಮ್ ಇಂಡಿಯಾದ ನಯಾ ಕೋಚ್ ಆಗಲು ನಾನ್ ರೆಡಿ ಎಂಬ ಸಂದೇಶವನ್ನ ಇಂಗ್ಲೆಂಡ್ನ ಸ್ಟಾರ್ ಕೆವಿನ್ ಪೀಟರ್ಸನ್ ರವಾನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಬಿಸಿಸಿಐ ಬಾಸ್ಗಳಿಗೆ ಓಪನ್ ಆಫರ್ ನೀಡಿದ್ದಾರೆ. ಇಂಗ್ಲೆಂಡ್ನ ಮಾಜಿ ಕ್ಯಾಪ್ಟನ್ ಆಫರ್ ನೀಡಿದ ಬಳಿಕ ಕೆವಿನ್ ಪೀಟರ್ಸನ್ ಬ್ಯಾಟಿಂಗ್ ಕೋಚ್ ಹುದ್ದೆಗೆ ಸೂಕ್ತನಾ ಅನ್ನೋ ಚರ್ಚೆ ಶುರುವಾಗಿದೆ. ನಿಜ ಹೇಳಬೇಕಂದ್ರೆ, ಕೆವಿನ್ ಪೀಟರ್ಸನ್ ತಂಡ ಸೇರಿಕೊಂಡ್ರೆ, ಟೀಮ್ ಇಂಡಿಯಾ ಬಲ ಹೆಚ್ಚಲಿದೆ.
ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಕೆವಿನ್ ಪೀಟರ್ಸನ್ ನೇಮಕವಾದಲ್ಲಿ, ಗೌತಮ್ ಗಂಭೀರ್ ಅಂಡರ್ನಲ್ಲಿ ಕೆಲಸ ಮಾಡಬೇಕಾಗುತ್ತೆ. ನೇರಾ ನೇರ ಮಾತನಾಡುವ ಕೆವಿನ್ ಪೀಟರ್ಸನ್, ಶಾರ್ಟ್ ಟೆಂಪರ್ ಗಂಭೀರ್ ಜೊತೆಗೆ ಕೆಲ್ಸ ಮಾಡೋಕೆ ಹೊಂದ್ತಾರಾ? ಎಂಬ ಪ್ರಶ್ನೆಯಿದೆ. ಕೆವಿನ್ ಪೀಟರ್ಸನ್ ಒಂದೆಡೆ ಓಪನ್ ಆಫರ್ ನೀಡಿದ್ದಾರೆ. ಬಿಸಿಸಿಐ ಬಾಸ್ಗಳು ಡೊಮೆಸ್ಟಿಕ್ ಲೆಜೆಂಡ್ ಮೇಲೆ ನೆಟ್ಟಿದೆ. ಪೀಟರ್ಸನ್ ಬೆನಲ್ಲೇ ಬ್ಯಾಟಿಂಗ್ ಕೋಚ್ ರೇಸ್ಗೆ ಮತ್ತೊಬ್ಬರ ಎಂಟ್ರಿಯಾಗಿದೆ.
ಬ್ಯಾಟಿಂಗ್ ಕೋಚ್ ರೇಸ್ನಲ್ಲಿ ಶಿತಾಂಶು ಕೋಟಕ್..!
ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿತಾಂಶು ಕೋಟಕ್, ದ್ರಾವಿಡ್ ಅಂಡ್ ಟೀಮ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಂಡಿದ್ದಿದೆ. ಇತ್ತಿಚೆಗೆ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೂ ತೆರಳಿದ್ದ ಶಿತಾಂಶು ಯಶಸ್ವಿ ಅನಿಸಿಕೊಂಡಿದ್ದಾರೆ. ಸೌರಾಷ್ಟ್ರ ತಂಡದ ಕೋಚ್ ಆಗಿ, ಗುಜರಾತ್ ಲಯನ್ಸ್ ಸಹಾಯಕ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಶಿತಾಂಶು ಬಗ್ಗೆ ಅಪಾರ ಒಲವು ಹೊಂದಿರುವ ಬಿಸಿಸಿಐ ಬಿಗ್ಬಾಸ್ಗಳು, ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ್ದಾರೆ. ಟಿ20 ಸರಣಿಯಲ್ಲಿ ಪಾಸ್ ಆದ್ರೆ, ಅಧಿಕೃತವಾಗಿ ನೇಮಿಸಿಕೊಳ್ಳುವ ಲೆಕ್ಕಾಚಾರ ಬಿಗ್ಬಾಸ್ಗಳದ್ದಾಗಿದೆ.
ಇದನ್ನೂ ಓದಿ: ಅಡಕತ್ತರಿಯಲ್ಲಿ ಸರ್ಫರಾಜ್ ಖಾನ್ ಕ್ರಿಕೆಟ್ ಬದುಕು.. ಆರೋಪ ಸಾಬೀತಾದ್ರೆ ಖೇಲ್ ಖತಂ..!
ಗಂಭೀರ್ ಪವರ್ ಕಟ್
ಗೌತಮ್ ಗಂಭೀರ್ ಕೇಳಿದ್ದೆಲ್ಲಾ ನೀಡಿದ್ದ ಬಿಸಿಸಿಐ, ಈಗ ಹೆಚ್ಚುವರಿ ಬ್ಯಾಟಿಂಗ್ ಕೋಚ್ ನೇಮಕಕ್ಕೆ ಮುಂದಾಗ್ತಿದೆ. ಇದು ಗೌತಮ್ ಗಂಭೀರ್ ಪವರ್ ಕಟ್ ಮಾಡೋಕೆ ಬಿಸಿಸಿಐ ಅನುಸರಿಸ್ತಿರುವ ಮಾರ್ಗನಾ ಎಂಬ ಅನುಮಾನ ಹುಟ್ಟಿಹಾಕಿದೆ. ಬ್ಯಾಟಿಂಗ್ ಕೋಚ್ ಆಗಿ ಯಾರದರೂ ನೇಮಕವಾದ್ರೆ ಈಗಾಗಲೇ ಸಹಾಯಕ ಕೋಚ್ಗಳಾಗಿರೋ ಅಭಿಷೇಕ್ ನಾಯರ್ ಅಥವಾ ರಾಯನ್ ಟೆನ್ ಡೆಸ್ಕೋಟ್ ಇಬ್ಬರಲ್ಲಿ ಒಬ್ಬರು ಕಿಕ್ ಔಟ್ ಆಗೋ ಸಾಧ್ಯತೆಯಿದೆ.
ಸಾಲು ಸಾಲು ವೈಫಲ್ಯದ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಗಂಭೀರ್ ಪವರ್ ಕಟ್ ಮಾಡೋದ್ರ ಜೊತೆಗೆ ಹೆಚ್ಚುವರಿ ಬ್ಯಾಟಿಂಗ್ ಕೋಚ್ ನೇಮಕಕ್ಕೆ ಒಲವು ತೋರಿದೆ. ಹೊಸ ಬ್ಯಾಟಿಂಗ್ ಕೋಚ್ ಬಂದ್ಮೇಲೆ, ಟೀಮ್ ಇಂಡಿಯಾದ ಹಣೆ ಬರಹ, ಬದಲಾಗುತ್ತಾ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ: ಕಲೆಗೂ ರಾಜಕೀಯ ಅಡ್ಡಗಾಲು, ಹಿಂದೂ ಸಂಘಟನೆ ಎಚ್ಚರಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್