ಕೋಚ್​​ಗಳ ಮೇಲೆ ಸಿಟ್ಟು ತೀರಿಸಿಕೊಂಡ BCCI.. ಟಿ ದಿಲೀಪ್ ಸೇರಿ ಹಲವರಿಗೆ ಗೇಟ್​ಪಾಸ್​..!

author-image
Ganesh
Updated On
ಶುಭ್​ಮನ್ ಗಿಲ್​​​ಗೆ ಶುಕ್ರದೆಸೆ ಶುರು.. BCCI ಕಡೆಯಿಂದ ಮಹತ್ವದ ನಿರ್ಧಾರ..!
Advertisment
  • ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಸೋಲು
  • ಸೋಲಿಗೆ ಸಹಾಯಕ ಸಿಬ್ಬಂದಿ ಹೊಣೆ ಮಾಡಿದ ಬಿಸಿಸಿಐ
  • ಗಂಭೀರ್ ಕೋಚ್​ ಆದ್ಮೇಲೆ ಸಪೋರ್ಟಿಂಗ್ ಸ್ಟಾಫ್​ನಲ್ಲಿ ಬದಲಾವಣೆ

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಹೀನಾಯ ಸೋಲು ಕಂಡ ಪರಿಣಾಮ ಬಿಸಿಸಿಐ ತನ್ನ ಸಹಾಯಕ ಕೋಚ್​ಗಳ ಮೇಲೆ ಸಿಟ್ಟು ತೀರಿಸಿಕೊಂಡಿದೆ. ಸಹಾಯಕ ಕೋಚ್ ಅಭಿಷೇಕ್ ನಾಯರ್​ ಹಾಗೂ ಫೀಲ್ಡಿಂಗ್ ಕೋಚ್​ ಟಿ.ದಿಲೀಪ್ ಸೇರಿ ಹಲವರಿಗೆ ಗೇಟ್​ಪಾಸ್ ನೀಡಿದೆ.

ಟೀಂ ಇಂಡಿಯಾದಲ್ಲಿದ್ದ ಕೆಲವು ಸಪೋರ್ಟಿಂಗ್ ಸ್ಟಾಫ್​​ಗೆ ಬೈಬೈ ಹೇಳಿದೆ. ಕೆಲವು ತಿಂಗಳ ಹಿಂದಷ್ಟೇ ಟೀಂ ಇಂಡಿಯಾದ ಸಹಾಯ ಕೋಚ್ ಆಗಿ ಅಭಿಷೇಕ್ ನಾಯರ್​​ ನೇಮಕ ಮಾಡಿಕೊಂಡಿತ್ತು. ಇದೀಗ ಅವರಿಗೂ ಕೊಕ್ ನೀಡಿದೆ. ಅಲ್ಲದೇ ಜನಪ್ರಿಯ ಫೀಲ್ಡಿಂಗ್ ಕೋಚ್ ಟಿ.ದಿಲೀಪ್, ಕಂಡಿಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನೂ ಕೈಬಿಟ್ಟಿದೆ.

ಇದನ್ನೂ ಓದಿ: ಸೂಪರ್ ಓವರ್​ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!

ರಾಹುಲ್ ದ್ರಾವಿಡ್ ಕೋಚ್ ಅವಧಿ ಮುಗಿದ ಬೆನ್ನಲ್ಲೇ ಬಿಸಿಸಿಐ, ಟೀಂ ಇಂಡಿಯಾಗೆ ಹೊಸ ಕೋಚ್​ ನೇಮಕ ಮಾಡಿಕೊಂಡಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ. ಗಂಭೀರ್ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ, ಸಪೋರ್ಟಿಂಗ್ ಟೀಂನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರು. ಐಪಿಎಲ್ ಫ್ರಾಂಚೈಸಿಯ ಕೋಲ್ಕತ್ತ ನೈಟ್ ರೈಡರ್ಸ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಯರ್, ರಿಯಾನ್ ಟೇನ್, ಡೊಸ್ಚೇಟ್ ಮತ್ತು ಮೊರ್ನೆ ಮೊರ್ಕೆಲ್ ಅವರನ್ನು ಸೇರಿಕೊಂಡಿದ್ದರು.

ಇದನ್ನೂ ಓದಿ: ಮೂವರು ಬಿಗ್​ ಸ್ಟಾರ್​ ಮೇಲೆ RCB ಟಾರ್ಗೆಟ್.. ಇಲ್ಲದಿದ್ರೆ ಪಂಜಾಬ್ ವಿರುದ್ಧ ಗೆಲುವು ಕಷ್ಟ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment