IPL​-2025 ಮೂಲಕ ಬಿಸಿಸಿಐ ಆದಾಯದಲ್ಲಿ ಭಾರೀ ಏರಿಕೆ.. ಈ ವರ್ಷ ಎಷ್ಟು ಸಾವಿರ ಕೋಟಿ ಗಳಿಸಿದೆ..?

author-image
Ganesh
Updated On
ಅಭಿಮಾನಿಗಳ ಕಣಕಣದಲ್ಲೂ ಆರ್​ಸಿಬಿ.. ಆರ್​ಸಿಬಿ.. ಇದರ ಮಾಲೀಕರು ಯಾರು ಗೊತ್ತಾ..?
Advertisment
  • ಬಿಸಿಸಿಐನ ಅತಿ ದೊಡ್ಡ ಆದಾಯದ ಮೂಲ ಐಪಿಎಲ್
  • ಪ್ರಸಾರ ಶುಲ್ಕದ ಮೂಲಕ ಹೆಚ್ಚು ಆದಾಯ ಗಳಿಸುತ್ತದೆ
  • ಜಾಹೀರಾತುದಾರರ ಸಂಖ್ಯೆಯಲ್ಲಿ ಶೇಡಕಾ 27 ರಷ್ಟು ಹೆಚ್ಚಳ

ಐಪಿಎಲ್​-2025ರಲ್ಲಿ ಆರ್​ಸಿಬಿ, ಪಂಜಾಬ್ ಕಿಂಗ್ಸ್​ ಸೋಲಿಸಿ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಇದರೊಂದಿಗೆ ಎರಡು ತಿಂಗಳು ಕಾಲ ನಡೆದ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದೆ. ವಿಜೇತ ತಂಡಗಳು BCCIನಿಂದ ಭರ್ಜರಿ ಬಹುಮಾನ ಪಡೆದವು. ಈ ಮೆಗಾ ಟೂರ್ನಿಯಲ್ಲಿ BCCI ಬರೋಬ್ಬರಿ 20 ಸಾವಿರ ಕೋಟಿಗೂ ಹೆಚ್ಚು ಆದಾಯ ಗಳಿಸಿದೆ ಎಂದು ವರದಿಯಾಗಿದೆ.

ಐಪಿಎಲ್ ಮೂಲಕ ಬಿಸಿಸಿಐಗೆ ಬರುವ ಅತಿದೊಡ್ಡ ಆದಾಯದ ಮೂಲವೆಂದರೆ ಪ್ರಸಾರ ಶುಲ್ಕ. 2025ರ ಐಪಿಎಲ್ ಪ್ರಸಾರ ಹಕ್ಕುಗಳನ್ನು 9,678 ಕೋಟಿಗೆ ಬಿಸಿಸಿಐ ಮಾರಾಟ ಮಾಡಿದೆ. ಅಂದರೆ ಒಂದು ಪಂದ್ಯದಿಂದ ಬಿಸಿಸಿಐಗೆ ಬರುವ ಆದಾಯ 130.7 ಕೋಟಿ ರೂಪಾಯಿ ಎನ್ನಲಾಗಿದೆ. ಈ ಲೀಗ್‌ನ ಪ್ರಸಾರದ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ಒಡೆತನದಲ್ಲಿದ್ದರೆ, ಡಿಜಿಟಲ್ ಹಕ್ಕುಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ವಯಾಕಾಮ್ ಒಡೆತನದಲ್ಲಿದೆ.

ಇದನ್ನೂ ಓದಿ: KL ರಾಹುಲ್, ಕ್ಯಾಪ್ಟನ್​ ಈಶ್ವರನ್ ಭರ್ಜರಿ ಹಾಫ್​​ಸೆಂಚುರಿ.. ಕನ್ನಡಿಗ ಕರುಣ್​ ಔಟ್​!

publive-image

ಜಾಹೀರಾತುದಾರರ ಸಂಖ್ಯೆಯಲ್ಲಿ ಹೆಚ್ಚಳ..

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ.. ಐಪಿಎಲ್ 2025ರಲ್ಲಿ ಜಾಹೀರಾತುದಾರರ ಸಂಖ್ಯೆ 27% ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಟಾಟಾ ಗ್ರೂಪ್ ಮುಂದಿನ 5 ವರ್ಷಗಳ ಕಾಲ ‘ಐಪಿಎಲ್‌ ಟೈಟಲ್ ಪ್ರಾಯೋಜಕತ್ವ’ ಪಡೆದುಕೊಂಡಿದೆ. ಇದಕ್ಕಾಗಿ ಬರೋಬ್ಬರಿ 2500 ಕೋಟಿ ರೂಪಾಯಿಗೆ ಒಪ್ಪಂದ ಆಗಿದೆ. ಅದರ ಪ್ರಕಾರ, ಟಾಟಾ ಗ್ರೂಪ್ ಪ್ರತಿ ಆವೃತ್ತಿಯ ಟೈಟಲ್ ಪ್ರಾಯೋಜಕತ್ವಕ್ಕಾಗಿ 500 ಕೋಟಿ ಹಣ ನೀಡುತ್ತದೆ. ಜೊತೆಗೆ ಬಿಸಿಸಿಐ ಶೇರಿಂಗ್ ಆಧಾರದ ಮೇಲೆ ಮೇಲೆ ಹಲವಾರು ಕಂಪನಿಗಳಿಂದ ಹಣ ಪಡೆಯುತ್ತದೆ.

publive-image

ಬಿಸಿಸಿಐನ ಅತಿ ದೊಡ್ಡ ಆದಾಯದ ಮೂಲ..

ಬಿಸಿಸಿಐ ಪ್ರತಿ ತಂಡದಿಂದ ಕೇಂದ್ರ, ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ ಶೇಕಡಾ 20 ರಷ್ಟು ಪಡೆಯುತ್ತದೆ. ಪರವಾನಗಿ ಆದಾಯದಲ್ಲಿ ಶೇಕಡಾ 12.5 ರಷ್ಟು ಪಾಲು ಪಡೆಯುತ್ತದೆ. 2024 ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತು. 20,686 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಗಳಿಸಿತು. 2023ರ ಆರ್ಥಿಕ ವರ್ಷದಲ್ಲಿಯೂ 16,493 ಕೋಟಿ ರೂಪಾಯಿ ಆದಾಯ ಗಳಿಸಿತ್ತು.

ಇದನ್ನೂ ಓದಿ: ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮ.. ಯಾರು ಈ ಮಾಧವಿ ಲತಾ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment