ಕೆಟ್ಟ ಮೇಲೆ ಬುದ್ದಿ ಕಲಿತ ಮ್ಯಾನೇಜ್ಮೆಂಟ್​​; ಟೀಮ್​ ಇಂಡಿಯಾ ಆಟಗಾರರ ಬಾಲ ಕಟ್​ ಮಾಡಿದ BCCI

author-image
Ganesh Nachikethu
Updated On
ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​; ತಂಡದಿಂದಲೇ ಸ್ಟಾರ್​ ಆಲ್​ರೌಂಡರ್​ ಔಟ್​
Advertisment
  • ಟೀಮ್​ ಇಂಡಿಯಾ ಇನ್ಮುಂದೆ ಹಿಂದೆ ಇದ್ದಂಗೆ ಇರಲ್ಲ!
  • ಕೆಟ್ಟ ಮೇಲೆ ಬುದ್ದಿ ಕಲಿತ್ರಾ ಬಿಸಿಸಿಐ ಬಾಸ್​ಗಳು..?
  • ಟೀಮ್​ ಇಂಡಿಯಾದಲ್ಲಿ ಇನ್ಮುಂದೆ ಎಲ್ಲಾ ಫುಲ್​​ ಟೈಟ್

ಟೀಮ್​ ಇಂಡಿಯಾ ಇನ್ಮುಂದೆ ಹಿಂದೆ ಇದ್ದಂಗೆ ಇರಲ್ಲ. ಈ ಹಿಂದೆ ಇದ್ದ ಅತಿಯಾದ ಸ್ವಾತಂತ್ರ್ಯ ಇನ್ಮುಂದೆ ಇರಲ್ಲ. ಟೀಮ್​ ಇಂಡಿಯಾದ ಸೂಪರ್​​ ಸ್ಟಾರ್ಸ್​, ಜೂನಿಯರ್ಸ್​, ಸೀನಿಯರ್ಸ್.. ಅಷ್ಟೇ ಯಾಕೆ? ಹೆಡ್​ ಕೋಚ್​ ಹಾಗೂ ಸಪೋರ್ಟ್​ ಸ್ಟಾಫ್​ಗೆ ಬಿಗ್​​ಬಾಸ್​ಗಳು ಶಾಕ್​ ಕೊಡಲು ಮುಂದಾಗಿದ್ದಾರೆ. ಹೊಸ ಗೈಡ್​​ಲೈನ್ಸ್​ನ ಜಾರಿಗೆ ತಂದು ಫುಲ್​​ ಟೈಟ್​​​ ಮಾಡಲು ತೀರ್ಮಾನಿಸಿದ್ದಾರೆ.

ಕ್ಯಾಪ್ಟನ್​, ಕೋಚ್​ಗೆ ಕ್ಲಾಸ್​.. ಇನ್ಮುಂದೆ ಎಲ್ಲಾ ಫುಲ್​​ ‘ಟೈಟ್’​.!

ಬಾರ್ಡರ್​​-ಗವಾಸ್ಕರ್​ ಸರಣಿ ಸೋಲು ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್​ವಾಷ್​ ಮುಖಭಂಗ, ಆಸ್ಟ್ರೇಲಿಯಾದಲ್ಲಿ ಹೀನಾಯ ಸೋಲು ಬಿಸಿಸಿಐ ಬಾಸ್​ಗಳನ್ನ ಕೆರಳಿ ಕೆಂಡವಾಗಿಸಿದೆ. ಮೊನ್ನೆ ಮೊನ್ನೆ ತಾನೇ ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಜೊತೆ ಬಾಸ್​ಗಳು ರಿವ್ಯೂ ಮೀಟಿಂಗ್​ ನಡೆಸಿದ್ರು. ಇದೀಗ ಹೈವೋಲ್ಟೆಜ್​ ಸಭೆಯ ಬಳಿಕ ಹೊಸ ರೂಲ್ಸ್​ ಜಾರಿಗೆ ತರಲು ಬಿಗ್​ಬಾಸ್​ಗಳು ಮುಂದಾಗಿದ್ದಾರೆ.

ಕಳಪೆ ಪರ್ಫಾಮೆನ್ಸ್​ ನೀಡಿದ್ರೆ ಇನ್ಮುಂದೆ ಸಂಬಳ ಕಟ್​.!

ಪರ್ಫಾಮೆನ್ಸ್​ ನೀಡಲಿ.. ಬಿಡಲಿ.. ಮ್ಯಾಚ್​ ಆಡಿದ್ರೆ ಸಾಕು ಲಕ್ಷ ಲಕ್ಷ ಹಣ ಆಟಗಾರರ ಜೇಬಿಗೆ ಸೇರ್ತಿತ್ತು. ಜಯ್​ ಶಾ ಸೆಕ್ರೆಟರಿ ಆದ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಉತ್ತೇಜನ ನೀಡಲು ತಂದಿದ್ದ ಇನ್ಸೆಂಟೀವ್​ ಸಿಸ್ಟಂ ಆಟಗಾರರ ಖಜಾನೆಗೆ ಹಣದ ಹೊಳೆಯೇ ಹರಿಯುವಂತೆ ಮಾಡಿತ್ತು. ಒಂದು ಸೀಸನ್​ನಲ್ಲಿ ತಂಡ ಆಡಿದ ಶೇಕಡಾ 50ರಷ್ಟು ಪಂದ್ಯ ಆಡಿದವರಿಗೆ ಪಂದ್ಯಕ್ಕೆ 30 ಲಕ್ಷ, ಶೇಕಡಾ 75ಕ್ಕಿಂತ ಹೆಚ್ಚು ಪಂದ್ಯ ಆಡಿದವರಿಗೆ ಪಂದ್ಯಕ್ಕೆ 45 ಲಕ್ಷ ಹೆಚ್ಚುವರಿ ಹಣ ನೀಡಲು ತೀರ್ಮಾಸಲಾಗಿತ್ತು. ಆದ್ರೀಗ, ಈ ಹಣ ಪರ್ಫಾಮ್​ ಮಾಡಿದವರಿಗೆ ಮಾತ್ರ ಸಿಗಲಿದೆ. ಇದಿಷ್ಟೆ ಅಲ್ಲ.. ಅಕೌಂಟ್​ಬಲ್​ ಇರಬೇಕು ಅನ್ನೋ ಕಾರಣಕ್ಕೆ ಮ್ಯಾಚ್​ ಫೀನ ಕೂಡ ಪರ್ಫಾಮೆನ್ಸ್​ ಆಧಾರದಲ್ಲಿ ನೀಡಲು ಬಿಸಿಸಿಐ ಬಾಸ್​ಗಳು ತೀರ್ಮಾನಿಸಿದ್ದಾರೆ. ಅಲ್ಲಿಗೆ ಆಡಿದ್ರೆ ಮಾತ್ರ ಫುಲ್​ ಸಂಬಳ.. ಇಲ್ಲಿದಿದ್ರೆ ಸಂಬಳ ಕಟ್​.!

ಪ್ರವಾಸಕ್ಕೆ ಪತ್ನಿಯರ ಎಂಟ್ರಿಗೂ ಬ್ರೇಕ್​.. ಕಠಿಣ ರೂಲ್ಸ್​.!

ಟೀಮ್​ ಇಂಡಿಯಾ ಕ್ರಿಕೆಟರ್ಸ್​ ಫಾರಿನ್​ ಟೂರ್​​ ಹೊರಟ್ರೆ ಸಾಕು. ಪತ್ನಿ, ಮಕ್ಕಳು, ಫ್ಯಾಮಿಲಿ ಎಂಟ್ರಿಗೆ ಬಿಸಿಸಿಐ ಫ್ರಿಡಂ ನೀಡಿತ್ತು. ಮುಕ್ತಾಯವಾದ ಆಸಿಸ್​ ಟೂರ್​ನಲ್ಲೂ ಬಿಗ್​ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ಜಸ್​ಪ್ರಿತ್​ ಬೂಮ್ರಾ, ರಾಹುಲ್​ ಕೂಡ ಪತ್ನಿಯರ ಜೊತೆ ಬ್ಯುಸಿಯಾಗಿದ್ರು. ಆಟಗಾರರು ಆಟದ ಮೇಲೆ ಗಮನವಹಿಸೋದನ್ನ ಕಡಿಮೆ ಮಾಡಿ, ಟೂರ್​ಗಳಲ್ಲಿ ಫ್ಯಾಮಿಲಿಗಳಿಗೆ ಹೆಚ್ಚು ಸಮಯ ನೀಡೋಕೆ ಶುರುವಿಟ್ಟುಕೊಂಡಿದ್ದು ಬಿಸಿಸಿಐ ಬಾಸ್​ಗಳ ಕಣ್ಣು ಕೆಂಪಾಗಿಸಿದ್ದು, ಸ್ಟ್ರಿಕ್ಟ್​ ರೂಲ್ಸ್​ ಜಾರಿಗೆ ಮುಂದಾಗಿದ್ದಾರೆ. 45ಕ್ಕಿಂತ ಹೆಚ್ಚು ದಿನಗಳ ಟೂರ್​​ ಇದ್ರೆ, 14 ದಿನ ಮಾತ್ರ ಕುಟುಂಬದ ಜೊತೆಗಿರಲು ಅನುಮತಿ ನೀಡಲು ಬಾಸ್​​ಗಳು ತೀರ್ಮಾನಿಸಿದ್ದಾರೆ.

ಗೌತಮ್​ ಗಂಭೀರ್​ ನಡೆಗೆ ಗರಂ.. ಕೋಚ್​ ‘ಪವರ್ ​​ಕಟ್​’​.!

ಕೋಚ್​​ ಆಗಲು ಗಂಭೀರ್​ ಒಪ್ಪಿದ್ದೇ ತಡ, ಕೇಳಿದ್ದಕ್ಕೆಲ್ಲಾ ಬಿಸಿಸಿಐ ಬಾಸ್​ಗಳು ಅಸ್ತು ಎಂದಿದ್ರು. ಎಷ್ಟರಮಟ್ಟಿಗೆ ಅಂದ್ರೆ, ಈ ಹಿಂದೆ ಟೀಮ್​ ಇಂಡಿಯಾದ ಕೋಚ್​ಗೂ ಪರ್ಸನಲ್​ ಮ್ಯಾನೇಜರ್​​ ಇರಲಿಲ್ಲ. ಆದ್ರೀಗ, ಗಂಭೀರ್​ಗೆ ವೈಯಕ್ತಿಕವಾಗಿ ಗೌರವ್​ ಅರೋರ ಎಂಬ ಪರ್ಸನಲ್​ ಮ್ಯಾನೇಜರ್​ ಇದ್ರು. ಇದೀಗ ಬಿಸಿಸಿಐ ಬಾಸ್​ಗಳು ಇದನ್ನೆಲ್ಲಾ ಟೀಮ್​ ಇಂಡಿಯಾದಿಂದ ದೂರ ಇಡುವಂತೆ ಖಡಕ್​ ಸೂಚನೆ ನೀಡಿದ್ದಾರೆ. ಈ ಗೌರವ್​ ಅರೋರಗೆ ಇನ್ಮುಂದೆ ಟೀಮ್​ ಹೋಟೆಲ್​ಗೆ ಎಂಟ್ರಿ ಇಲ್ಲ. ಟೀಮ್​ ಬಸ್​ನಲ್ಲಿ ಟ್ರಾವೆಲ್​ ಮಾಡುವಂತಿಲ್ಲ. ಪಂದ್ಯದ ವೇಳೆ ವಿಐಪಿ ಬಾಕ್ಸ್​ನಲ್ಲಿ ಕೂರುವಂತಿಲ್ಲ ಎಂದು ವಾರ್ನ್​ ಮಾಡಿದ್ದಾರೆ.

ಟೀಮ್​ ಬಸ್​ನಲ್ಲೇ ಟ್ರಾವೆಲ್​.. ಪ್ರತ್ಯೇಕ ಪ್ರಯಾಣಕ್ಕೆ ಬ್ರೇಕ್​.!

ಪತ್ನಿಯರ ಎಂಟ್ರಿಗೆ ಅವಕಾಶವಿದ್ದಿದ್ರಿಂದ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸೋ ವೇಳೆ ಕೆಲ ಆಟಗಾರರು ಪ್ರತ್ಯೇಕವಾಗಿ ಟ್ರಾವೆಲ್​ ಮಾಡ್ತಿದ್ರು. ಇದೀಗ ಒಗ್ಗಟ್ಟಿನ ಮಂತ್ರ ಪಠಿಸಿರೋ ಬಿಸಿಸಿಐ ಇದಕ್ಕೆ ಫುಲ್​ ಸ್ಟಾಫ್​ ಇಡಲು ತೀರ್ಮಾನಿಸಿದೆ. ಎಲ್ಲಾ ಆಟಗಾರರು ಟೀಮ್​ ಬಸ್​ನಲ್ಲೇ ಪ್ರಯಾಣಿಸಬೇಕು. ಪ್ರತ್ಯೇಕ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ಬಿಸಿಸಿಐ ಸೂಚಿಸಿದೆ. ಆಟಗಾರರು ಕುಟುಂಬಸ್ಥರು ಅವದರೇ ಮಾತ್ರ ವೈಯಕ್ತಿಕ ಹಣದಲ್ಲಿ, ಪ್ರತ್ಯೇಕವಾಗಿ ಪ್ರಯಾಣಿಸಬೇಕು ಎಂಬ ಖಡಕ್​ ನಿರ್ಧಾರ ತಳೆದಿದೆ.

ಸಪೋರ್ಟ್​ ಸ್ಟಾಫ್​ಗೆ 3 ವರ್ಷ ಮಾತ್ರ ಅಧಿಕಾರ​.!

ಟೀಮ್​ ಇಂಡಿಯಾದ ಕೆಲವು ಸಪೋರ್ಟ್​​ ಸ್ಟಾಫ್​ಗಳು ಕಳೆದ ಹಲವು ವರ್ಷಗಳಿಂದ ತಂಡದಲ್ಲಿದ್ದಾರೆ. ಅವರ ತಲೆದಂಡಕ್ಕೆ ಕೌಂಟ್​ಡೌನ್​ ಶುರುವಾದಂತಿದೆ. ಸಪೋರ್ಟ್​​ ಸ್ಟಾಫ್​ಗೆ 2 ವರ್ಷ, ಹೆಚ್ಚುವರಿ ಅಂದ್ರೆ, 3 ವರ್ಷ ಅಧಿಕಾರವಧಿ ಫಿಕ್ಸ್​ ಮಾಡಲು ಬಿಗ್​ಬಾಸ್​ಗಳು ತೀರ್ಮಾನಿಸಿದ್ದಾರೆ.

ಇದಿಷ್ಟೇ ಅಲ್ಲ.. ವಿಮಾನದಲ್ಲಿ ಪ್ರಯಾಣಿಸೋ ವೇಳೆ ಆಟಗಾರರ ಲಗೇಜ್ ಕೆಜಿ ಇದ್ರೂ ಬಿಸಿಸಿಐ ಇಷ್ಟು ದಿನ ಹಣ ಪಾವತಿ ಮಾಡ್ತಿತ್ತು. ಇದೀಗ ಬಿಸಿಸಿಐ 150 ಕೆಜಿಯ ಒಳಗಿನ ತೂಕಕ್ಕೆ ಮಾತ್ರ ಹಣ ನೀಡಲಿದೆ. ಅದಕ್ಕೂ ಹೆಚ್ಚಿನ ಲಗೇಜ್​ ಇದ್ರೆ ಆಟಗಾರರೇ ಪಾವತಿ ಮಾಡೋ ರೂಲ್ಸ್​ ತರಲು ಬಿಸಿಸಿಐ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ, ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಮಾತಿನಂತೆ, 2 ಹೀನಾಯ ಮುಖಭಂಗಗಳ ಬಳಿಕ ಬಿಸಿಸಿಐ ಬಾಸ್​ಗಳು ಎಚ್ಚೆತ್ತುಕೊಂಡಂತಿದ್ದಾರೆ. ಆಟಗಾರರು, ಸಪೋರ್ಟ್​ ಸ್ಟಾಫ್​ ಎಲ್ಲರಿಗೆ ನೀಡಿದ್ದ ಅತಿಯಾದ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರೋದು ತಂಡದ ಹಿತದೃಷ್ಟಿಯಿಂದ ಒಳ್ಳೆಯದೇ. ಆದ್ರೆ, ಈ ನಿಯಮಗಳು ಎಷ್ಟರಮಟ್ಟಗೆ ಜಾರಿಯಾಗ್ತಾವೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:Meta Layoff: ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ 3600 ಮಂದಿ; ದೊಡ್ಡ ದೊಡ್ಡ ತಲೆಗಳೇ ಔಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment