newsfirstkannada.com

ಟೆಸ್ಟ್ ಕ್ಯಾಪ್ಟನ್ಸಿಯಲ್ಲಿ ರೋಹಿತ್​ಗಿಂತ ಈ ಆಟಗಾರನೇ ಬೆಸ್ಟ್​.. ಪಟ್ಟ ಕಟ್ಟದೇ ದೊಡ್ಡ ತಪ್ಪು ಮಾಡಿದ ಬಿಸಿಸಿಐ..!

Share :

Published June 10, 2023 at 6:29am

Update June 10, 2023 at 6:35am

  ಕೊಹ್ಲಿ ನಾಯಕತ್ವ ತೊರೆದಾಗಲೂ ಕೇಳಿಬಂದಿತ್ತು ಇವರ ಹೆಸರು

  ಟೆಸ್ಟ್​ ಪಂದ್ಯಗಳಿಗೆ ಹೇಳಿ ಮಾಡಿಸಿದ ಸ್ಟಾರ್ ಆಟಗಾರ ಇವರು

  ಬಿಸಿಸಿಐ ನಿರ್ಧಾರದ ವಿರುದ್ಧ ನಡೀತಿದೆ ಭಾರೀ ಚರ್ಚೆ

ರೋಹಿತ್ ಶರ್ಮಾಗೆ ಟೆಸ್ಟ್​ ಕ್ಯಾಪ್ಟನ್ಸಿ ನೀಡಿ ಬಿಸಿಸಿಐ ತಪ್ಪು ಮಾಡ್ತಾ? ಅಂದು ರಹಾನೆಗೆ ಟೆಸ್ಟ್​ ಕ್ಯಾಪ್ಟನ್ಸಿ ಪಟ್ಟ ನೀಡದೆ ಎಡವಿಬಿಡ್ತಾ? ಇಂಥದ್ದೊಂದು ಪ್ರಶ್ನೆ ಉದ್ಭವವಾಗ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್​ ವಲಯದಲ್ಲೂ ರಹಾನೆ ಬಗ್ಗೆ ಇಂಥದ್ದೊಂದು ಚರ್ಚೆ ನಡೀತಿದೆ.

ಅಜಿಂಕ್ಯಾ ರಹಾನೆ.. ಟೀಮ್ ಇಂಡಿಯಾದ ಕ್ಲಾಸ್ ಬ್ಯಾಟ್ಸ್​ಮನ್​.. ಕಂಡೀಷನ್ಸ್​ಗೆ ತಕ್ಕಂತೆ ತನ್ನನ್ನ ತಾನೂ ಮೋಲ್ಡ್​ ಮಾಡಿಕೊಳ್ಳುವ ರಹಾನೆ, ಸ್ವದೇಶದಲ್ಲೇ ಅಲ್ಲ. ವಿದೇಶದಲ್ಲೂ ಬ್ಯಾಟಿಂಗ್ ಝಲಕ್ ತೋರಿಸ್ತಾರೆ. ಇನ್​ಫ್ಯಾಕ್ಟ್​ ಈ ಮುಂಬೈಕರ್​​ ಟೆಕ್ನಿಕಲಿ ಹೈರೇಂಜ್ ಪ್ಲೇಯರ್ ಅನ್ನೋದಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​​​​​​​​ಶಿಪ್​​ನ ಫೈನಲ್​ ಪಂದ್ಯದಲ್ಲಿ ಕಟ್ಟಿದ ಹೋರಾಟದ ಇನ್ನಿಂಗ್ಸೇ ಸಾಕ್ಷಿ.

ಆಸ್ಟ್ರೇಲಿಯನ್ನರ ದಾಳಿಗೆ ಸಿಲುಕಿ ಹಿಟ್​ಮ್ಯಾನ್ ರೋಹಿತ್, ಶುಭ್​​ಮನ್​ ಗಿಲ್, ಚೇತಶ್ವರ ಪೂಜಾರ, ವಿರಾಟ್​ ಕೊಹ್ಲಿ ಪವಿಲಿಯನ್ ಪರೇಡ್​ ನಡೆಸಿದ್ರೆ, ರಹಾನೆ ಪಾಲಿಗೆ ಪುನರುಜ್ಜೀವನದ ಟೆಸ್ಟ್​ ಅಂತಾನೇ ಬಿಂಬಿತವಾಗಿರೋ WTC ಫೈನಲ್​ನಲ್ಲಿ ಅದ್ಭುತ ಆಟದ ಮೂಲಕ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದರು. ಆದ್ರೆ ಇದೇ ಇನ್ನಿಂಗ್ಸ್​ ರಹಾನೆಯನ್ನ ಟೆಸ್ಟ್​ ಕ್ರಿಕೆಟ್​ನ ನಾಯಕನನ್ನಾಗಿ ನೇಮಿಸಬೇಕು ಎಂಬ ಚರ್ಚೆಯನ್ನ ಹುಟ್ಟಿಹಾಕಿದೆ. ಇದಕ್ಕೆಲ್ಲಾ ಕಾರಣ ರೋಹಿತ್ ಶರ್ಮಾರ ಟೆಸ್ಟ್ ಕ್ಯಾಪ್ಟನ್ಸಿ.

ಟೆಸ್ಟ್​ ಕ್ರಿಕೆಟ್​ಗೆ ಬೇಕಿರಲಿಲ್ಲ ರೋಹಿತ್ ನಾಯಕತ್ವ

ನಿಜಕ್ಕೂ ಇದು ಸತ್ಯ. ಯಾಕಂದ್ರೆ, ಟೀಮ್ ಇಂಡಿಯಾ ಟೆಸ್ಟ್​ ಕ್ರಿಕೆಟ್​ನ ಅಧಿಪತಿಯಾಗಿ ಮರೆಯುತ್ತಿದ್ದ ಕಾಲದಲ್ಲೇ, ವಿರಾಟ್​ ಟೆಸ್ಟ್​ ಕ್ಯಾಪ್ಟನ್ಸಿ ತ್ಯಜಿಸಬೇಕಾಯ್ತು. ಅಂದು ಹಿಟ್​​ಮ್ಯಾನ್ ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದ್ದ ಬಿಸಿಸಿಐ, ನಿಜಕ್ಕೂ ರಿಯಲ್ ಲೀಡರ್​ಶಿಪ್​ ಹೊಂದಿದ್ದ ವೈಸ್​ ಕ್ಯಾಪ್ಟನ್​​​ ರಹಾನೆಯನ್ನು ಮರೆತಿತ್ತು. ಅಷ್ಟೇ ಅಲ್ಲ, ರಹಾನೆಯನ್ನು ಸೈಡ್​ಲೈನ್​ ಮಾಡಿ ತಂಡದಿಂದಲೂ ಗೇಟ್​ಪಾಸ್ ನೀಡಿತ್ತು. ಆದ್ರೆ ಅಂದು ಹಿಟ್​ಮ್ಯಾನ್​ಗೆ ಟೆಸ್ಟ್​ ಕ್ರಿಕೆಟ್​ನ ಪಟ್ಟ ಕಟ್ಟಿದ ಪ್ರತಿಫಲವೇ ಟೀಮ್ ಇಂಡಿಯಾ, ಇಂದು ಬೆಸ್ಟ್​ ಪರ್ಫಾಮೆನ್ಸ್​ ನೀಡುವಲ್ಲಿ ಎಡವುತ್ತಿದೆ.

ಕ್ರಿಕೆಟ್​ನ ರಿಯಲ್​​​​​​​​​​​​​​​​​ ಗೇಮ್​ನಲ್ಲಿ ಅಸಲಿ ಲೀಡರ್ ಸ್ಕಿಲ್ಸ್​ ತೋರಿಸಬೇಕಿದ್ದ ರೋಹಿತ್​​​, ಫುಲ್​ ಸ್ಟ್ರೆಂಥ್​ ಟೀಮ್​​​​ನೊಂದಿಗೂ ಸಕ್ಸಸ್​ ಕಾಣೋಕೆ ತಿಣುಕಾಡ್ತಿದ್ದಾರೆ. ಅಷ್ಟೇ ಅಲ್ಲ, ಗೇಮ್​​ಪ್ಲಾನ್, ಸ್ಟ್ರಾಟರ್ಜಿಗಳಲ್ಲೂ ವಿಫಲರಾಗ್ತಿರೋ ರೋಹಿತ್, ಬೌಲರ್​ಗಳ ಮೇಲೆ ಆನ್​ಫೀಲ್ಡ್​ನಲ್ಲೇ ಕೆಂಡಕಾರುತ್ತಿದ್ದಾರೆ. ಇದು ಸಹಜವಾಗೇ ರೋಹಿತ್ ಶರ್ಮಾರ ಕ್ಯಾಪ್ಟನ್ಸಿಯನ್ನ ಪ್ರಶ್ನಿಸುವಂತೆ ಮಾಡಿದೆ. ರೋಹಿತ್ ಬದಲಿಗೆ ರಹಾನೆಗೆ ಪಟ್ಟಬೇಕಿತ್ತು ಎಂಬ ಅಭಿಪ್ರಾಯಗಳೂ ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿವೆ. ಇದು ನಿಜ ಕೂಡ.

ಟೆಸ್ಟ್​ ಕ್ರಿಕೆಟ್​​​​​​​​​​​​​​​​ಗೆ ಬೇಕಿತ್ತು ರಹಾನೆಯಂಥ ಕ್ಯಾಪ್ಟನ್​​

ವಿರಾಟ್​ ಪದತ್ಯಾಗದ ಬಳಿಕ ನಿಜಕ್ಕೂ ಈ ಸ್ಥಾನಕ್ಕೆ ಅರ್ಹ ವ್ಯಕ್ತಿ ಅಜಿಂಕ್ಯಾ ರಹಾನೆ. ಮಿಡಲ್ ಆರ್ಡರ್​ ಬ್ಯಾಟಿಂಗ್ ಜವಾಬ್ದಾರಿಯ ಜೊತೆ ಜೊತೆಗೆ ವೈಸ್​ ಕ್ಯಾಪ್ಟನ್​​ ಆಗಿಯೂ ಪಳಗಿದ್ದ ಮುಂಬೈಕರ್, ವಿರಾಟ್​ ಅಲಭ್ಯತೆಯ ಸಮಯದಲ್ಲಿ ನಾಯಕನಾಗಿಯೂ ಸಕ್ಸಸ್​ ಕಂಡಿದ್ದರು. ಎದುರಾಳಿಯನ್ನು ರೀಡ್ ಮಾಡೋದರಲ್ಲಿ ಪಂಟರ್ ಆಗಿದ್ದ ರಹಾನೆ, ಫೀಲ್ಡ್​ಪ್ಲೇಸ್​ಮೆಂಟ್​, ಬೌಲಿಂಗ್ ಚೇಂಜಸ್​ ಮೂಲಕ ಒತ್ತಡ ಹೇರುತ್ತಿದ್ದರು. ಕೂಲ್ ಆ್ಯಂಡ್ ಕಾಮ್​ ಆಗಿಯೇ ನಾಯಕತ್ವ ನಿಭಾಯಿಸುವ ಮೂಲಕ ಸಕ್ಸಸ್​ಫುಲ್ ಲೀಡರ್ ಎನಿಸಿಕೊಂಡಿದ್ದರು. ಆದ್ರೀಗ ಇಂಥದ್ದೊಂದು ಗುಣವೇ ಟೀಮ್ ಇಂಡಿಯಾ ಕ್ಯಾಪ್ಟನ್​​ನಲ್ಲಿ ಕಾಣದಂತಾಗಿದೆ.

ಟೆಸ್ಟ್​ ಕ್ಯಾಪ್ಟನ್ಸಿಯಲ್ಲಿ ರಹಾನೆಗಿಲ್ಲ ಸೋಲು

ಆಗೊಮ್ಮೆ, ಈಗೊಮ್ಮೆ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, ಟೆಸ್ಟ್​ನಲ್ಲಿ ಸೋಲಿಲ್ಲದ ಸರದಾರ. 6 ಟೆಸ್ಟ್​ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿರೋ ರಹಾನೆ, 4ರಲ್ಲಿ ಗೆಲುವಿನ ದಡ ಸೇರಿಸಿದ್ರೆ. ಇನ್ನುಳಿದ 2 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದ್ದಾರೆ. ಈ ಫಲಿತಾಂಶಗಳಿಂದಲೇ ರಹಾನೆ ಟೆಸ್ಟ್​ಗೆ ಪರ್ಫೆಕ್ಟ್​ ಕ್ಯಾಪ್ಟನ್ ಎಂಬ ಮಾತು ಹೇಳ್ತಿಲ್ಲ. ಇದಕ್ಕೆ ಮೇನ್ ರೀಸನ್​ ಇದೆ. ಅದೇ 2021ರ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸಿರೀಸ್.
ಈ ಸೀರಿಸ್ ನೆನಪಿರಬೇಕು. ಸ್ಟಾರ್ ಆಟಗಾರರ ಇಂಜುರಿ. 36 ರನ್​ಗಳ ಆಲೌಟ್​. ವಿರಾಟ್​ ಕೊಹ್ಲಿಯ ಅಲಭ್ಯತೆ.. ಇದೆಲ್ಲವನ್ನು ಕಂಡಿದ್ದ ದಿಗ್ಗಜರು, ಟೀಮ್ ಇಂಡಿಯಾ ಕ್ಲೀನ್​ಸ್ವೀಪ್ ಮುಖಭಂಗ ಗ್ಯಾರಂಟಿಯ ಭವಿಷ್ಯ ನುಡಿದಿದ್ದರು. ಆದ್ರೆ ನಂತರ ನಾಯಕತ್ವದ ಜವಾಬ್ದಾರಿಯನ್ನ ಹೆಗಲಿಗೇರಿಸಿಕೊಂಡ ರಹಾನೆ, ಯುವ ಪಡೆಯೊಂದಿಗೆ ಬಾರ್ಡರ್​-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಸೆನ್ಸೇಷನ್ ಕ್ರಿಯೇಟ್​ ಮಾಡಿದ್ದರು. ಈ ಟೆಸ್ಟ್ ಸರಣಿ ನೆನೆಪು ನಿಜಕ್ಕೂ ಇಂದಿಗೂ ರೋಮಾಂಚಕರಿ.

ರಹಾನೆಗೆ ಟೆಸ್ಟ್​ ಪಟ್ಟ ಕಟ್ಟದೆ ತಪ್ಪು ಮಾಡ್ತಾ ಬಿಸಿಸಿಐ?

ವೈಸ್​ ಕ್ಯಾಪ್ಟನ್ ಆಗಿದ್ದ ರಹಾನೆ, ಟೆಸ್ಟ್​ ಕ್ರಿಕೆಟ್​ಗೆ ಬೇಕಿದ್ದ ಬ್ಯಾಟಿಂಗ್ ಆಫ್ ಸ್ಟ್ರೈಲ್​ ಜೊತೆಗೆ ನಾಯಕತ್ವದ ಗುಣಗಳು ಇದ್ವು. ಆದ್ರೆ ಅಂದು ಐಪಿಎಲ್​ನ ಸಕ್ಸಸ್​ ರೇಟ್​ ಅನ್ನೇ ಇಂಟರ್​ನ್ಯಾಷನಲ್​ ಲೆವೆಲ್​ ಕ್ರಿಕೆಟ್​ನಲ್ಲಿ ಯೋಚಿಸಿದ್ದ ಬಿಸಿಸಿಐ, ಹಿಟ್​ಮ್ಯಾನ್​ ರೋಹಿತ್​ ಶರ್ಮಾಗೆ ನಾಯಕತ್ವದ ಪಟ್ಟ ನೀಡಿತು. ಇದು ವೈಟ್ ಬಾಲ್​ ಫಾರ್ಮೆಟ್​ಗೆ ಒಕೆ. ಬಟ್ ಟೆಸ್ಟ್​ ಎಂಬ ರಿಯಲ್ ಗೇಮ್​ನಲ್ಲಿ ನಿಜಕ್ಕೂ ಬೇಡವಾಗಬೇಕಿತ್ತು. ಯಾಕಂದ್ರೆ ಹಿಟ್​ಮ್ಯಾನ್ ರೋಹಿತ್, ಟೆಸ್ಟ್​ ಕ್ರಿಕೆಟ್​ನಲ್ಲಿ ಕ್ಯಾಪ್ಟನ್ಸಿಯಾಗಿ ಕಾರ್ಯ ನಿರ್ವಹಿಸಿದಕ್ಕಿಂತ ಇಂಜುರಿಯಿಂದ ಹೊರಗುಳಿದಿದ್ದೇ ಹೆಚ್ಚು. ಇಂಥಹ ವೇಳೆ ರೋಹಿತ್​ಗೆ ಪಟ್ಟ ಕಟ್ಟಿ ತಪ್ಪು ಮಾಡಿದಕ್ಕಿಂತ ಇನ್ನೇನು? ಒಟ್ಬಲ್ಲಿ.. ಅದೇನೇ ಆಗಲಿ.. ಅಂದು ತಪ್ಪು ಮಾಡಿದ್ದ ಬಿಸಿಸಿಐ, ಭವಿಷ್ಯದ ದೃಷ್ಟಿಯಿಂದಾದ್ರೂ ಅತ್ಯುತ್ತಮ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಬೇಕಾದ ಅನಿವಾರ್ಯತೆ ಇದ್ದೇ ಇದೆ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೆಸ್ಟ್ ಕ್ಯಾಪ್ಟನ್ಸಿಯಲ್ಲಿ ರೋಹಿತ್​ಗಿಂತ ಈ ಆಟಗಾರನೇ ಬೆಸ್ಟ್​.. ಪಟ್ಟ ಕಟ್ಟದೇ ದೊಡ್ಡ ತಪ್ಪು ಮಾಡಿದ ಬಿಸಿಸಿಐ..!

https://newsfirstlive.com/wp-content/uploads/2023/06/ROHITH-1.jpg

Load More