newsfirstkannada.com

ಇಂಡಿಯನ್​ ಕ್ರಿಕೆಟ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಬಿಸಿಸಿಐ; ಐಪಿಎಲ್​​ ಯಾವಾಗ ಸ್ಟಾರ್ಟ್​​..?

Share :

Published January 23, 2024 at 4:01pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​​ 17

    ಐಪಿಎಲ್​ ಫ್ಯಾನ್ಸ್​​ಗೆ ಗುಡ್​​ನ್ಯೂಸ್​ ಕೊಟ್ಟ ಬಿಸಿಸಿಐ!

    ಯಾವಾಗಿನಿಂದ ಶುರುವಾಗಲಿದೆ ಗೊತ್ತಾ ಮೆಗಾ ಐಪಿಎಲ್​​?

ಈಗಾಗಲೇ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮಿನಿ ಹರಾಜಿ ಮುಗಿದಿದೆ. ಎಲ್ಲಾ ಐಪಿಎಲ್​ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ಬಲಿಷ್ಠ ಟೀಮ್​ ಕಟ್ಟಿಕೊಂಡಿದ್ದಾರೆ. ಹೇಗಾದ್ರೂ ಮಾಡಿ ಈ ಬಾರಿ ಐಪಿಎಲ್​ ಟ್ರೋಫಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಈ ಹೊತ್ತಲ್ಲೇ ಕ್ರೀಡಾಭಿಮಾನಿಗಳಿಗೆ ಗುಡ್​ನ್ಯೂಸ್​ ಒಂದು ಸಿಕ್ಕಿದೆ.

ಹೌದು, ವುಮೆನ್​​ ಪ್ರೀಮಿಯರ್​ ಲೀಗ್​​​ ಫೆ. 22ನೇ ತಾರೀಕಿನಿಂದ ಮಾ. 17ರವರೆಗೂ ನಡೆಯಲಿದೆ. ಇದಾದ ಬೆನ್ನಲ್ಲೇ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮಾ. 26ನೇ ತಾರೀಕಿನಿಂದ ನಡೆಯಲಿದೆ. ಸುಮಾರು 2 ತಿಂಗಳು ನಡೆಯೋ ಈ ಐಪಿಎಲ್​​ ಜೂನ್​​ ಮೊದಲ ವಾರದ ಒಳಗೆ ಮುಗಿಯಲಿದೆ. ಸದ್ಯ ಬಿಸಿಸಿಐ ಮಾರ್ಚ್​​ 22ರಿಂದ ಮೇ 26ನೇ ತಾರಿಕಿನವರೆಗೂ ಐಪಿಎಲ್​​ ನಡೆಸಬೇಕು ಎಂದು ಚಿಂತಿಸಿದೆ.

ಐಪಿಎಲ್​ ಬೆನ್ನಲ್ಲೇ ಜೂನ್​​ 5ನೇ ತಾರೀಕಿನಿಂದ ಟಿ20 ವಿಶ್ವಕಪ್​ ಶುರುವಾಗಲಿದೆ. ಹೀಗಾಗಿ ಮೇ 26ನೇ ತಾರೀಕಿನ ಒಳಗೆ ಐಪಿಎಲ್​ ಮುಗಿದ್ರೆ ಟೀಂ ಇಂಡಿಯಾಗೆ ಪ್ರಾಕ್ಟೀಸ್​​ ಮಾಡಲು ಒಂದು ವಾರ ಟೈಮ್​ ಸಿಗಲಿದೆ. ಕನಿಷ್ಠ 2 ವಾರ ಆದ್ರೂ ಪ್ರಾಕ್ಟೀಸ್​ ಮಾಡಬೇಕು ಎಂಬುದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್​ ಪ್ಲಾನ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಯನ್​ ಕ್ರಿಕೆಟ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಬಿಸಿಸಿಐ; ಐಪಿಎಲ್​​ ಯಾವಾಗ ಸ್ಟಾರ್ಟ್​​..?

https://newsfirstlive.com/wp-content/uploads/2023/12/IPL-2.jpg

Load More