newsfirstkannada.com

ಸ್ಪೆಷಲ್ ಕಾಂಟ್ರಾಕ್ಟ್​​ ಹಿಂದೆ BCCI ಮೆಗಾ ಪ್ಲಾನ್.. ಆ ಒಂದು ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ಇದು

Share :

Published March 1, 2024 at 11:20am

  ಭವಿಷ್ಯದ ಟೀಮ್ ಇಂಡಿಯಾಗೆ ಗಟ್ಟಿ ಅಡಿಪಾಯ ಹಾಕಲು ನಿರ್ಧಾರ

  ಬೌಲಿಂಗ್ ಡಿಪಾರ್ಟ್​ಮೆಂಟ್ ಕಟ್ಟುವ ಲೆಕ್ಕಾಚಾರದಲ್ಲಿ ಶ್ರೀಮಂತ ಸಂಸ್ಥೆ

  ಯುವ ವೇಗಿಗಳ ಮೇಲೆ ಇನ್ವೆಸ್ಟ್​ಮೆಂಟ್ ಮಾಡ್ತಿದೆ ಬಿಸಿಸಿಐ

ಟೀಮ್ ಇಂಡಿಯಾದಲ್ಲಿ ಬ್ಯಾಟ್ಸ್​ಮನ್ಸ್ ಇಲ್ವಾ? ಬ್ಯಾಕ್ ರೆಡಿ ಇದೆ. ವಿಕೆಟ್ ಕೀಪರ್​ಗಳು ಇಲ್ವಾ? ಬ್ಯಾಕ್​ ಅಪ್​​ಗೆ ಐದಾರು ಮಂದಿ ರೇಸ್​​ನಲ್ಲಿದ್ದಾರೆ. ಸ್ಪಿನ್ನರ್​ಗಳು ಇಲ್ವಾ..? ಲೆಕ್ಕ ಇಲ್ಲದಷ್ಟು ಮಂದಿ ಇದ್ದಾರೆ. ಆದ್ರೆ, ಬೌಲಿಂಗ್ ವಿಭಾಗಕ್ಕೆ ಬ್ಯಾಕ್​ ಆಫ್ ಯಾರು ಅಂದ್ರೆ ಮಾತ್ರ ಉತ್ತರ ಸಿಗಲಾರದು. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ.

 • ಜಸ್​ಪ್ರೀತ್​ ಬೂಮ್ರಾ : ವಯಸ್ಸು 30 ವರ್ಷ
 • ಮೊಹಮ್ಮದ್ ಶಮಿ : ವಯಸ್ಸು 32 ವರ್ಷ
 • ಮೊಹಮ್ಮದ್ ಸಿರಾಜ್ : ವಯಸ್ಸು 29 ವರ್ಷ
 • ಮುಖೇಶ್ ಕುಮಾರ್ : ವಯಸ್ಸು 30 ವರ್ಷ

ನಮ್ಮ ಫಾಸ್ಟ್​ ಬೌಲರ್​ಗಳಿಗೆ ವಯಸ್ಸಾಗಿದೆ. ಆದ್ರೆ, ಇವ್ರೇ ನಮ್ಮ ಮ್ಯಾಚ್ ವಿನ್ನರ್​ ಬೌಲರ್​ಗಳು. ಆದ್ರೆ, ಈ ಮ್ಯಾಚ್ ವಿನ್ನರ್​​ ಬೌಲರ್​ಗಳ ಸರಾಸರಿ ವಯಸ್ಸೀಗ 30 ವರ್ಷ.. ಇದಕ್ಕೆ ಹೇಳ್ತಿರೋದು ನಮ್ಮ ಫಾಸ್ಟ್​ ಬೌಲರ್​ಗಳಿಗೆ ವಯಸ್ಸಾಯ್ತಾಪ್ಪ ಅಂತಾ. ಮೂವತ್ತರ ವೇಗಿಗಳು ಯಾವಾಗ ಇಂಜುರಿಯಿಂದ ಬ್ರೇಕ್​ ಡೌನ್​ ಆಗ್ತಾರೋ ಅನ್ನೋದೇ ಗೊತ್ತಿಲ್ಲ. ಇದೇ ಆತಂಕದಲ್ಲೇ ಈ ಸಿನೀಯತ್​​ಗಳಿಗೆ ವರ್ಕ್ ಲೋಡ್​ ಮ್ಯಾನೇಜ್​ಮೆಂಟ್ ಅಡಿಯಲ್ಲಿ ವಿಶ್ರಾಂತಿ ನೀಡ್ತಾನೆ ಇದೆ. ಹೀಗಾದ್ರೂ ಇಂಜುರಿ ಮಾತ್ರ ನಿಂತಿಲ್ಲ. ತಂಡಕ್ಕೂ ಹಿನ್ನಡೆಯಾಗಿದ್ದು ತಪ್ತಿಲ್ಲ. ಆದ್ರೀಗ ಇದೆಲ್ಲಕ್ಕೂ ಫುಲ್​ಸ್ಟಾಪ್ ಬೀಳೋ ಕಾಲ ಹತ್ತಿರವಿದೆ.

ಸ್ಟ್ರಾಂಗ್ ಫೌಂಡೇಷನ್​​​ಗೆ ಬಿಸಿಸಿಐನಿಂದ ಮೆಗಾ ಪ್ಲಾನ್..!

ಟೀಮ್ ಇಂಡಿಯಾದಲ್ಲಿ ಡೆಡ್ಲಿ ಫಾಸ್ಟ್​ ಬೌಲರ್​ಗಳಿದ್ದಾರೆ ನಿಜ. ಇವರ ವಯಸ್ಸೇ ಟೀಮ್ ಇಂಡಿಯಾಗೆ ಮಾರಕವಾಗ್ತಿದೆ. ಪ್ರತಿ ಸರಣಿಯಲ್ಲೂ ಒಬ್ಬರಿಲ್ಲ ಅಂದ್ರು, ಒಬ್ಬರು ಇಂಜುರಿ ಆಗ್ತಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಸೆಟ್ ಬ್ಯಾಕ್ ಆಗ್ತಿದೆ. ಇದೇ ಕಾರಣಕ್ಕೀಗ ಬಿಸಿಸಿಐ ಮೆಗಾ ಪ್ಲಾನ್ ರೂಪಿಸಿ, ಯಂಗ್ ಫಾಸ್ಟ್​ ಬೌಲರ್​​ಗಳ ಸೆಟ್​ ಆಫ್ ಪೂಲ್​ನ ರೆಡಿ ಮಾಡಿದೆ. ಆ ಮೂಲಕ ಸ್ಟ್ರಾಂಗ್ ಫೌಂಡೇಶನ್ ಕಟ್ಟಲು ಮುಂದಾಗಿದೆ. ಇದಕ್ಕಾಗಿಯೇ ಯುವ ವೇಗಿಗಳ ಮೇಲೆ ಇನ್ವೆಸ್ಟ್ ಮಾಡ್ತಿದೆ.

ಜಮ್ಮು ಕಾಶ್ಮೀರದ ಮೂಲದ 24ರ ಉಮ್ರನ್ ಮಲಿಕ್ ಹಾಗೂ 27 ವರ್ಷದ ಪಶ್ಚಿಮ ಬಂಗಾಳದ ಆಕಾಶ್ ದೀಪ್, ಕರ್ನಾಟಕದ ವೈಶಾಕ್ ವಿಜಯ್​ ಕುಮಾರ್, 25 ವರ್ಷದ ವಿದ್ವತ್ ಕಾವೇರಪ್ಪ ಸೇರಿದಂತೆ ಡೆಲ್ಲಿ ಮೂಲದ ಮಯಾಂಕ್ ಯಾದವ್​​ಗೆ ಬೆಳಸಲು ಮುಂದಾಗಿದೆ. ಟಿ20 ಸ್ಪೆಷಲಿಸ್ಟ್​ ಬೌಲರ್​ ಆಗಿರುವ ಆರ್ಶ್​ದೀಪ್ ಸಿಂಗ್​​ಗೂ ಬಿಗ್​​ಬಾಸ್​​ಗಳು, ಹೆಚ್ಚು ಹೆಚ್ಚು ರೆಡ್​ ಬಾಲ್ ಕ್ರಿಕೆಟ್ ಆಡುವಂತೆ ಸೂಚಿಸಿದೆ.

ಹಿರಿಯರ ವೇಗಿಗಳ ಬ್ಯಾಕ್ಅಪ್​​​​ ಆಗಿ ಬೆಳೆಸಲು ಪ್ಲಾನ್
ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿನ ಪ್ರತಿಭಾನ್ವಿತ ಯುವ ಬೌಲರ್​ಗಳನ್ನ ಗುರುತಿಸಿರುವ ಬಿಸಿಸಿಐ, ಹಿರಿಯ ವೇಗಿಗಳಾದ ಜಸ್​ಪ್ರೀತ್​ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್​ ಸಿರಾಜ್​ಗೆ ಪರ್ಯಾಯವಾಗಿ ಬೆಳಸಲು ಮುಂದಾಗಿದೆ. ಈ ನಿಟ್ಟಿನಲ್ಲೇ ಈ ಯುವ ಆಟಗಾರರಿಗೆ ಸ್ಪೆಷಲ್ ಕಾಂಟ್ರಾಕ್ಟ್​ ಕೂಡ ನೀಡಿದೆ. ಈ ಯೋಚನೆಯ ಹಿಂದೆ ಟೀಮ್ ಇಂಡಿಯಾದ ಭವಿಷ್ಯ ಲೆಕ್ಕಚಾರವೂ ಅಡಗಿದೆ.

ಭವಿಷ್ಯದ ಟೀಮ್ ಇಂಡಿಯಾಗೆ ಗಟ್ಟಿ ಅಡಿಪಾಯ
ಟೀಮ್ ಇಂಡಿಯಾದ ವೇಗದ ಡಿಪಾರ್ಟ್ಮೆಂಟ್​, Transaction Periodನಲ್ಲಿದೆ. ಈ ನಿಟ್ಟಿನಲ್ಲಿ ಸ್ಟೇಬಲ್ ಫೌಂಡೇಷನ್​ ಹಾಕುತ್ತಿದೆ. ಒಂದು ಸೆಟ್ ಆಫ್ ಪೂಲ್​ನ ರೆಡಿ ಮಾಡಿರುವ ಬಿಸಿಸಿಐ, ಐದತ್ತು ವರ್ಷಗಳ ಕಾಲ ರೆಡ್​ ಬಾಲ್ ಕ್ರಿಕೆಟ್​ನಲ್ಲಿ ಸಕ್ಸಸ್ ಕಾಣುವ ದೂರದೃಷ್ಟಿ ಹೊಂದಿದೆ. ​ಈ ನಿಟ್ಟಿನಲ್ಲಿ ಸದೃಢ ಬೌಲಿಂಗ್ ಲೈನ್​​ ಆಪ್​​ಗೆ ಅಡಿಪಾಯ ನಿರ್ಮಿಸುತ್ತಿದೆ. ಒಟ್ನಲ್ಲಿ! ಅತ್ತ ಟೀಮ್ ಇಂಡಿಯಾದ ಮೇನ್ ವೆಪನ್​ಗಳ ವಯಸ್ಸಾಗ್ತಿದ್ರೆ. ಇತ್ತ ಬಿಸಿಸಿಐ ಪ್ರತಿಭಾನ್ವಿತ ಆಟಗಾರರನ್ನ ಬೆಳಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದು ನಿಜಕ್ಕೂ ಟೀಮ್ ಇಂಡಿಯಾ ಮುಂದಿನ ಸಕ್ಸಸ್​ನಲ್ಲಿ ಮಹತ್ತರ ಪಾತ್ರವನ್ನೇ ವಹಿಸೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ಪೆಷಲ್ ಕಾಂಟ್ರಾಕ್ಟ್​​ ಹಿಂದೆ BCCI ಮೆಗಾ ಪ್ಲಾನ್.. ಆ ಒಂದು ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ಇದು

https://newsfirstlive.com/wp-content/uploads/2023/12/Team-India-11.jpg

Load More