ಟೀಮ್​ ಇಂಡಿಯಾ ಮುಖ್ಯ ಕೋಚ್​ಗೆ ಬಿಗ್​ ಶಾಕ್​​; ಗಂಭೀರ್​ ಪವರ್​ ಕಟ್​​ ಮಾಡಿದ ಬಿಸಿಸಿಐ ಬಾಸ್​ಗಳು

author-image
Ganesh Nachikethu
Updated On
ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್​ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?
Advertisment
  • ಬಾರ್ಡರ್​​-ಗವಾಸ್ಕರ್​ ಸರಣಿಯಲ್ಲಿ ಭಾರತ ತಂಡಕ್ಕೆ ಸೋಲು
  • ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಮುನ್ನುಡಿ!
  • ಬಿಸಿಸಿಐ ಬಾಸ್​ಗಳನ್ನ ಕೆರಳಿಸಿದ ಆಸ್ಟ್ರೇಲಿಯಾ ವಿರುದ್ಧ ಸೋಲು

ಬಾರ್ಡರ್​​-ಗವಾಸ್ಕರ್​ ಸರಣಿ ಸೋಲು ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್​ವಾಷ್​ ಮುಖಭಂಗ, ಆಸ್ಟ್ರೇಲಿಯಾದಲ್ಲಿ ಹೀನಾಯ ಸೋಲು ಬಿಸಿಸಿಐ ಬಾಸ್​ಗಳನ್ನ ಕೆರಳಿಸಿದೆ.

ಇತ್ತೀಚೆಗಷ್ಟೇ ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಜೊತೆ ಬಾಸ್​ಗಳು ರಿವ್ಯೂ ಮೀಟಿಂಗ್​ ನಡೆಸಿದ್ರು. ಈಗ ಹೈವೋಲ್ಟೆಜ್​ ಸಭೆಯ ಬಳಿಕ ಹೊಸ ರೂಲ್ಸ್​ ಜಾರಿಗೆ ತರಲು ಬಿಗ್​ಬಾಸ್​ಗಳು ಮುಂದಾಗಿದ್ದಾರೆ.

ಟೀಮ್​ ಇಂಡಿಯಾ ಕ್ರಿಕೆಟರ್ಸ್​ ಫಾರಿನ್​ ಟೂರ್​​ ಹೊರಟ್ರೆ ಸಾಕು. ಪತ್ನಿ, ಮಕ್ಕಳು, ಫ್ಯಾಮಿಲಿ ಎಂಟ್ರಿಗೆ ಬಿಸಿಸಿಐ ಫ್ರಿಡಂ ನೀಡಿತ್ತು. ಮುಕ್ತಾಯವಾದ ಆಸಿಸ್​ ಟೂರ್​ನಲ್ಲೂ ಬಿಗ್​ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ಜಸ್​ಪ್ರಿತ್​ ಬೂಮ್ರಾ, ರಾಹುಲ್​ ಕೂಡ ಪತ್ನಿಯರ ಜೊತೆ ಬ್ಯುಸಿಯಾಗಿದ್ರು.

ಆಟಗಾರರು ಆಟದ ಮೇಲೆ ಗಮನವಹಿಸೋದನ್ನ ಕಡಿಮೆ ಮಾಡಿ, ಟೂರ್​ಗಳಲ್ಲಿ ಫ್ಯಾಮಿಲಿಗಳಿಗೆ ಹೆಚ್ಚು ಸಮಯ ನೀಡೋಕೆ ಶುರುವಿಟ್ಟುಕೊಂಡಿದ್ದು ಬಿಸಿಸಿಐ ಬಾಸ್​ಗಳ ಕಣ್ಣು ಕೆಂಪಾಗಿಸಿದ್ದು, ಸ್ಟ್ರಿಕ್ಟ್​ ರೂಲ್ಸ್​ ಜಾರಿಗೆ ಮುಂದಾಗಿದ್ದಾರೆ. 45ಕ್ಕಿಂತ ಹೆಚ್ಚು ದಿನಗಳ ಟೂರ್​​ ಇದ್ರೆ, 14 ದಿನ ಮಾತ್ರ ಕುಟುಂಬದ ಜೊತೆಗಿರಲು ಅನುಮತಿ ನೀಡಲು ಬಾಸ್​​ಗಳು ತೀರ್ಮಾನಿಸಿದ್ದಾರೆ.

ಗೌತಮ್​ ಗಂಭೀರ್​ ನಡೆಗೆ ಗರಂ

ಕೋಚ್​​ ಆಗಲು ಗಂಭೀರ್​ ಒಪ್ಪಿದ್ದೇ ತಡ, ಕೇಳಿದ್ದಕ್ಕೆಲ್ಲಾ ಬಿಸಿಸಿಐ ಬಾಸ್​ಗಳು ಅಸ್ತು ಎಂದಿದ್ರು. ಎಷ್ಟರಮಟ್ಟಿಗೆ ಅಂದ್ರೆ, ಈ ಹಿಂದೆ ಟೀಮ್​ ಇಂಡಿಯಾದ ಕೋಚ್​ಗೂ ಪರ್ಸನಲ್​ ಮ್ಯಾನೇಜರ್​​ ಇರಲಿಲ್ಲ. ಆದ್ರೀಗ, ಗಂಭೀರ್​ಗೆ ವೈಯಕ್ತಿಕವಾಗಿ ಗೌರವ್​ ಅರೋರ ಎಂಬ ಪರ್ಸನಲ್​ ಮ್ಯಾನೇಜರ್​ ಇದ್ರು. ಇದೀಗ ಬಿಸಿಸಿಐ ಬಾಸ್​ಗಳು ಇದನ್ನೆಲ್ಲಾ ಟೀಮ್​ ಇಂಡಿಯಾದಿಂದ ದೂರ ಇಡುವಂತೆ ಖಡಕ್​ ಸೂಚನೆ ನೀಡಿದ್ದಾರೆ. ಈ ಗೌರವ್​ ಅರೋರಗೆ ಇನ್ಮುಂದೆ ಟೀಮ್​ ಹೋಟೆಲ್​ಗೆ ಎಂಟ್ರಿ ಇಲ್ಲ. ಟೀಮ್​ ಬಸ್​ನಲ್ಲಿ ಟ್ರಾವೆಲ್​ ಮಾಡುವಂತಿಲ್ಲ. ಪಂದ್ಯದ ವೇಳೆ ವಿಐಪಿ ಬಾಕ್ಸ್​ನಲ್ಲಿ ಕೂರುವಂತಿಲ್ಲ ಎಂದು ವಾರ್ನ್​ ಮಾಡಿದ್ದಾರೆ.

ಸಪೋರ್ಟ್​ ಸ್ಟಾಫ್​ಗೆ 3 ವರ್ಷ ಮಾತ್ರ ಅಧಿಕಾರ​.!

ಟೀಮ್​ ಇಂಡಿಯಾದ ಕೆಲವು ಸಪೋರ್ಟ್​​ ಸ್ಟಾಫ್​ಗಳು ಕಳೆದ ಹಲವು ವರ್ಷಗಳಿಂದ ತಂಡದಲ್ಲಿದ್ದಾರೆ. ಅವರ ತಲೆದಂಡಕ್ಕೆ ಕೌಂಟ್​ಡೌನ್​ ಶುರುವಾದಂತಿದೆ. ಸಪೋರ್ಟ್​​ ಸ್ಟಾಫ್​ಗೆ 2 ವರ್ಷ, ಹೆಚ್ಚುವರಿ ಅಂದ್ರೆ, 3 ವರ್ಷ ಅಧಿಕಾರವಧಿ ಫಿಕ್ಸ್​ ಮಾಡಲು ಬಿಗ್​ಬಾಸ್​ಗಳು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಕೆಟ್ಟ ಮೇಲೆ ಬುದ್ದಿ ಕಲಿತ ಮ್ಯಾನೇಜ್ಮೆಂಟ್​​; ಟೀಮ್​ ಇಂಡಿಯಾ ಆಟಗಾರರ ಬಾಲ ಕಟ್​ ಮಾಡಿದ BCCI

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment