ಟೀಮ್​ ಇಂಡಿಯಾ ಸ್ಟಾರ್​​ ಬೌಲರ್​​ ಬುಮ್ರಾ ಬಾಳಲ್ಲಿ ಬಿಸಿಸಿಐ ಚೆಲ್ಲಾಟ ಆಡ್ತಿದ್ಯಾ? ಅಸಲಿಗೆ ಏನಾಯ್ತು?

author-image
Ganesh Nachikethu
Updated On
ಟೀಮ್​ ಇಂಡಿಯಾದಿಂದಲೇ ಹೊರಬಿದ್ದ ಸ್ಟಾರ್​ ವೇಗಿ ಬುಮ್ರಾ; ಅಸಲಿಗೆ ಆಗಿದ್ದೇನು?
Advertisment
  • ಟೀಮ್​ ಇಂಡಿಯಾದ ಸ್ಟಾರ್​​ ಪ್ಲೇಯರ್​ ಬುಮ್ರಾ
  • ಬುಮ್ರಾ ಬಾಳಲ್ಲಿ ಬಿಸಿಸಿಐ ಚೆಲ್ಲಾಟ ಆಡ್ತಿದ್ಯಾ..?
  • ಸ್ಟಾರ್​ ವೇಗಿ ವಿಚಾರದಲ್ಲಿ ಬುಮ್ರಾ ಕೇರ್​ಲೆಸ್​​​

ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋತಿರುವ ಟೀಮ್ ಇಂಡಿಯಾ, ಈಗ ಮುಂದಿನ ಚಾಂಪಿಯನ್ಸ್​ ಟ್ರೋಫಿಯತ್ತ ದೃಷ್ಟಿ ನೆಟ್ಟಿದೆ. ಟಿ20 ವಿಶ್ವಕಪ್​ನಂತೆಯೇ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿ ಸಿದ್ಧತೆಯನ್ನೂ ಆರಂಭಿಸಿದೆ. ಇದ್ರ ನಡುವೆಯೇ ಆಘಾತಕಾರಿ ಸುದ್ದಿ ಟೀಮ್ ಇಂಡಿಯಾಗೆ ಬರ ಸಿಡಿಲನಂತೆ ಅಪ್ಪಳಿಸಿದೆ. ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್ ಜಸ್​ಪ್ರೀತ್ ಬುಮ್ರಾ ಆಡೋದು ಅನುಮಾನವಾಗಿದೆ.

ಬಾರ್ಡರ್ ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಜಸ್​​​ಪ್ರೀತ್ ಬುಮ್ರಾ, ಮುಂದಿನ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡೋದು ಅನುಮಾನವಾಗಿದೆ. ಸದ್ಯ ಫುಲ್​ ಫಿಟ್​ ಆಗದ ಬುಮ್ರಾ ಬೆಂಗಳೂರಿನ ಎನ್​ಸಿಎಗೆ ರಿಪೋರ್ಟ್​ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಬ್ಯಾಕ್​ ಇಂಜುರಿಗೆ ತುತ್ತಾದಾಗ ಮೇಜರ್​​ ಬ್ಯಾಕ್​ ಸರ್ಜರಿ ಮಾಡಿದ್ದ ನ್ಯೂಜಿಲೆಂಡ್​ನ ತಜ್ಞ ವೈದ್ಯ ರೋವನ್​ ಅವರನ್ನ ಈಗಾಗಲೇ ಬೂಮ್ರಾ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಫುಲ್​ ಫಿಟ್​ ಆಗಲು ಹೆಚ್ಚಿನ ಸಮಯಾವಕಾಶ ಬೇಕು ಎನ್ನಲಾಗಿದೆ.

ಇಂಗ್ಲೆಂಡ್​ ಸರಣಿಯಿಂದ ಹೊರಗುಳಿಯಲಿರೋ ಬುಮ್ರಾ, ಚಾಂಪಿಯನ್ಸ್​ ಟ್ರೋಫಿಯ ಲೀಗ್​ ಹಂತದ ಪಂದ್ಯಗಳನ್ನ ಬಹುತೇಕ ಅನುಮಾನವೇ! ನಾಕೌಟ್​ ಪಂದ್ಯಗಳಿಗೆ ಲಭ್ಯರಾಗೋ ಸಾಧ್ಯತೆಯಿದೆ. ಪ್ರಮುಖ ಟೂರ್ನಿ ಬುಮ್ರಾ ಅಲಭ್ಯತೆ ಟೀಮ್​ ಇಂಡಿಯಾಗೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಇಂಜುರಿ ಬಿಸಿಸಿಐನ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ. ಜಸ್​ಪ್ರೀತ್ ಬುಮ್ರಾ ಕರಿಯರ್​ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ.

2022ರಿಂದ ಬುಮ್ರಾಗೆ ಕಾಡ್ತಿದೆ ಬೆನ್ನು ನೋವಿನ ಸಮಸ್ಯೆ!

2018ರಿಂದ ಜಸ್​ಪ್ರೀತ್​ ಬುಮ್ರಾಗೆ ಇಂಜುರಿ ಕಾಟ ಇದ್ದೇ ಇದೆ. ಆದ್ರೆ, ಈ ಬ್ಯಾಕ್ ಇಂಜುರಿ ಕಾಣಿಸಿಕೊಂಡಿದ್ದು 2022ರ ಆಗಸ್ಟ್​ನಲ್ಲಿ. ಬೆನ್ನು ನೋವಿನಿಂದ ಬಳಲಿದ ಬುಮ್ರಾ 2022ರ ಏಷ್ಯಾಕಪ್​ನಿಂದ ಹೊರಗುಳಿದ್ರು. ಬಳಿಕ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ 2 ಪಂದ್ಯಗಳನ್ನಾಡಿದ್ರು. 2 ಪಂದ್ಯ ಆಡಿದ ಬೆನ್ನಲ್ಲೇ ಮತ್ತೆ ಬ್ಯಾಕ್ ಇಂಜುರಿ ಕಾಣಿಸಿಕೊಳ್ತು. 2022ರ ಟಿ20 ವಿಶ್ವಕಪ್​​ನಿಂದ ಔಟ್​ ಆದ್ರು. ಅಂತಿಮವಾಗಿ 2023ರಲ್ಲಿ ಬ್ಯಾಕ್ ಸರ್ಜರಿಗೆ ಒಳಗಾದ ಬುಮ್ರಾ, ವಿಶ್ರಾಂತಿಯ ಕಾರಣಕ್ಕೆ 2023ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್​​ ಫೈನಲ್ಸ್​ನಿಂದ ದೂರ ಉಳಿದಿದ್ರು.

2023ರಲ್ಲಿ ಐರ್ಲೆಂಡ್ ಸರಣಿಯೊಂದಿಗೆ ಕಮ್​​​ಬ್ಯಾಕ್ ಮಾಡಿದ ಬುಮ್ರಾ, 2023 ಏಕದಿನ ವಿಶ್ವಕಪ್​ನಲ್ಲಿ ಹಾಗೂ 2024 ಟಿ20 ವಿಶ್ವಕಪ್​ನಲ್ಲಾಡಿ ಮಿಂಚಿದರು. ​ಜೂನ್​ನಲ್ಲಿ ವಿಶ್ವಕಪ್​ ಆಡಿದ ಬಳಿಕ ವಿಶ್ರಾಂತಿಯ ಮೊರೆ ಹೋಗಿದ್ದ ಬುಮ್ರಾ, ಬಾಂಗ್ಲಾ ಹಾಗೂ ನ್ಯೂಜಿಲೆಂಡ್​ ಸರಣಿಯಲ್ಲಿ ಆಡಿದ್ರು. ಇತ್ತೀಚೆಗೆ ಮುಕ್ತಾಯವಾದ ಆಸಿಸ್​ ಪ್ರವಾಸದಲ್ಲಂತೂ ಇಡೀ ತಂಡವನ್ನ ಹೆಗಲಮೇಲೆ ಹೊತ್ತುಕೊಂಡು ಸಾಗಿದ್ರು. ಅದ್ಭುತ ಆಟದಿಂದ ಮಿಂಚಿದ್ರು. ಸತತ ಪಂದ್ಯವನ್ನಾಡಿ ದಣಿದ ಬೆನ್ನಲ್ಲೇ, ಮತ್ತೆ ಬೆನ್ನುನೋವು ಕಾಣಿಸಿಕೊಂಡಿದೆ. ಇದು ಜಸ್​ಪ್ರೀತ್ ಬುಮ್ರಾ ವಿಚಾರದಲ್ಲಿ ಬಿಸಿಸಿಐ ಕೇರ್​ಲೆಸ್​​​​​​ ಆಗಿದ್ಯಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಇದನ್ನೂ ಓದಿ:ಚಾಂಪಿಯನ್ಸ್​ ಟ್ರೋಫಿಗೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಕೈ ಕೊಟ್ಟ ಸ್ಟಾರ್​ ಪ್ಲೇಯರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment