Advertisment

ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!

author-image
Ganesh
Updated On
ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!
Advertisment
  • ಎಲ್ಲಾ ರಾಜ್ಯಗಳ ಕ್ರಿಕೆಟ್​ ಸಂಸ್ಥೆಗೆ ಬಿಸಿಸಿಐ ನೋಟಿಸ್
  • ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮ ಇರಲ್ಲ
  • ಐಪಿಎಲ್​ 2025ರಲ್ಲಿ ಈ ನಿಯಮ ಮುಂದುವರಿಯುತ್ತೆ

ಇಂಪ್ಯಾಕ್ಟ್ ಪ್ಲೇಯರ್​​ ರೂಲ್ಸ್ ರದ್ದುಗೊಳಿಸುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸಿದೆ. ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಅನ್ವಯ ಆಗುವುದಿಲ್ಲ ಎಂದು ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ನೋಟಿಸ್ ಕಳುಹಿಸಿದೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ರೂಲ್ಸ್​ ಮುಂದುವರಿಯಲಿದೆ.

Advertisment

ಪ್ರಸ್ತುತ ದೇಶೀಯ ಕ್ರಿಕೆಟ್​ನಿಂದ ಇಂಪ್ಯಾಕ್ಟ್ ಪ್ಲೇಯರ್​ ರೂಲ್ಸ್ ತೆಗೆದು ಹಾಕಲು ಬಿಸಿಸಿಐ ನಿರ್ಧರಿಸಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ನಂತರ ಅದನ್ನು ಐಪಿಎಲ್‌ನಲ್ಲಿ ಜಾರಿಗೆ ತರಲಾಯಿತು. ಕಳೆದ ಐಪಿಎಲ್ ಋತುವಿನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಟಾಪ್ ಆಟಗಾರರು ಕೂಡ ಈ ನಿಯಮವನ್ನು ವಿರೋಧಿಸಿದ್ದರು.

ಇದನ್ನೂ ಓದಿ:ಬರೋಬ್ಬರಿ 191 ರನ್​ ಚಚ್ಚಿ ದೊಡ್ಡ ಸಿಗ್ನಲ್​ ಕೊಟ್ಟ ಯುವ ಬ್ಯಾಟರ್​​; ಬಿಸಿಸಿಐಗೆ ಕೊಟ್ರು ಖಡಕ್​ ವಾರ್ನಿಂಗ್​​

ಕಳೆದ ಋತುವಿನಲ್ಲಿ ಮೊಹಮ್ಮದ್ ಸಿರಾಜ್.. ಈ ನಿಯಮದಿಂದ ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಏನೂ ಉಳಿದಿಲ್ಲ ಎಂದಿದ್ದರು.  ಆಲ್‌ರೌಂಡರ್ ಆಟಗಾರರ ವೃತ್ತಿಜೀವನ ಹಾಳುಮಾಡುವ ಉದ್ದೇಶ ಎಂಬ ಟೀಕೆಯೂ ಬಂದಿತ್ತು. ಇದೀಗ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ದೇಶೀಯ ಕ್ರಿಕೆಟ್‌ನಿಂದ ತೆಗೆದುಹಾಕಲಾಗಿದೆ. ಐಪಿಎಲ್ 2025ರ ನಂತರವೂ ಲೀಗ್‌ನಲ್ಲಿ ಮುಂದುವರಿಯುತ್ತದೆಯೇ ಎಂಬುದು ಕುತೂಹಲಕಾರಿ ಆಗಿದೆ.

Advertisment

ಇದನ್ನೂ ಓದಿ:ಮತ್ತೊಂದು ತಪ್ಪು ಮಾಡಿದ ಬಿಸಿಸಿಐ.. ಬಟಾ ಬಯಲಾಯ್ತು ಬಿಸಿಸಿಐನ ಇಬ್ಬಗೆಯ ನೀತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment